ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಳಕಲ್ ವಕೀಲೆಯಿಂದ ಸಹೋದ್ಯೋಗಿ ಕೊಲೆಗೆ ಸುಫಾರಿ, 6 ಜನರ ಬಂಧನ

|
Google Oneindia Kannada News

ಬಾಗಲಕೋಟೆ, ಮಾರ್ಚ್‌ 26: ಇಳಕಲ್ ನಗರದಲ್ಲಿ ಫೆಬ್ರುವರಿ 28 ರಂದು ವಕೀಲರ ಮೇಲೆ ನಡೆದ ಕೊಲೆ ಯತ್ನ ಪ್ರಕರಣವನ್ನು ಬೇಧಿಸಲಾಗಿದ್ದು ಪ್ರಕರಣದಲ್ಲಿ ಭಾಗಿಯಾದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಗರದ ಎಸ್‌ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ವಕೀಲೆ ಸೌಂದರ್ಯ ಹಳ್ಳದ ಮತ್ತು ಸಹಚರರು ವೈಯಕ್ತಿಕ ಧ್ವೇಷದಿಂದ ಇಳಕಲ್ಲ ನಗರದ ನ್ಯಾಯವಾದಿ ಮೋಹನ ಪಾಟೀಲ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದ ಅವರು ಆರು ಜನರ ತಂಡ ಅವರ ಮೇಲೆ ಕೊಲೆ ಯತ್ನ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮೋಹನ ಪಾಟೀಲ ಈ ಬಗ್ಗೆ ದೂರು ನೀಡಿದ್ದರು ಎಂದು ಅವರು ಮಾಹಿತಿ ನೀಡಿದರು.

ಬಾಗಲಕೋಟೆ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ ಬಾಗಲಕೋಟೆ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರಿಚಯ

ಆನಂದ ಮನ್ನಾಪುರ, ಶಿವು ದ್ಯಾವಣ್ಣವರ, ವಾಸೀಮ ಭಂಡಾರಿ, ಮೊಹಮ್ಮದ ಗೌಸ ಕಂದಗಲ್ಲ, ತಿಪ್ಪಣ್ಣ ಮಾದರ ,ಮಾಲಾಲಿ ಭಾಗವಾನ ಬಂಧಿತ ಆರೋಪಿತರು. ಇವರೆಲ್ಲರು ಇಳಕಲ್ಲ ಪಟ್ಟಣದವರಾಗಿದ್ದು. 25 ಸಾವಿರ ಸುಫಾರಿ ಪಡೆದು ಕೊಲೆಗೆ ಯತ್ನಿಸಿದ್ದರು ಎಂದರು.

6 people arrested in attempt to murder of a lawyer in Ilkal

ಪ್ರಕರಣ ಬೆನ್ನು ಹತ್ತಿ ಆರೋಪಿಗಳನ್ಮು ಇಳಕಲ್ಲ ಪೊಲೀಸರು ಬಂಧಿಸಿದ್ದಾರೆ. ಎಸ್‌ಪಿ ರಿಷ್ಯಂತ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಸ್.ಎಂ‌.ಓಲೇಕಾರ ಮತ್ಗಿತು ರೀಶ ಎಸ್.ಬಿ‌.ನೇತೃತ್ವದಲ್ಲಿ ಸಿಪಿಐ ಕರುಣೇಶಗೌಡ, ಸಿಪಿಐ ರ ಚಂದ್ರಶೇಖರ, ಪಿಎಸ್‌ಐ ಎನ್‌.ಆರ್‌.ಖಿಲಾರೆ ಸಿಬ್ಬಂದಿಗಳಾದ ಸಿದ್ದು ಕೌಲಗಿ , ನಾಗೇಶ ಜೆ., ಎಸ್‌.ಆರ್.ಕಳಸದ, ಆರ್.ಎನ್.ಗುಡದಾರಿ ಸೇರಿದಂತೆ ಇತರರು ಪ್ರಕರಣ ಬೇಧಿಸಿದ್ದಾರೆ.

ಮದ್ದೂರಿನಲ್ಲಿದ್ದ ಗೌರಿ ಲಂಕೇಶ್ ಹಂತಕರ ಸುಳಿವು ಹಿಡಿದ ಎಸ್ ಐಟಿ!ಮದ್ದೂರಿನಲ್ಲಿದ್ದ ಗೌರಿ ಲಂಕೇಶ್ ಹಂತಕರ ಸುಳಿವು ಹಿಡಿದ ಎಸ್ ಐಟಿ!

ಬದಾಮಿ ಶಾಸಕ ಬಿ‌.ಬಿ‌.ಚಿಮ್ಮನಕಟ್ಟಿ ನಿವಾಸದ ಎದುರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆ ನಡೆಯುತ್ತಿದೆ. ಇದಕ್ಕೆ ಪ್ರತ್ಯೇಕ ತಂಡ ರಚಿಸಲು ವರದಿ ಸಲ್ಲಿಸಲು ಸೂಚಿಸಲಾಗಿದೆ. ಪೊಲೀಸ ಸಿಬ್ಬಂದಿಗಳ ಮೇಲೆ ದೂರು ಇದ್ರೇ ನೇರವಾಗಿ ಭೇಟಿ ನೀಡಿ ದೂರು ಸಲ್ಲಿಸಬಹುದು. ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

English summary
Ilkal police arrested 6 people in Ilkal for attempting to murder of Lawyer on February 28. Bagalkote Police Superintendent said that a fellow lady lawyer gave supari to kill lawyer Mohan Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X