ಬಿಎಸ್‌ವೈ, ರೆಡ್ಡಿ ಬ್ರದರ್ಸ್, ಎಚ್‌ಡಿಕೆ ಎಲ್ಲರ ವಿರುದ್ಧ ನಾನೊಬ್ಬನೆ: ಸಿಎಂ
ಬಾದಾಮಿ, ಏಪ್ರಿಲ್ 26: ಯಡಿಯೂರಪ್ಪ, ರೆಡ್ಡಿ ಸಹೋದರರು ಮತ್ತು ಕುಮಾರಸ್ವಾಮಿ ಒಟ್ಟು ಸೇರಿ ಸಿದ್ದರಾಮಯ್ಯ ವಿರುದ್ಧ ನಿಂತಿರುವ ಚುನಾವಣೆ ಇದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಇತರ ಪಕ್ಷಗಳ ಮುಖಂಡರು ನನ್ನನ್ನು ಸೋಲಿಸಲು ಒಟ್ಟಾಗಿದ್ದಾರೆ ಆದರೆ ನನ್ನ ಗೆಲುವು ನಿಶ್ಚಿತ ಎಂದು ಅವರು ಆತ್ಮವಿಶ್ವಾಸದಿಂದ ನುಡಿದರು.
My take on Chalukya king Pulakeshi II of Badami, Paucity of strong local leaders in BJP, ‘North Indian Imports’, Kannada Swabhimana & a BJP campaign devoid of real issues in #KarnatakaElection2018.#CongressMathomme pic.twitter.com/V9cVP4F6yN
— Siddaramaiah (@siddaramaiah) April 26, 2018
ನನ್ನ ವಿರುದ್ಧ ಪ್ರಚಾರಕ್ಕೆ ಯೋಗಿ ಆದಿತ್ಯಾನಾಥರನ್ನು ಕರೆಸುತ್ತಿದ್ದಾರೆ, ಆದರೆ ಅವರು ತಮ್ಮ ಸ್ವಂತ ಕ್ಷೇತ್ರದಲ್ಲೇ ಗೆಲವು ಧಕ್ಕಿಸಿಕೊಳ್ಳಲಾಗಲಿಲ್ಲ, ಇನ್ನು ಇಲ್ಲಿ ಬಂದು ಏನು ಮಾಡಲು ಸಾಧ್ಯ ಎಂದು ಸಿದ್ದರಾಮಯ್ಯ ಅವರು ವ್ಯಂಗ್ಯ ಮಾಡಿದರು.

ಯಡಿಯೂರಪ್ಪ ಜೈಲಿಗೆ ಹೋಗಿದ್ದಾರೆ ಅವರನ್ನು ಜನ ಒಪ್ಪುವುದಿಲ್ಲವೆಂಬ ಕಾರಣಕ್ಕೆ ಬಿಜೆಪಿ ಉತ್ತರ ಭಾರತದಿಂದ ಮೋದಿ, ಅಮಿತ್ ಶಾ, ಯೋಗಿ ಆದಿತ್ಯಾನಾಥರನ್ನು ಆಮದು ಮಾಡಿಕೊಳ್ಳುತ್ತಿದೆ ಆದರೆ ನಾನು ಇಲ್ಲಿನವನು, ಹೆಮ್ಮೆಯ ಕನ್ನಡಿಗ ಉತ್ತರ ಭಾರತದವರನ್ನು ನಮ್ಮ ಜನ ಸಾರಾಸಗಟಾಗಿ ತಿರಸ್ಕರಿಸುತ್ತಾರೆ ಎಂದಿದ್ದಾರೆ.
ಬಿಜೆಪಿ ಕೇವಲ ಸುಳ್ಳು ಹೇಳುತ್ತದೆಯಷ್ಟೆ, ಸತ್ಯವನ್ನು ಒಪ್ಪಿಕೊಳ್ಳದೆ ಕೇವಲ ಅಪಪ್ರಚಾರ ಮಾಡಿ ಜನರ ದಿಕ್ಕು ಪ್ರಯತ್ನದಲ್ಲಿ ಅವರು ನಿರತರಾಗಿದ್ದಾರೆ ಎಂದ ಸಿದ್ದರಾಮಯ್ಯ ಅವರು, ನಾಡಿನಲ್ಲಿ ಸರ್ಕಾರದ ಪರ ಜನರಿಗೆ ಉತ್ತಮ ಅಭಿಪ್ರಾಯವಿದೆ, ಆಡಳಿದ ವಿರೋಧಿ ಅಲೆ ಇಲ್ಲ ಎಂದರು.












Click it and Unblock the Notifications