ಜಮಖಂಡಿ ವಿಧಾನಸಭೆ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ಜಯಭೇರಿ
ಜಮಖಂಡಿ, ನವೆಂಬರ್ 06: ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಶಾಸಕ ಸ್ಥಾನಕ್ಕೆ ನಡೆದ ಉಪಚುನಾವಣೆಯ ಮತೆಣಿಕೆ ಇಂದು ನಡೆಯುತ್ತಿದೆ.
ಬಿಜೆಪಿಯಿಂದ ಕಳೆದ ಬಾರಿ ಸೋತಿದ್ದ ಶ್ರೀಕಾಂತ್ ಕುಲಕರ್ಣಿ ಅವರೇ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ದಿವಂಗತ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್ ನ್ಯಾಮಗೌಡ ಅವರು ಕಣಕ್ಕಿಳಿದಿದ್ದಾರೆ.
ನವೆಂಬರ್ 3 ರಂದು ನಡೆದ ಮತದಾನದಲ್ಲಿ ಜಮಖಂಡಿಯಲ್ಲಿ ಉಪಚುನಾವಣೆ ನಡೆದ ಐದು ಕ್ಷೇತ್ರಗಳಲ್ಲಿಯೇ ಅತಿ ಹೆಚ್ಚು ಅಂದರೆ 81.58% ಮತ ಚಲಾವಣೆ ಆಗಿರುವುದು ವಿಶೇಷ.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಪೈಪೋಟಿ ಇದ್ದು ಇಬ್ಬರಿಗೂ ಗೆಲ್ಲುವ ಸಮಾನ ಅವಕಾಶ ಇದೆ. ಕೆಲವೇ ನಿಮಿಷದಲ್ಲಿ (ಬೆಳಿಗ್ಗೆ 8 ಗಂಟೆಗೆ) ಮತ ಎಣಿಕೆ ಪ್ರಾರಂಭವಾಗಲಿದೆ.
ಐದು ತಿಂಗಳ ಅಂತರದಲ್ಲಿ ಜಮಖಂಡಿ ಕ್ಷೇತ್ರದಲ್ಲಿಯೇ ಎರಡು ಬಾರಿ ಕಾಂಗ್ರೆಸ್ ವಿರುದ್ಧ ವಿಧಾನಸಭೆ ಚುನಾವಣೆ ಸೋತ ಶ್ರೀಕಾಂತ ಕುಲಕರ್ಣಿ.
ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರಿಗೆ ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ವಿರುದ್ಧ 26,807 ಮತಗಳ ಅಂತರದ ಭರ್ಜರಿ ಗೆಲುವು.
ಜಮಖಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ 60,777 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಅವರು 36,379 ಮತಗಳನ್ನು ಪಡೆದಿದ್ದಾರೆ.
ಗೆಲುವಿನ ಅಂತರದಲ್ಲಿ ಅಪ್ಪ ಸಿದ್ದು ನ್ಯಾಮಗೌಡ ಅವರನ್ನು ಮೀರಿಸಿದ ಮಗ ಆನಂದ್ ನ್ಯಾಮಗೌಡ.
6 ನೇ ಸುತ್ತಿನ ಅಂತ್ಯಕ್ಕೆ ಜಮಖಂಡಿಯಲ್ಲಿ ಕಾಂಗ್ರೆಸ್‌ನ ಆನಂದ್ ನ್ಯಾಮಗೌಡ 12,169 ಮತಗಳಿಂದ ಮುನ್ನಡೆ ಸಾಧಿಸಿಕೊಂಡಿದ್ದಾರೆ.
ಜಮಖಂಡಿ ಮತ ಎಣಿಕೆ ಕೇಂದ್ರದ ಬಳಿ ವಾಗ್ವಾದ, ಕೇಂದ್ರದ ಒಳಗೆ ಬಿಡದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಪಕ್ಷೇತರ ಅಭ್ಯರ್ಥಿ.
ಮತಗಟ್ಟೆ ಸುತ್ತ ಬಿಗಿ ಭದ್ರತೆ, ಚುನಾವಣಾ ಸಿಬ್ಬಂದಿಯೊಂದಿಗೆ ಒಂದು ಸುತ್ತಿನ ಸಂಕ್ಷಿಪ್ತ ಸಭೆ ಮಾಡಿ ಸೂಚನೆಗಳನ್ನು ನೀಡಿದ ಮತ ಎಣಿಕೆ ಕೇಂದ್ರ ಅಧಿಕಾರಿ.
8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ ಫಲಿತಾಂಶ ಬರುವ ಸಂಭವ ಇದೆ.
ಮಿನಿವಿಧಾಸೌಧದಲ್ಲಿ ಮತ ಎಣಿಕೆಗೆ ಸಕಲ ವ್ಯವಸ್ಥೆ. 14 ಟೇಬಲ್‌ಗಳನ್ನು ಮತ ಎಣಿಕೆಗೆ ಹಾಕಲಾಗಿದೆ.











Click it and Unblock the Notifications