Get Updates
Get notified of breaking news, exclusive insights, and must-see stories!

ಜಮಖಂಡಿಗೆ ಕೆ.ಸಿ.ವೇಣುಗೋಪಾಲ್ ದಿಢೀರ್ ಭೇಟಿ, ವೀಕ್ಷಕರಿಗೆ ಎಚ್ಚರಿಕೆ!

Recommended Video

      ಬಾಗಲಕೋಟೆಯ ಜಮಖಂಡಿಗೆ ಧಿಡೀರ್ ಭೇಟಿ ನೀಡಿದ ಕೆ ಸಿ ವೇಣುಗೋಪಾಲ್ | Oneindia Kannada

      ಬಾಗಲಕೋಟೆ, ಅಕ್ಟೋಬರ್ 26 : ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ದಿಢೀರ್ ಭೇಟಿ ನೀಡಿದರು. ನವೆಂಬರ್ 3ರಂದು ಜಮಖಂಡಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ.

      ಗುರುವಾರ ರಾತ್ರಿ ಕೆ.ಸಿ.ವೇಣುಗೋಪಾಲ್ ಜಮಖಂಡಿಗೆ ದಿಢೀರ್ ಭೇಟಿ ನೀಡಿದರು. ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ನಾಯಕರು ಸಹ ಈ ಭೇಟಿ ಕಂಡು ಅಚ್ಚರಿಗೊಂಡರು. ಪ್ರಚಾರಕ್ಕೆ ಗೈರಾಗಿದ್ದ ನಾಯಕರು ಒಂದು ಕ್ಷಣ ಆತಂಕಗೊಂಡರು.

      ನವೆಂಬರ್ 3ರಂದು ಜಮಖಂಡಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ನ್ಯಾಮಗೌಡ ಕ್ಷೇತ್ರದಲ್ಲಿ ಜಯಗಳಿಸಿದ್ದರು. ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟ ಕಾರಣ ಉಪ ಚುನಾವಣೆ ಎದುರಾಗಿದೆ.

      ಉಪ ಚುನಾವಣೆಗೆ ಸಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಶ್ರೀಕಾಂತ್ ಕುಲಕರ್ಣಿ ಕಣದಲ್ಲಿದ್ದಾರೆ. ಜಮಖಂಡಿಯಲ್ಲಿ ಮತ್ತೆ ಪಕ್ಷವನ್ನು ಗೆಲ್ಲಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ. 30ಕ್ಕೂ ಹೆಚ್ಚು ಪಕ್ಷದ ನಾಯಕರು ಕ್ಷೇತ್ರದ ಚುನಾವಣೆ ವೀಕ್ಷಕರಾಗಿದ್ದಾರೆ.....

      ವೀಕ್ಷಕರೊಂದಿಗೆ ಸಭೆ

      ವೀಕ್ಷಕರೊಂದಿಗೆ ಸಭೆ

      ಉಪ ಚುನಾವಣೆ ನಡೆಯುತ್ತಿರುವ ಜಮಖಂಡಿಗೆ ಕೆ.ಸಿ.ವೇಣುಗೋಪಾಲ್ ದಿಢೀರ್ ಭೇಟಿ ನೀಡಿದರು.
      ಜಮಖಂಡಿ ಚುನಾವಣೆ ಉಸ್ತುವಾರಿ ಹೊತ್ತ ವೀಕ್ಷಕರೊಂದಿಗೆ ರಾಯಲ್‌ ಪ್ಯಾಲೇಸ್ ಸ್ಕೂಲ್‌ನಲ್ಲಿ ಸಭೆ ನಡೆಸಿದರು.

      ಸಭೆಯಲ್ಲಿ‌ ಕೆಪಿಸಿಸಿ‌ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ‌ ಸಚಿವ ವಿನಯ್ ಕುಲಕರ್ಣಿ, ಮಾಜಿ ‌ಸಚಿವ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವ ಶಿವಾನಂದ ಪಾಟೀಲ್, ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಬಾಗಲಕೋಟೆ-ವಿಜಯಪುರ ಜಿಲ್ಲೆಯ ವಿವಿಧ ನಾಯಕರು ಪಾಲ್ಗೊಂಡಿದ್ದರು.

      ಕ್ಷೇತ್ರದ ಚುನಾವಣಾ ಕಣದ ಮಾಹಿತಿ

      ಕ್ಷೇತ್ರದ ಚುನಾವಣಾ ಕಣದ ಮಾಹಿತಿ

      ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಜಮಖಂಡಿ ಕ್ಷೇತ್ರದಲ್ಲಿನ ಪರಿಸ್ಥಿತಿ ಬಗ್ಗೆ ನಾಯಕರು ವಿವರಣೆ ನೀಡಿದರು. ಚುನಾವಣೆ ಉಸ್ತುವಾರಿ ಹೊತ್ತ ನಾಯಕರು ಇನ್ನೂ ಕ್ಷೇತ್ರಕ್ಕೆ ಬಾರದಿರುವ ಬಗ್ಗೆ ವೇಣುಗೋಪಾಲ್ ಅಸಮಾಧಾನಗೊಂಡರು. ಉಸ್ತುವಾರಿ ವಹಿಸಿದ ನಾಯಕರು ಏಕೆ ಪ್ರಚಾರದಲ್ಲಿ ಪಾಲ್ಗೊಂಡಿಲ್ಲ ಎಂದು ವೇಣುಗೋಪಾಲ್ ಪ್ರಶ್ನಿಸಿದರು.

      ಕ್ರಮ ಕೈಗೊಳ್ಳುವ ಎಚ್ಚರಿಕೆ

      ಕ್ರಮ ಕೈಗೊಳ್ಳುವ ಎಚ್ಚರಿಕೆ

      ಹಾಲಿ ಹಾಗೂ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ 30ಕ್ಕೂ ಹೆಚ್ಚು ಜನರನ್ನು ಕಾಂಗ್ರೆಸ್ ಜಮಖಂಡಿಗೆ ವೀಕ್ಷಕರನ್ನಾಗಿ ನೇಮಿಸಿದೆ. ಆದರೆ, 15ಕ್ಕೂ ಹೆಚ್ಚು ಜನರು ಕ್ಷೇತ್ರದತ್ತ ತಲೆ ಹಾಕಿಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ವೇಣುಗೋಪಾಲ್ ಅವರು, ಕ್ಷೇತ್ರಕ್ಕೆ ಇನ್ನೂ ಕಾಲಿಡದ ನಾಯಕರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.

      ಪರಮೇಶ್ವರ ಉಸ್ತುವಾರಿ

      ಪರಮೇಶ್ವರ ಉಸ್ತುವಾರಿ

      ಉಪ ಮುಖ್ಯಮಂತ್ರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಜಮಖಂಡಿ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದಲ್ಲಿ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಕೆಲವು ನಾಯಕರು ಮಾತ್ರ ಗೈರಾಗಿರುವುದು ಪಕ್ಷದ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

      ಕಡಿಮೆ ಅಂತರದ ಸೋಲು

      ಕಡಿಮೆ ಅಂತರದ ಸೋಲು

      ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ 49,245 ಮತ, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಅವರು 46,450 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಉಪ ಚುನಾವಣೆಯಲ್ಲಿ ಅಷ್ಟು ಸುಲಭವಾಗಿ ಜಯಸಿಕ್ಕುವ ಸಾಧ್ಯತೆ ಕಡಿಮೆ ಇದೆ.

      ಸಿದ್ದು ನ್ಯಾಮಗೌಡ ಸಾವಿರ ಅನುಕಂಪದ ಅಲೆ, ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಸಿಕ್ಕರೆ ಗೆಲುವು ಸುಲಭ. ಶ್ರೀಕಾಂತ್ ಕುಲಕರ್ಣಿ ಅವರು ಆರ್‌ಎಸ್‌ಎಸ್‌ ಹಿನ್ನಲೆಯಿಂದ ಬಂದಿದ್ದು, ತಮ್ಮದೇ ಆದ ವೋಟ್ ಬ್ಯಾಂಕ್ ಹೊಂದಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+