ಕೊಣ್ಣೂರಲ್ಲಿ ಸೆ.20ರಿಂದ ಕನ್ನಡ ಭಾಷೆಯ ಹಬ್ಬ ಕೊಣ್ಣೂರ ನುಡಿಸಿರಿ ಸಡಗರ
ಬಾಗಲಕೋಟೆ, ಸೆಪ್ಟೆಂಬರ್ 17: ಬಾಗಲಕೋಟೆಯ ಕೊಣ್ಣೂರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 'ಕೊಣ್ಣೂರ ನುಡಿ ಸಡಗರ' ಕಾರ್ಯಕ್ರಮ ಸೆಪ್ಟೆಂಬರ್ 20-21ರಂದು ನಡೆಯಲಿದೆ.
ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅಧ್ಯಕ್ಷತೆವಹಿಸಲಿದ್ದು, ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಕೆಸಿಎಸ್ ಸಂಸ್ಥಾಪಕ ಬಸವರಾಜ ಕೆ ಕೊಣ್ಣೂರ , ಕೊಣ್ಣೂರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಭರಮಪ್ಪ ಕೆ ಕೊಣ್ಣೂರ ಗೌರವಾಧ್ಯಕ್ಷ ಸಿದ್ಧರಾಜ ಪೂಜಾರಿ, ಕಾರ್ಯದರ್ಶಿ ಶಿವಾನಂದ ಎಂ ದಶ್ಯಾಳ ಉಪಸ್ಥಿತರಿರಲಿದ್ದಾರೆ.

ಕವಿ, ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಅವರ ಅಧ್ಯಕ್ಷತೆಯಲ್ಲಿ ಮೂಡಿಬರಲಿದ್ದು, ಜಮಖಂಡಿ ಬಳಿ ಇರುವ ಯಲ್ಲಟ್ಟಿಯಲ್ಲಿ ಕಾರ್ಯಕ್ರಮ ಜರುಗಲಿದೆ.












Click it and Unblock the Notifications