ಟಿಪ್ಪು ಜಯಂತಿ ಆಚರಣೆ ರದ್ದು ಪಡಿಸುವ ಪ್ರಶ್ನೆಯೇ ಇಲ್ಲ: ಪರಮೇಶ್ವರ
ಬಾಗಲಕೋಟೆ, ಅಕ್ಟೋಬರ್ 16: ಪ್ರತಿಪಕ್ಷ ಬಿಜೆಪಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ರಾಜ್ಯ ಸರ್ಕಾರ ಹಠಕ್ಕೆ ಬಿದ್ದಂತೆ ನವೆಂಬರ್ 9ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆಸಿದೆ.
ರಾಜ್ಯ ಸರ್ಕಾರದ ಈ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ರಾಜ್ಯದ ಸರ್ಕಾರದ ನಿರ್ಣಯದಂತೆ ಈ ಬಾರಿ ಟಿಪ್ಪು ಜಯಂತಿ ಆಚರಿಸಲಾಗುತ್ತದೆ. ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದಾರೆ, ಕೋಮುವಾದಿ ಶಕ್ತಿಗಳ ಬೆದರಿಕೆಗೆ ಹೆದರಿ ಟಿಪ್ಪು ಜಯಂತಿಯನ್ನು ರದ್ದುಪಡಿಸುವ ಮಾತೇ ಇಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
ಈ ಬಾರಿಯೂ ರಾಜ್ಯದಲಲ್ಲಿ ಉಪ ಚುನಾವಣೆ ಬಳಿಕ ಟಿಪ್ಪು ಆಚರಣೆ ತೀವ್ರ ವಿವಾದಕ್ಕೆ ಕಾರಣವಾಗುವ ಎಲ್ಲಾ ಲಕ್ಷಗಳು ಗೋಚರಿಸುತ್ತಿವೆ.

ಪ್ರತಿ ಬಾರಿಯೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಬಿಜೆಪಿಯ ಯಾವುದೇ ಆಕ್ಷೇಪ ವಿರೋಧಕ್ಕೆ ಸರ್ಕಾರ ಮಣಿಯುವುದಿಲ್ಲ, ಜಾತ್ಯಾತೀತ ಮನೋಭಾವದಿಂದ ಬಂದವರು ನಾವು, ಹೀಗಾಘಿ ಎಲ್ಲರ ಜಯಂತಿಯನ್ನು ಆಚರಿಸುತ್ತೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎಂದು ಹಗಲುಗನಸು ಕಾಣುತ್ತಿದ್ದಾರೆ, ಅದು ಯಾವತ್ತೂ ನೆರವೇರುವುದಿಲ್ಲ ಎಂದು ಹೇಳಿದರು.












Click it and Unblock the Notifications