ನನಗೇ ಟಿಕೆಟ್, ನಾನೇ ಗೆಲ್ಲೋದು: ಮೇಟಿ

Posted By: Manjunatha
Subscribe to Oneindia Kannada

   ನಾನು ಚುನಾವಣೆಗೆ ನಿಲ್ಲೋದನ್ನ ಯಾರೂ ತಡೆಯೋಕೇ ಆಗಲ್ಲ ಅಂದ್ರು ಎಚ್ ವೈ ಮೇಟಿ | Oneindia Kannada

   ಬಾಗಲಕೋಟೆ: ನವೆಂಬರ್ 04: ಸೆಕ್ಸ್ ವಿಡಿಯೊ ಟೇಪ್ ನಿಂದ ವಿವಾದ ಮೈಮೇಲೆ ಎಳೆದುಕೊಂಡಿದ್ದ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ "ಈ ಬಾರಿಯೂ ನನಗೇ ಕಾಂಗ್ರೆಸ್ ಟಿಕೆಟ್ ಖಚಿತ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಅಬ್ಬರಿಸಿದ್ದಾರೆ.

   ವಿಡಿಯೋ ಸಿಡಿ ಪ್ರಕರಣ : ಎಚ್ ವೈ ಮೇಟಿಗೆ ಕ್ಲೀನ್ ಚಿಟ್

   ಬಾಗಲಕೋಟೆ ಕ್ಷೇತ್ರಕ್ಕೆ ಈ ಬಾರಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ, ಮೇಟಿಗೆ ಟಿಕೆಟ್ ನೀಡುವುದನ್ನು ವಿರೋದಿಸುತ್ತಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ಪಕ್ಷದ ರಾಜ್ಯ ನಾಯಕರನ್ನು ಕಂಡು ಮೇಟಿ ಅವರಿಗೆ ಟಿಕೆಟ್ ತಪ್ಪಿಸಿದೆ ಎಂಬ ಊಹಾಪೋಹ ಬಾಗಲಕೋಟೆ ರಾಜಕೀಯ ವಲಯದಲ್ಲಿ ಹರಿದಾಡಲು ಆರಂಭವಾದ ಹಿನ್ನೆಲೆಯಲ್ಲಿ, ಮೇಟಿ ಈ ಹೇಳಿಕೆ ನೀಡಿದ್ದಾರೆ.

   No One can stop me from Contesting for Elections from Congress : HY Meti

   "ನನಗೇ ಟಿಕೇಟ್ ಕೊಡಿಸುವ ತಾಕತ್ತು ಇರುವಾಗ, ನನ್ನ ಟಿಕೇಟ್ ತಪ್ಪಿಸುವ ಛಾತಿ ಯಾರಿಗಿದೆ' ಎನ್ನುವ ಮೂಲಕ ತಮ್ಮ ವರ್ಚಸ್ಸು ಕಾಂಗ್ರೇಸ್ ಪಕ್ಷದಲ್ಲಿ ಇನ್ನೂ ಕುಗ್ಗಿಲ್ಲ ಎಂದು ಅವರು ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

   ಲೈಂಗಿಕ ಹಗರಣದಲ್ಲಿ ಸಿಕ್ಕು ಸ್ವತಃ ಮಾನಹಾನಿಗೊಳಗಾಗಿ ಪಕ್ಷಕ್ಕೂ ಪೀಕಲಾಟ ತಂದಿಟ್ಟಿದ್ದ ಮೇಟಿ ಅವರನ್ನು ಪಕ್ಷದಿಂದ ದೂರ ಇರಿಸುವ ಚಿಂತನೆ ಕಾಂಗ್ರೆಸ್ ಗೆ ಇದ್ದು ಈ ಬಾರಿ ಬೇರೆಯವರಿಗೆ ಟಿಕೇಟ್ ನೀಡಲು ವರಿಷ್ಟರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಲೈಂಗಿಕ ಹಗರಣದಿಂದಾಗಿ ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡಿರುವ ಮೇಟಿ ಅವರಿಗೆ ಟಿಕೆಟ್ ನೀಡಿದರೆ ಸೋಲು ಖಚಿತ ಎಂಬುದು ಮೇಟಿ ವಿರೋಧ ಬಣದ ಸದಸ್ಯರ ವಾದ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Controversial Politician, former ministet H.Y.Meti argues that he will get ticket to contest in next assembly elections from Bagalkote. But, his fellow party workers are oppose and demand not to give to Meti this time.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ