ರೆಡ್ಡಿ ಸಮುದಾಯಕ್ಕೆ ಸಚಿವ ಸ್ಥಾನ ಇಲ್ಲ: ರಾಮಲಿಂಗಾ ರೆಡ್ಡಿ ಬೇಸರ

ಬಾಗಲಕೋಟೆ, ಆಗಸ್ಟ್ 24: ರೆಡ್ಡಿ ಸಮುದಾಯದ ಶಾಸಕರಿಗೆ ಬಿಜೆಪಿ ಸಚಿವ ಸಂಪುಟದಲ್ಲಿ ಸ್ಥಾನ ನೀಡದೇ ಇರುವ ಬಗ್ಗೆ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಬಿಜೆಪಿಯಲ್ಲಿ ಒಂಬತ್ತು ಮಂದಿ ರೆಡ್ಡಿ ಸಮುದಾಯದ ಶಾಸಕರಿದ್ದಾರೆ ಆದರಿಗೆ ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪಕ್ಷಗಳು ಎಲ್ಲ ಸಮುದಾಯವನ್ನು ಜೊತೆಗೆ ಕೊಂಡೊಯ್ಯುವ ಕಾರ್ಯ ಮಾಡಬೇಕು, ಆದರೆ ಬಿಜೆಪಿಯು ಇದಕ್ಕೆ ವ್ಯತಿರಿಕ್ತವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

BJP Should Give Minister Post To A Reddy Caste MLA: Ramalinga Reddy

ಮುಂದಿನ ದಿನದಲ್ಲಿ ಮಾಡುವ ಸಂಪುಟ ವಿಸ್ತರಣೆ ಅವಧಿಯಲ್ಲಿ ರೆಡ್ಡಿ ಸಮುದಾಯಕ್ಕೆ ಅವಕಾಶ ನೀಡಬಹುದೇನೋ ಕಾದು ನೋಡಲಿದ್ದೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಪ್ರಸ್ತುತ ರಾಜಕೀಯದ ಬಗ್ಗೆ ಮಾತನಾಡಿದ ಅವರು, ರಾಜಕೀಯವೆಂಬುದು ಸಹ ಕಾಲಚಕ್ರದಂತೆ ಮೇಲೇರಿದ್ದವನು, ಕೆಳಗೆ ಇಳಿಯುತ್ತಾನೆ, ಕೆಳಗೆ ಇದ್ದವ ಮೇಲೆ ಹೋಗುತ್ತಾನೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ-ದೇವೇಗೌಡ ನಡುವಿನ ವಾಗ್ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಳೆ ನಿಂತ ಮೇಲೆ ಉದುರುವ ಹನಿಗಳಂತೆ ಅವು, ಮೈತ್ರಿ ಸರ್ಕಾರ ಬೀಳಲು ಬೇರೆ-ಬೇರೆ ಕಾರಣಗಳಿವೆ ಅಗತ್ಯ ಬಂದಾಗ ಅದರ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+