• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರು ಅಪಘಾತ; ಎಸ್‌ಪಿ ಸ್ಪಷ್ಟನೆ

|
Google Oneindia Kannada News

ಬಾಗಲಕೋಟೆ, ಜುಲೈ 06: ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ್ ಕಾರು ಅಪಘಾತದ ಕುರಿತು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.

ಅಪಘಾತವಾದ ಕಾರನ್ನು ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಚಾಲನೆ ಮಾಡುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾರು ಅಪಘಾತ: ಡಿಸಿಎಂ ಲಕ್ಷಣ್ ಸವದಿ ಪುತ್ರ ಚಿದಾನಂದ್ ಹೇಳಿದ್ದೇನು?ಕಾರು ಅಪಘಾತ: ಡಿಸಿಎಂ ಲಕ್ಷಣ್ ಸವದಿ ಪುತ್ರ ಚಿದಾನಂದ್ ಹೇಳಿದ್ದೇನು?

ಅಪಘಾತ ಸಂಬಂಧ ಮಾಹಿತಿ ನೀಡಿರುವ ಎಸ್‌ಪಿ ಲೋಕೇಶ್, "ದೇವಲಾಪುರ ಕ್ರಾಸ್ ಬಳಿ ಸಂಜೆ 6-7 ಗಂಟೆ ನಡುವೆ ಅಪಘಾತ ನಡೆದಿದೆ. ಐಪಿಸಿ 304 ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಚಿದಾನಂದ ಸವದಿ ಕಾರನ್ನು ಚಾಲನೆ ಮಾಡುತ್ತಿರಲಿಲ್ಲ" ಎಂದಿದ್ದಾರೆ.

ಚಾಲಕ ಹನುಮಂತ ಸಿಂಗ್ ರಜಪೂತ್ ಎಂಬುವರು ಕಾರು ಚಲಿಸುತ್ತಿದ್ದರು. ಅವರನ್ನು ವಶಕ್ಕೆ ತೆಗೆದುಕೊಂಡು ಹೇಳಿಕೆ ಪಡೆದುಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಚಿತ್ರದುರ್ಗ-ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ ಸಂಭವಿಸಿತ್ತು. ಕಾರು ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಸೇರಿದಂತೆ 12 ಮಂದಿ ಎರಡು ಕಾರಿನಲ್ಲಿ ಪ್ರವಾಸಕ್ಕೆ ತೆರಳಿದ್ದರು.

Recommended Video

   Ravi Shastri ಅವಧಿ ಮುಕ್ತಾಯ Rahul Dravid ಆಗ್ತಾರಾ ಟೀಂ ಇಂಡಿಯಾ ಗುರು | Oneindia Kannada
   English summary
   DCM Laxman Savadi Car Accident: Bagalgot SP Reaction on Chidanand Car Accident,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X