ಲಿಂಗಾಯತ ಅಲ್ಪಸಂಖ್ಯಾತರ ಪಟ್ಟಿಗೆ ಗಾಣಿಗ ಹೆಸರು ಸೇರ್ಪಡೆಗೆ ವಿರೋಧ

Posted By: ಬಾಗಲಕೋಟೆ ಪ್ರತಿನಿಧಿ
Subscribe to Oneindia Kannada

ಬಾಗಲಕೋಟೆ, ಏಪ್ರಿಲ್ 10: ನಾವೂ ಯಾವಾಗಿದ್ದರೂ ಹಿಂದೂ ಗಾಣಿಗ, ವೀರಶೈವ ಅಥವಾ ಲಿಂಗಾಯತರಾಗಲು ಸಾಧ್ಯವಿಲ್ಲ ಎಂದು ಅಖಿಲ ಕರ್ನಾಟಕ ರಾಜ್ಯ ಯುವ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಶೇಖರ ಸಜ್ಜನ ಹೇಳಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ನವನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ 1995ರಿಂದ ಹಿಂದೂ ಗಾಣಿಗ ಸಮಾಜವು ಸಂಘಟನೆಗೊಂಡು ಹಾವನೂರು ಆಯೋಗದ ಶಿಫಾರಸ್ಸಿನಂತೆ ಪ್ರವರ್ಗ 2ಎ ಮತ್ತು ಅ ವರ್ಗದಲ್ಲಿ ಗುರುತಿಸಿಕೊಂಡು ಇಲ್ಲಿಯವರಿಗೆ ಅದರ ಸೌಲಭ್ಯ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

94 ಒಳಪಂಗಡಗಳಲ್ಲಿ ಲಿಂಗಾಯತ ಗಾಣಿಗ, ಗಾಣಿಗೇರ, ಲಿಂಗಾಯತ ಸಜ್ಜನ, ಸಜ್ಜನ ಗಾಣಿಗೇರ, ಲಿಂಗಾಯತ ಕುರಿಗಾಣಿಗರು ಎಂದು ಮೂರು ಉಪ ಪಂಗಡಗಳನ್ನು ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ‌ ಎಂದು ಮಾಹಿತಿ ನೀಡಿದರು.

Oppose to joining Ganiga caste into Lingayath minorities

ಆದರೆ ಈ ಮೂರು ಪಂಗಡಗಳು ಒಂದೇ ಎಂದು ಹಿಂದುಳಿದ ವರ್ಗಕ್ಕೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ಪಡೆಯಲಾಗುತ್ತಿದೆ.ನಾವೆಲ್ಲ ಜಾತಿ ಕಾಲ‌ಂನಲ್ಲಿ ಹಿಂದೂ ಗಾಣಿಗ ಎಂದು ನಮೂದು ಮಾಡುವುದು ಸ್ಪಷ್ಟವಿದೆ ಎಂದರು.

ಸರ್ಕಾರಿ ವಕೀಲರಾದ ಡಿ.ನಾಗರಾಜ್ ಅವರು ಅಫಿಡವಿಟ್ ಸಲ್ಲಿಸಿ ಕೇಂದ್ರಕ್ಕೆ ಶಿಫಾರಸ್ಸಿನಂತೆ 94 ಲಿಂಗಾಯತ ಒಳಪಂಗಡಗಳು ಹಿಂದೂಗಳಲ್ಲ ಎಂದು ಸ್ಪಷ್ಟಪಡಿಸಿದ್ದು, ಹಿಂದು ಗಾಣಿಗ ಸಮಾಜದ ಅನುಮತಿ ಪಡೆಯದೇ ಗಾಣಿಗರು ಹಿಂದೂಗಳಲ್ಲ ಎಂದು ನ್ಯಾಯಾಲಯಕ್ಕೆ ಅಪಿಡೇವಿಟ್ ಸಲ್ಲಿಸಿದ್ದು ಕಾನೂನು ಬಾಹಿರವಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Ganiga association express their oppose to decision of joining Ganiga caste into Lingayatha minority religion. They said we are Hindu Ganiga and we are enjoying 2a category as per the Havanuru report.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ