• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಗೆ ಚಾಕು ಇರಿತ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜುಲೈ 6: ನೂಪುರ್‌ ಶರ್ಮಾ ವಿರುದ್ಧ ಪೋಸ್ಟ್ ವಿಚಾರವಾಗಿ ಎರಡು ಕೋಮು ಗುಂಪುಗಳ ಮಧ್ಯೆ ಭೀಕರ ಗಲಾಟೆ ನಡೆದು ಮೂವರು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.

ಘಟನೆಯಲ್ಲಿ ಇಬ್ಬರು ಯುವಕರಿಗೆ ಚಾಕು ಇರಿಯಾಗಿದೆ, ಓರ್ವನ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಕೆರುರೂ ಪಟ್ಟಣದಲ್ಲಿ ಬುಧವಾರ ಸಾಯಂಕಾಲ ಸಮಯ ಈ ಘಟನೆ ನಡೆದಿದ್ದು, ಇದರಿಂದ ಇಡೀ ಪಟ್ಟಣ ಉದ್ವಿಗ್ನಗೊಂಡಿದೆ. ಘಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ್ ಕಟ್ಟಿಮನಿಗೆ ಗಂಭೀರ ಗಾಯವಾಗಿದ್ದಾರೆ. ಆತನ ಸಹೋದರ ಲಕ್ಷ್ಮಣ್ ಕಟ್ಟಿಮನಿ ಹಾಗೂ ಯಮನೂರ್ ಚುಂಗಿನ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಕಾಳಿ ಸಿಗರೇಟ್ ವಿವಾದ: ನಿರ್ದೇಶಕಿಯ ಟ್ವೀಟ್ ಹಿಂಪಡೆದ ಟ್ವಿಟ್ಟರ್ಕಾಳಿ ಸಿಗರೇಟ್ ವಿವಾದ: ನಿರ್ದೇಶಕಿಯ ಟ್ವೀಟ್ ಹಿಂಪಡೆದ ಟ್ವಿಟ್ಟರ್

ಅರುಣ್ ತಲೆಗೆ ಮಚ್ಚಿನಿಂದ ಹಲ್ಲೆ‌ಮಾಡಿರುವುದರಿಂದ ತಲೆಗೆ ಪೆಟ್ಟುಬಿದ್ದಿದೆ. ಇನ್ನು ಲಕ್ಷ್ಮಣ್ ಕೈಗೆ ಮಚ್ಚೇಟು ಬಿದ್ದಿದೆ. ಯಮನೂರ್ ಚುಂಗನ್‌ಗೂ ಸಣ್ಣಪುಟ್ಟ ಗಾಯಗಳಾಗಿವೆ. ಮೂವರು ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ, ನೂಪುರ ಶರ್ಮಾ ವಿರುದ್ಧ ಒಂದು ಗುಂಪಿನವರು ಪೋಸ್ಟ್ ಹಾಕಿದ್ದೇ ಕಾರಣ ಎಂದು ಹೇಳಲಾಗುತ್ತಿದೆ.

Communal clash between 2 groups of people, at least 3 stabbed in Bagalkot

ನೂಪುರ್‌ ಶರ್ಮಾ ತಲೆಕಡಿಯಿರಿ ಎಂದವ ಪೊಲೀಸರ ಅತಿಥಿ!ನೂಪುರ್‌ ಶರ್ಮಾ ತಲೆಕಡಿಯಿರಿ ಎಂದವ ಪೊಲೀಸರ ಅತಿಥಿ!

ಘಟನೆಯಲ್ಲಿ ಕೆಲವು ಅಂಗಡಿಗಳಿಗೆ ಬೆಂಕಿ ಇಡಲಾಗಿದ್ದು, ಹತ್ತಕ್ಕೂ ಹೆಚ್ಚು ಸಣ್ಣ ಅಂಗಡಿಗಳು ಸುಟ್ಟು ಕರಕಲಾಗಿವೆ. 5 ಬೈಕ್ ಗಳು ಜಖಂಗೊಂಡಿವೆ. ಕೆರೂರು ಪಟ್ಟಣದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಎಲ್ಲಾ ಅಂಗಡಿ ಮುಂಗಟ್ಟು‌ ಮುಚ್ಚಲಾಗಿದೆ. ಎಸ್.ಪಿ ಜಯಪ್ರಕಾಶ್ ಕೆರೂರು ಪಟ್ಟಣಕ್ಕೆ ಭೇಟಿ‌ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೊಬಹೈಲ್ ಎಂ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Recommended Video

   ಶಾಕ್ ಮೇಲೆ ಶಾಕ್ !!ಗೃಹಬಳಕೆಯ LPG ಸಿಲಿಂಡರ್ ಗ್ಯಾಸ್ ಬೆಲೆಯಲ್ಲಿ ರೂ.50 ಏರಿಕೆ | *India | OneIndia Kannada
   English summary
   Communal clash between 2 groups of people, at least 3 stabbed in Kerur, Bagalkote district. The attackers also set a few vehicles on fire.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X