• search
  • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಾರ ಮೇಲೂ ಬಾಂಬ್ ಹಾಕಬಾರದು:ಎಂ.ಸಿ ಮನಗೂಳಿ

By ಬಾಗಲಕೋಟೆ ಪ್ರತಿನಿಧಿ
|

ಬಾಗಲಕೋಟೆ, ಫೆಬ್ರವರಿ 27:ಪಾಕಿಸ್ತಾನದ ಉಗ್ರರ ಮೇಲೆ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ದಾಳಿ ನಡೆಸಿದ ಬಗ್ಗೆ ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮನಗೂಳಿ ಅವರು ಯೋಧರೇ ಇರಲಿ, ಉಗ್ರಗಾಮಿಗಳೇ ಇರಲಿ ಇದು ಆಗಬಾರದಾಗಿತ್ತು, ಆಗಿದೆ. ಯಾರು ಯಾರ ಮೇಲೂ ಬಾಂಬ್ ಹಾಕಬಾರದು. ಮಾನವೀಯ ದೃಷ್ಟಿಯಿಂದ ಯಾರ ಮೇಲೂ ಬಾಂಬ್ ಹಾಕಬಾರದು. ಅವ್ರ ಮೇಲೆ ಇವ್ರು ಬಾಂಬ್ ಹಾಕಬಾರದು, ಇವ್ರ ಮೇಲೆ ಅವ್ರು ಬಾಂಬ್ ಹಾಕಬಾರದು ಎಂದು ತಿಳಿಸಿದ್ದಾರೆ.

ಬಾಲಕೋಟ್ ಉಗ್ರ ನೆಲೆಯಲ್ಲಿದ್ದ 42 ಆತ್ಮಾಹುತಿ ಬಾಂಬರ್ ಗಳ ಪಟ್ಟಿ

ಇನ್ನು ಜೆಡಿಎಸ್ ಕಾಂಗ್ರೆಸ್ ನ ಅನೇಕ ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮನಗೂಳಿ, ಅವರು ಆರು ತಿಂಗಳಿಂದ ಹೀಗೆ ಹೇಳುತ್ತಿದ್ದಾರೆ.

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

ಯಾರಾದರೂ ಹೋಗಿದ್ದಾರಾ? ಬಿಜೆಪಿಯವರು ಸಹ ಕಾಂಗ್ರೆಸ್ ಗೆ ಬಂದಿಲ್ಲ. ಕಾಂಗ್ರೆಸ್ ನವರು ಬಿಜೆಪಿಗೆ ಹೋಗಿಲ್ಲ. ವಿನಾಕಾರಣ ಊಹಾಪೋಹದ ಮೇಲೆ ಜನರ ಮನಸ್ಸನ್ನು ಚಂಚಲ ಮಾಡುತ್ತಿದ್ದಾರೆ.ಐದು ವರ್ಷ ನಮ್ಮ ಸರಕಾರವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಕುಮಾರಸ್ವಾಮಿ ಐದು ವರ್ಷ ಅಧಿಕಾರ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

English summary
Minister MC Managuli reacted about IAF air strikes across Loc. He said on humanitarian view bombing is not good.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X