ಹುನಗುಂದದಲ್ಲಿ ವೀಣಾ ಕಾಶಪ್ಪನವರ ಪರ ಮತ ಯಾಚಿಸಿದ ಸಿದ್ದರಾಮಯ್ಯ

ಬಾಗಲಕೋಟೆ, ಏಪ್ರಿಲ್ 21:ಮೋದಿ ಐದು ವರ್ಷ ಪಿಎಂ ಆಗಿದ್ದರು. ಚುನಾವಣೆಗೆ ಬಂದಾಗ ಏನೇನು ಮಾಡಿದ್ದಾರೆ ಹಾಗೂ ಮುಂದೆ ಐದು ವರ್ಷ ಏನು ಮಾಡ್ತಾರೆ ಅಂತ ಜನರ ಎದುರು ರಿಪೋರ್ಟ್ ಇಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಮತಬೇಟೆ ಆರಂಭಿಸಿರುವ ಸಿದ್ದರಾಮಯ್ಯ ಹುನಗುಂದ ಪಟ್ಟಣದ ಟಿಸಿಎಚ್ ಕಾಲೇಜು ಮೈದಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಡವ, ರೈತರು, ಮಹಿಳೆಯರು, ಅಲ್ಪಸಂಖ್ಯಾತರ ಬೆಂಬಲಕ್ಕೆ ನಿಲ್ಲೋರಿಗೆ ಮತ ಕೊಡಬೇಕು ಎಂದರು.

ನರೇಂದ್ರ ಮೋದಿ ಕ್ಷೇತ್ರದ ಸಂಸದ ಗದ್ದಿಗೌಡರ ಪಟ್ಟಿ ಕೊಡಬೇಕಲ್ವಾ, ಮೋದಿ ಬಾಗಲಕೋಟೆಗೆ ಬಂದಾಗ ಏನು ಮಾತಾಡಿದ್ರು, ರೈತರು, ಬಡವರು, ದಲಿತರ ಬಗ್ಗೆ ಮಾತಾಡಿದ್ರಾ,
ಬರೀ ಬಾಗಲಕೋಟೆ, ಬಾಲಾಕೋಟ್ ಬಿಟ್ಟು ಏನು ಮಾತಾಡಿದ್ರು ಎಂದು ಪ್ರಶ್ನೆಗಳ ಸುರಿಮಳೆಗೈದರು.

Siddaramaiah asks people to give vote to Veena Kashappanavar

ನಾನು ಸಿಎಂ ಇದ್ದಾಗ ಏನು ಮಾಡಿದ್ದೇನೆ ಅಂತ ಹೇಳ್ತೇನೆ.ನರೇಂದ್ರ ಮೋದಿಗೆ ದಮ್ ಇದ್ರೆ ಹೇಳಲಿ, ಬಣ್ಣದ ನಾಟಕ ಮಾಡ್ತೀರಾ? ನಿಮ್ಮಿಂದ ನಾವು ದೇಶಭಕ್ತಿ ಕಲಿಬೇಕಾ?ದೇಶಕ್ಕಾಗಿ ಬಿಜೆಪಿಯವರು ಒಬ್ಬರಾದ್ರೂ ಸತ್ತಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಾಗಲಕೋಟೆಯಲ್ಲಿ ಗದ್ದಿಗೌಡರ 15 ವರ್ಷ ಎಂಪಿ. ಏನು ಕೊಡುಗೆ ಇದೆ? ಅದಕ್ಕೆ ಈ ಗಿರಾಕಿ ನನ್ನ ಮುಖ ನೋಡಬೇಡಿ, ನರೇಂದ್ರ ಮೋದಿ ಮುಖ ನೋಡಿ ಅಂತಿದ್ದಾನೆ. ನಾಳೆ ಮೋದಿ ಹುಡುಕಿಕೊಂಡು ದೆಹಲಿಗೆ ಹೋಗ್ತೀರಾ? ನಾನು ಸಿಎಂ ಇದ್ದಾಗ ಹುನಗುಂದ ತಾಲೂಕಿನ ನಾಲ್ಕು ಸಾವಿರ ಕೋಟಿ ಅನುದಾನ ಕೊಟ್ಟಿದ್ದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ವೀಣಾ ಕಾಶಪ್ಪನವರ ಕಾಂಗ್ರೆಸ್ ಅಭ್ಯರ್ಥಿ. ವೀಣಾ ಮುಖ ನೋಡಿ ವೋಟು ಕೊಡಿ ಎಂದ ಸಿದ್ದರಾಮಯ್ಯ, ನಾವು ರಾಹುಲ್ ಗಾಂಧಿ, ಸಿದ್ದರಾಮಯ್ಯ, ದಿನೇಶ ಗುಂಡೂರಾವ್ ಮುಖ ನೋಡಿ ವೋಟು ಕೊಡಿ ಎನ್ನುತ್ತೇವೆ. ಆದರೆ ಬಿಜೆಪಿಯವರು ಮೋದಿ ಬಿಟ್ಟು ಬೇರೇನು ಹೇಳಲ್ಲ ಎಂದು ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+