ಬಾದಾಮಿಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ, ಹಲವು ಕಾರ್ಯಕ್ರಮಗಳಲ್ಲಿ ಭಾಗಿ

ಬಾದಾಮಿ, ಸೆಪ್ಟೆಂಬರ್ 26: ರಾಜಕೀಯ ಮುಖಭಂಗದಿಂದ ಕಾಪಾಡಿದ ಬಾದಾಮಿ ಕ್ಷೇತ್ರಕ್ಕೆ ನಾಳೆ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದು, ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿದ್ದರಾಮಯ್ಯ ಅವರು ಯೂರೋಪ್ ಪ್ರವಾಸಕ್ಕೆ ಮುಂಚೆ ಬಾದಾಮಿಗೆ ಭೇಟಿ ನೀಡಿದ್ದರು ಅದಾದ ನಂತರ ಈಗ ಮತ್ತೆ ಬಾದಾಮಿಗೆ ಭೇಟಿ ನೀಡುತ್ತಿದ್ದಾರೆ. ಚುನಾವಣೆ ಮುಗಿದ ನಂತರ ಇದು ಅವರ ಮೂರನೇ ಭೇಟಿ ಆಗಿದೆ.

ನಾಳೆ (ಸೆಪ್ಟೆಂಬರ್‌ 27) ಬೆಳಿಗ್ಗೆ ಬೆಂಗಳೂರಿನಿಂದ ವಿಮಾನದಲ್ಲಿ ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ಬಾದಾಮಿಗೆ ತೆರಳುವ ಸಿದ್ದರಾಮಯ್ಯ 11 ಗಂಟೆಗೆ ಶಾಸಕರ ಗೃಹ ಕಚೇರಿಯನ್ನು ಉದ್ಘಾಟನೆ ಮಾಡಲಿದ್ದಾರೆ. 11:30ಕ್ಕೆ ಪುರಸಭೆಯ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

Siddaramaiah visiting his costituency Badami on September 27

ಮಧ್ಯಾಹ್ನ ಮೂರು ಗಂಟೆಗೆ ಸಾರ್ವಜನಿಕರ ಅವಹಾಲು ಸ್ವೀಕಾರ ಮಾಡಲಿರುವ ಸಿದ್ದರಾಮಯ್ಯ ಅದರ ನಂತರ ಸಂಜೆ 5 ಗಂಟೆಗೆ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಆ ನಂತರ ನಾಳೆ ರಾತ್ರಿ ಬಾದಾಮಿಯಲ್ಲೇ ಅವರು ವಾಸ್ತವ್ಯ ಹೂಡಲಿದ್ದಾರೆ.

ಸೆಪ್ಟೆಂಬರ್ 28ರಂದು ಬಾದಾಮಿ ತಾಲ್ಲೂಕಿನ ಕೇರೂರಿಗೆ ಭೇಟಿ ನೀಡಲಿದ್ದು, ಪಂಚಾಯಿತಿ ಸದಸ್ಯರ ಅಭಿನಂದನಾ ಸ್ವೀಕಾರ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ನಂತರ ಅದೇ ಪಟ್ಟಣದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಲಿದ್ದಾರೆ.

ಕೆರೂರಿನಲ್ಲೇ 1 ಗಂಟೆಗೆ ಸಾರ್ವಜನಿಕರಿಂದ ಅವಹಾಲು ಸ್ವೀಕರಿಸಲಿದ್ದಾರೆ. ಮೂರು ಗಂಟೆಗೆ ಬಾದಾಮಿಯಿಂದ ಗದಗ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ವಿರುದ್ಧ ಸೋತಿದ್ದ ಸಿದ್ದರಾಮಯ್ಯ ಅವರು, ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ಧ ಅಲ್ಪ ಮತದ ಅಂತರದಿಂದ ಗೆದ್ದು ರಾಜಕೀಯ ಮುಖಭಂಗದಿಂದ ಬಚಾವ್ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+