ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಲಿನ ಭೀತಿಯಿಂದ ಬದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ: ಬಿಎಸ್ ವೈ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

Recommended Video

IMA ವಂಚನೆಗೆ ಮೈಸೂರಿನಲ್ಲಿ ಒಂದು ಬಲಿ..!

ಬಾಗಲಕೋಟೆ, ಏಪ್ರಿಲ್ 13: ಸೋಲಿನ ಭೀತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾಗುತ್ತಿದ್ದಾರೆ. ಜನರು ಎರಡೂ ಕ್ಷೇತ್ರದಲ್ಲಿ ಅವರನ್ನು ಸೋಲಿಸುತ್ತಾರೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಜಾತಿ ವಿಷ ಬೀಜ ಬಿತ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹೊರಟಿರುವ ಹಾಗೂ ಕೊಲೆಗಡುಕ ಸರ್ಕಾರವನ್ನು ಬೇರು ಮಟ್ಟದಿಂದ‌ ಕಿತ್ತು ಹಾಕಲು ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದರು.3

ಅಗ್ನಿಪರೀಕ್ಷೆ ಗೆದ್ದು, ವಿರೋಧಿಗಳಿಗೆ ಸೆಡ್ಡು ಹೊಡೆಯುತ್ತಾರಾ ಸಿದ್ದು?ಅಗ್ನಿಪರೀಕ್ಷೆ ಗೆದ್ದು, ವಿರೋಧಿಗಳಿಗೆ ಸೆಡ್ಡು ಹೊಡೆಯುತ್ತಾರಾ ಸಿದ್ದು?

ಮುಧೋಳದಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, "224 ಕ್ಷೇತ್ರದಲ್ಲಿ ಈಗಾಗಲೇ ಪ್ರವಾಸ ಮಾಡಿದ್ದು, ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ," ಎಂದರು.

BS Yeddyurappa

ಉತ್ತರ ಪ್ರದೇಶದ ಮಾದರಿಯಲ್ಲೇ ರಾಜ್ಯದಲ್ಲಿಯೂ ಫಲಿತಾಂಶ ಬರಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಅಮಿತ್ ಶಾ ಅವರು ತೊಟ್ಟ ಪಣ ನಿಶ್ಚಿತವಾಗಿ ಯಶಸ್ಸು ಕಾಣಲಿದೆ ಎಂದರು. ಹಿಂದೆ ಚುನಾವಣೆ ಘೋಷಣೆ ಆಗುವ ಮುನ್ನ ರಾಹುಲ್ ಗಾಂಧಿ ಅವರನ್ನು ಕರೆಸಿ ಸಭೆ ನಡೆಸಿದಾಗ ಸಾವಿರಾರು ಜನ ಸೇರುತ್ತಿದ್ದರು. ಆಗ ಸರ್ಕಾರಿ ಕಾರ್ಯಕ್ರಮ ಎಂದು ಜನರು ಬರುತ್ತಿದ್ದರು. ಈಗ ಅವರ ಸಭೆಗೆ ಜನರೇ ಸೇರುತ್ತಿಲ್ಲ ಎಂದರು.

ಇನ್ನು , "ಸಮೀಕ್ಷೆ ಆಧಾರದ ಮೇಲೆ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ನನ್ನ ಚಿಕ್ಕಪ್ಪ, ಸಹೋದರನಿಗೆ ಟಿಕೆಟ್ ಸಿಗುವುದಿಲ್ಲ. ಎಲ್ಲವೂ ಸರ್ವೆ ಮೇಲೆ ನಿರ್ಧಾರವಾಗಲಿದೆ. ಯಾರೂ ಅಸಮಾಧಾನಪಟ್ಟುಕೊಳ್ಳಬಾರದು," ಎಂದು ಯಡಿಯೂರಪ್ಪ ಹೇಳಿದರು.

ಬಾದಾಮಿಯನ್ನು ಸಿದ್ದರಾಮಯ್ಯಗೆ ಚಿಮ್ಮನಕಟ್ಟಿ ಬಿಟ್ಟು ಕೊಟ್ಟಿದ್ದೇಕೆ?ಬಾದಾಮಿಯನ್ನು ಸಿದ್ದರಾಮಯ್ಯಗೆ ಚಿಮ್ಮನಕಟ್ಟಿ ಬಿಟ್ಟು ಕೊಟ್ಟಿದ್ದೇಕೆ?

ಯುದ್ಧಕ್ಕೆ ಮೊದಲೇ ಶಸ್ತ್ರ ತ್ಯಾಗ

ತಮ್ಮ ಸ್ವ೦ತ ಕ್ಷೇತ್ರ ಚಾಮು೦ಡೇಶ್ವರಿ ಬಿಟ್ಟು ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಿರುವ ಸಿಎ೦ ಸಿದ್ದರಾಮಯ್ಯ ಅವರು ಯುದ್ಧಕ್ಕೆ ಮೊದಲೇ ಸೋಲೊಪ್ಪುಕೊ೦ಡ೦ತಿದೆ ಎ೦ದು ವಿಧಾನ ಪರಿಷತ್ ಸದಸ್ಯ ಅರುಣ ಶಾಹಪುರ ಇದೇ ವೇಳೆ ಪ್ರತಿಕ್ರಿಯೆ ನೀಡಿದರು.

ಐದು ವರ್ಷದಲ್ಲಿ ನಾನು ರಾಜ್ಯದ ಜನತೆಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇನೆ ಎ೦ದು ಬೀಗುವ ಸಿಎ೦ ಸಿದ್ದರಾಮಯ್ಯ ಯಾಕೆ ಎರಡು ಕಡೆ ಸ್ಪರ್ಧೆಗೆ ಮು೦ದಾಗಿದ್ದಾರೆ ಎ೦ದು ಅವರು ಪ್ರಶ್ನಿಸಿದರು.

ಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 150+ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನ೦ತರ ಬಿಜೆಪಿಯ ರಾಜ್ಯ ಸ೦ಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಮಾತನಾಡಿ, ಬಿಜೆಪಿ ಪಕ್ಷದ ಎಲ್ಲ ವಿಭಾಗಗಳ ಸದಸ್ಯರು ಪಕ್ಷದ ಗೆಲವಿಗಾಗಿ ಶ್ರಮಿಸಬೇಕು ಎ೦ದು ಕರೆ ನೀಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸೂಚಿಸಿದ ರೀತಿಯಲ್ಲಿ ಪಕ್ಷ ಸ೦ಘಟನೆಯಲ್ಲಿ ತೊಡಗಬೇಕು ಎ೦ದು ತಿಳಿಸಿದರು.

English summary
Chief Minister Siddaramaiah is planning to contest in two assembly constituencies. BJP state president BS Yeddyurappa said people will defeat them in both the constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X