ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ: ಮೃತ ಅಭಿಮಾನಿ ಮನೆಗೆ ಸಿದ್ದರಾಮಯ್ಯ ಭೇಟಿ, ಪಾದಯಾತ್ರೆಗೆ ಚಾಲನೆ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಆಗಸ್ಟ್‌ 10: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯಲ್ಲಿ ಮಾಜಿ ಸಿಎಂ, ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ಬುಧವಾರ ಬೆಳಗ್ಗೆ 10:30ಕ್ಕೆ ಆರಂಭವಾಗಲಿರುವ ಪಾದಯಾತ್ರೆಗೆ ಸಿದ್ದರಾಮಯ್ಯ ಚಾಲನೆ ಕೊಡಲಿದ್ದು, ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಬಾದಾಮಿ ಪಟ್ಟಣದ ಎಪಿಎಂಸಿಯಿಂದ ಪ್ರಾರಂಭ ಆಗಲಿರುವ ಪಾದಯಾತ್ರೆ ಸುಮಾರು 3 ಕಿ.ಮೀ ದೂರದ ಬಾಗಲಕೋಟೆ ರಸ್ತೆಯಲ್ಲಿರುವ ಹೊಸಗೌಡರ ಕಲ್ಯಾಣ ಮಂಟಪದವರೆಗೆ ಸಾಗಲಿದೆ.

ಮೈಸೂರು ವಿಶ್ವವಿದ್ಯಾಲಯ ಟಾಪರ್‌ಗಳಿಗೆ ಸಿದ್ದರಾಮಯ್ಯ ಹೆಸರಿನ ಚಿನ್ನದ ಪದಕಮೈಸೂರು ವಿಶ್ವವಿದ್ಯಾಲಯ ಟಾಪರ್‌ಗಳಿಗೆ ಸಿದ್ದರಾಮಯ್ಯ ಹೆಸರಿನ ಚಿನ್ನದ ಪದಕ

ನಂತರ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಬಹಿರಂಗ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಬಾಗಲಕೋಟೆ ನಗರಕ್ಕೆ ಸಿದ್ದರಾಮಯ್ಯ ಹೋಗಲಿದ್ದಾರೆ. ಈ ವೇಳೆ ಬಾಗಲಕೋಟೆ ನಗರದ ಕೆರೂಡಿ ಆಸ್ಪತ್ರೆಗೆ ಭೇಟಿ ನೀಡಿ, ಸಿದ್ದರಾಮೋತ್ಸವದಲ್ಲಿ ಭಾಗಿಯಾಗಲು ಹೊರಟಿದ್ದ ವೇಳೆ ಅಪಘಾತ ಸಂಭವಿಸಿ ಗಾಯಗೊಂಡಿದ್ದ ಮುಧೋಳ ತಾಲ್ಲೂಕಿನ ಹಿರೆ ಆಲಗುಂಡಿ ಗ್ರಾಮದ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.

Siddaramaiah will Meet follower family in Badami,who died Road accident

ಆಸ್ಪತ್ರೆ ಭೇಟಿ ಬಳಿಕ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮಕ್ಕೆ ಸಿದ್ದರಾಮಯ್ಯ ಪ್ರಯಾಣ ಮಾಡಲಿದ್ದಾರೆ. ಸಿದ್ದರಾಮೋತ್ಸವಕ್ಕೆ ಹೋಗುವ ವೇಳೆ ಅಪಘಾತ ಸಂಭವಿಸಿ ಸಾವಿಗೀಡಾದ ಚಿಕ್ಕಾಲಗುಂಡಿಯ ಮೃತ ಪ್ರಕಾಶ್ ಬಡಿಗೇರ್ ಮನೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೃತ ಪ್ರಕಾಶ ಕುಟುಂಬಸ್ಥರಿಗೆ ಸಾಂತ್ವನ, ಧೈರ್ಯ ಹೇಳಲಿದ್ದಾರೆ.

ಸಿದ್ದರಾಮೋತ್ಸವಕ್ಕೆ ಬರುವಾಗ ಅಪಘಾತದಲ್ಲಿ ಅಭಿಮಾನಿ ಸಾವು: ಸಿದ್ದರಾಮಯ್ಯ ಸಂತಾಪಸಿದ್ದರಾಮೋತ್ಸವಕ್ಕೆ ಬರುವಾಗ ಅಪಘಾತದಲ್ಲಿ ಅಭಿಮಾನಿ ಸಾವು: ಸಿದ್ದರಾಮಯ್ಯ ಸಂತಾಪ

ಆಗಸ್ಟ್ 2ರಂದು ಮುಧೋಳ ತಾಲ್ಲೂಕಿನ ಹಿರೆ ಆಲಗುಂಡಿ ಗ್ರಾಮದಿಂದ ಹೊರಟಿದ್ದ ಕ್ರೂಷರ್ ಬಾದಾಮಿ ತಾಲ್ಲೂಕಿನ ಹೂಲಗೇರಿ ಬಳಿ ಪಲ್ಟಿಯಾಗಿತ್ತು. ಈ ವೇಳೆ ಸ್ಥಳದಲ್ಲಿಯೇ ಚಾಲಕ ಪ್ರಕಾಶ್ ಮೃತಪಟ್ಟಿದ್ದರೆ, ಏಳೆಂಟು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸಂಜೆ 6ಕ್ಕೆ ಚಿಕ್ಕಾಲಗುಂಡಿಯಿಂದ ಸಿದ್ದರಾಮಯ್ಯ ರಸ್ತೆ ಮೂಲಕ ಹುಬ್ಬಳಿಗೆ ಪ್ರಯಾಣಿಸಲಿದ್ದು, ಹುಬ್ಬಳ್ಳಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

English summary
Former Chief Minister Siddaramaiah will visit the house of the Congress worker who died in a road accident while coming to siddaramotsava celebrations in Davangere held on August 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X