• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಳ್ಳಿ ಹೋಟೆಲ್ ಊಟ ಸವಿದ ಸಿದ್ದರಾಮಯ್ಯ, ಫೋಟೋ ವೈರಲ್

|
   ಸಿದ್ದರಾಮಯ್ಯನವರ ಹೊಸ ಫೋಟೋ ವೈರಲ್ | Oneindia Kannada

   ಬಾಗಲಕೋಟೆ, ಆಗಸ್ಟ್ 22 : ಮೂರು ದಿನಗಳ ಕಾಲ ತವರು ಕ್ಷೇತ್ರ ಬಾದಾಮಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ ಮಾಡಿದ್ದಾರೆ. ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರದ ಭೇಟಿಯ ಫೋಟೋವೊಂದು ವೈರಲ್ ಆಗಿದೆ.

   ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಳ್ಳಿಯ ಹೋಟೆಲ್‌ಗೆ ಭೇಟಿ ಕೊಟ್ಟು ಊಟ ಸವಿದ ಫೋಟೋ ವೈರಲ್ ಆಗಿದೆ. ಮಾಜಿ ಸಚಿವ ಎಸ್. ಆರ್. ಪಾಟೀಲ್, ಎಚ್. ವೈ. ಮೇಟಿ ಸಹ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆಗಿದ್ದರು.

   ಬಾದಾಮಿಯಲ್ಲಿ ಸಿದ್ದರಾಮಯ್ಯ: ಪ್ರವಾಹ ಸಂತ್ರಸ್ಥರ ಅವಹಾಲು ಸ್ವೀಕಾರ

   ಮಲಪ್ರಭಾ ನದಿಯ ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದ ಬಾದಾಮಿ ತಾಲೂಕಿನ ಬೇಲೂರು ಗ್ರಾಮಕ್ಕೆ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದರು. ಮಧ್ಯಾಹ್ನ ಗ್ರಾಮದ ರಸ್ತೆ ಬದಿಯ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಮತ್ತು ಇತರ ನಾಯಕರ ಜೊತೆ ಅವರು ಊಟ ಸವಿದಿದ್ದಾರೆ.

   ಆಪರೇಷನ್ ಕಮಲ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ: ಸಿದ್ದರಾಮಯ್ಯ

   ಮತ್ತೊಂದು ಗ್ರಾಮದ ಪ್ರವಾಸಕ್ಕೆ ಹೋಗುವ ಮುನ್ನ ಸಿದ್ದರಾಮಯ್ಯ ಊಟ ಸವಿದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಮುಖ್ಯಮಂತ್ರಿಗಳ ಸರಳತೆಯನ್ನು ಹಲವರು ಶ್ಲಾಘಿಸಿದ್ದಾರೆ.

   ಯಡಿಯೂರಪ್ಪಗೆ ಮೋದಿ ಕಂಡರೆ ಭಯ: ಸಿದ್ದರಾಮಯ್ಯ

   ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಿದ್ದರಾಮಯ್ಯ ಊಟ ಮಾಡುತ್ತಿರುವ 2 ಪೋಟೋಗಳನ್ನು ಟ್ವೀಟ್ ಮಾಡಿದ್ದಾರೆ. "ಹಳ್ಳಿ ಹೋಟೆಲ್ ಊಟದ ರುಚಿ, ಹರಯದ ದಿನಗಳ‌ ಹಳ್ಳಿ ನೆನಪುಗಳನ್ನು ಚಪ್ಪರಿಸುವಂತೆ ಮಾಡ್ತು" ಎಂದು ಹೇಳಿದ್ದಾರೆ.

   English summary
   Former CM of Karnataka and Badami MLA Siddaramaiah photo viral. He visited for village hotel for lunch. Siddaramaiah also tweeted the photo.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X