ಬಾಗಲಕೋಟೆ: 2800 ಕೋಟಿ ರೂ.ಗಳ ನೀರಾವರಿ ಯೋಜನೆ ಆರಂಭ, ಪಿಎಂ ಕಿಸಾನ್ ನಿಧಿ ವಿತರಣೆಗೆ ಸಿಎಂ ಚಾಲನೆ, ವಿವರ ತಿಳಿಯಿರಿ
ಬಾಗಲಕೋಟೆ ಮುಧೋಳದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಿಎಂ ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಬಾಗಲಕೋಟೆ, ಮಾರ್ಚ್ 21: ಕೃಷ್ಣಾ ಜಲಾನಯನ ರೈತರಿಗೆ ನ್ಯಾಯ ನೀಡುವ ತೀರ್ಮಾನ ಮಾಡಿ ಒಟ್ಟು ಸುಮಾರು 2800 ಕೋಟಿ ರೂ.ಗಳ ನೀರಾವರಿ ಯೋಜನೆ ಪ್ರಾರಂಭಿಸಲಾಗಿದೆ. ಮುಖ್ಯವಾಗಿ ಬಾಗಲಕೋಟೆ ನವನಗರಕ್ಕೆ 2500 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದರು.
ಮಂಗಳವಾರ ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಬೃಹತ್ ಸಮಾರಂಭ ನಡೆಯಿತು.ಈ ವೇಳೆ ಹುನಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಕಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಹಾಗೂ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮುಖ್ಯಮಂತ್ರಿಳು ಮಾತನಾಡಿದರು.

ಈ ಭಾಗದ ಜಿಲ್ಲೆಯಲ್ಲಿ ಹುನಗುಂದ ಪ್ರಮುಖ ಕ್ಷೇತ್ರವಾಗಿದೆ. ಇಳಕಲ್ ಸೀರೆ ಮಾತ್ರವಲ್ಲದೆ ಇಲ್ಲಿನ ಗ್ರಾನೈಟ್ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೋಗಿದೆ. ಕಳೆದ ಮೂರು ವರ್ಷಗಳಲ್ಲಿ ಔದ್ಯೋಗಿಕ ವಾಗಿ, ಕೃಷಿಗೆ ಪ್ರಸಿದ್ಧವಾಗಿರುವ ಕ್ಷೇತ್ರದ ಸಮಗ್ರ ಅಭಿವೃದ್ಧಿ ದಾಖಲೆ ಪ್ರಮಾಣದಲ್ಲಿ ಆಗಲು ಕಾರಣ ನಮ್ಮ ಬಿಜೆಪಿ ಸರ್ಕಾರ ಎಂದು ಹೇಳಿದರು.
ಪ್ರಧಾನಮಂತ್ರಿ ಕಿಸಾನ್ ಕರ್ನಾಟಕ ಯೋಜನೆಯ 2022-23ನೇ ಸಾಲಿನ 2ನೇ ಕಂತಿನ ಮೊತ್ತವನ್ನು ರೈತ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡುವು ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.

ಹುನಗುಂದದಲ್ಲಿ 36,598 ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ತಲುಪಿದೆ. ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಅಡಿ 2 ನೇ ಕಂತಿನಲ್ಲಿ 47 ಲಕ್ಷ ರೈತರಿಗೆ 975 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಖಾತೆಗಳಿಗೆ ಡಿಬಿಟಿ ಮೂಲಕ ತಲುಪಿಸಲಾಗಿದೆ ಎಂದರು.
ಸಮಾಜದ ಎಲ್ಲಾ ವರ್ಗಗಳ ಜನರಿಗೆ ನ್ಯಾಯ
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ 800 ಕೆಲಸಗಳು ಜನರನ್ನು ಮುಟ್ಟಿವೆ. ಜನ ಇದನ್ನು ಸ್ಮರಿಸುತ್ತಾರೆ. ಅಭಿವೃದ್ಧಿಯಲ್ಲಿ ಬೇಧ ಮಾಡಿಲ್ಲ. ಎಲ್ಲಾ ವರ್ಗಗಳ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಇದರಿಂದ ಅಲ್ಪಸಂಖ್ಯಾತ ರಿಗೆ ಹೆಚ್ಚಿನ ಲಾಭವಾಗಿದೆ ಎಂದು ಹೇಳಿದರು.

ಹಾಸ್ಟೆಲ್ ಗಳಲ್ಲಿ ಅವಕಾಶ
30 ಸಾವಿರ ಕೋಟಿ ರೂ.ಗಳನ್ನು ಎಸ್‌ಸಿಸಎಸ್‌ಪಿ/ಟಿಎಸ್‌ಪಿ ಅಡಿ ಮೀಸಲಿಡಲಾಗಿದೆ. 100 ಅಂಬೇಡ್ಕರ್ ಹಾಗೂ 50 ಕನಕದಾಸ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. 5 ಮೆಗಾ ಹಾಸ್ಟೆಲ್ ಗಳನ್ನು ನಿರ್ಮಾಣ. ಮಾಡಲಾಗುತ್ತಿದೆ. ಒಂದು ಲಕ್ಷ ವಿದ್ಯಾರ್ಥಿ ಗಳಿಗೆ ಹೆಚ್ಚಿನ ಹಾಸ್ಟೆಲ್ ಗಳಲ್ಲಿ ಅವಕಾಶ ಕಲ್ಪಿಸಿ ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಮೀಸಲಾತಿ ಹೆಚ್ಚಿಸಲಾಗಿದೆ ಎಂದರು.
ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ರಾಜ್ಯ ಜನತೆ ನಮ್ಮ ಬಿಜೆಪಿ ಪಕ್ಷ ಯಾವ ಕಾರಣಕ್ಕೂ ಬೊಗಸ್ ಗ್ಯಾರಂಟಿಗಳನ್ನು ಕೊಡುವುದಿಲ್ಲ. ನಮ್ಮ ಕೆಲಸ ನಮ್ಮ ಗ್ಯಾರಂಟಿ. ಬೇಕಿದ್ದಲ್ಲಿ ಈಗಾಲಗಗೇ ಉದ್ಘಾಟನೆ, ಶಂಕುಸ್ಥಾಪನೆಗೊಂಡ ಕೆಲಸಗಳನ್ನು ನೋಡಿ, ಅಭಿವೃದ್ಧಿ ಕಾರ್ಯಗಳನ್ನು ನೋಡಿ ಎನ್ನುವ ಮೂಲಕ ವಿಪಕ್ಷ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.
ಸಮಾರಂಭದಲ್ಲಿ ಜಲಸಂಪನ್ಮೂಲ್ ಸಚಿವರಾದ ಗೋವಿಂದ ಕಾರಜೋಳ, ರಾಜ್ಯ ಕೈಗಾರಿಕೆ ಇಲಾಖೆ ಮುರುಗೇಶ್ ನಿರಾಣಿ ಶಾಸಕ ದೊಡ್ದನಗೌಡ ಪಾಟೀಲ, ಹಾಲಪ್ಪ, ಶಾಸಕ ವೀರಣ್ಣ ಚರಂತಿಮಠ, ಸಂಗಣ್ಣ ಕರಡಿ ಆಚಾರ್ ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಸ್ಥಳಿಯ ನಾಯಕರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications