ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ:ಅಮರಿಂದರ್ ಸಿಂಗ್

|
Google Oneindia Kannada News

ಚಂಡೀಗಢ, ಫೆಬ್ರವರಿ 14: ಇದೇ ತಿಂಗಳು 20ರಂದು ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.

''ನಾನು ನಿವೃತ್ತಿ ಹೊಂದಲು ಸಿದ್ಧನಿಲ್ಲ, ನನ್ನ ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಇದು ನನ್ನ 9ನೇ ಚುನಾವಣೆ, ನಾನು ಎರಡು ಬಾರಿ ಸಂಸತ್ತಿಗೆ ಮತ್ತು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ'' ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಪಂಜಾಬ್‌ ಚುನಾವಣೆ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲುಪಂಜಾಬ್‌ ಚುನಾವಣೆ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ಭಾರತೀಯ ಜನತಾ ಪಕ್ಷ ಮತ್ತು ಶಿರೋಮಣಿ ಅಕಾಲಿದಳ-ಸಂಯುಕ್ತ್ ಜೊತೆಗಿನ ತಮ್ಮ ಪಕ್ಷದ ಮೈತ್ರಿಯು ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಮಾಜಿ ಸಿಎಂ ಪ್ರತಿಪಾದಿಸಿದ್ದಾರೆ.

Punjab Polls: No Single Party May Get Clear Majority, Says Amarinder

ಪಂಜಾಬ್‌ನಲ್ಲಿ ಚುನಾವಣಾ ಸನ್ನಿವೇಶದಲ್ಲಿ, ಈ ಬಾರಿ ಚತುಷ್ಕೋನ ಅಥವಾ ಐದು ಪಕ್ಷಗಳ ಸ್ಪರ್ಧೆಯಾಗಿದೆ ಮತ್ತು ನಂತರ ಕೆಲವು ಸ್ವತಂತ್ರರು ಕೂಡ ಇದ್ದಾರೆ ಎಂದು ಸಿಂಗ್ ತಿಳಿಸಿದರು.

ಜನರು ಎಎಪಿ(ಆಮ್ ಆದ್ಮಿ ಪಾರ್ಟಿ) ಬಗ್ಗೆ ಮಾತನಾಡುತ್ತಾರೆ. ಎಎಪಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಅದೇ ರೀತಿ ಕಾಂಗ್ರೆಸ್ ಅಧೋಗತಿಗೆ ಹೋಗುತ್ತಿದೆ. ದೇವರ ದಯೆಯಿಂದ ನಾವು ಮೇಲಕ್ಕೆ ಹೋಗುತ್ತಿದ್ದೇವೆ ಎಂದು ಸಿಂಗ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ಬಹು-ಪಕ್ಷಗಳ ಸ್ಪರ್ಧೆಯು ಮತದಾರನಿಗೆ ತನಗೆ ಬೇಕಾದುದನ್ನು ನಿರ್ಧರಿಸಲು ಸುಲಭವಾಗುತ್ತದೆ. ಆದರೆ ಪಕ್ಷಗಳ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಇದು ಅವರಿಗೆ ಕಷ್ಟಕರವಾದ ಹೋರಾಟವಾಗಿದೆ. ಅವರಲ್ಲಿ ಹಲವರಿಗೆ 10, 15 ಸೀಟು ದಾಟುವ ಅವಕಾಶವೇ ಇಲ್ಲ. ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುದಿಲ್ಲ ಅಂತ ಕಾಣಿಸುತ್ತಿದೆ ಎಂದರು.

ಪಂಜಾಬ್‌ ಚುನಾವಣೆ: ಸರ್ಕಾರಿ ಉದ್ಯೋಗದಲ್ಲಿ ರಾಜ್ಯದ ಶೇ.75 ಯುವಕರಿಗೆ ಮೀಸಲಾತಿ, ಬಿಜೆಪಿ ಭರವಸೆಪಂಜಾಬ್‌ ಚುನಾವಣೆ: ಸರ್ಕಾರಿ ಉದ್ಯೋಗದಲ್ಲಿ ರಾಜ್ಯದ ಶೇ.75 ಯುವಕರಿಗೆ ಮೀಸಲಾತಿ, ಬಿಜೆಪಿ ಭರವಸೆ

ಅಮರಿಂದರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಇದ್ದ ಕಾರಣವನ್ನು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಪಂಜಾಬ್​​ನಲ್ಲಿಈ ಹಿಂದೆ ಇದ್ದ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ನೇತೃತ್ವದ ಸರ್ಕಾರವನ್ನು ದೆಹಲಿಯಿಂದ ಬಿಜೆಪಿ ಕೇಂದ್ರ ಸರ್ಕಾರ ನಿಯಂತ್ರಣ ಮಾಡುತ್ತಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.

ಕೋಟ್ಕಾಪುರದಲ್ಲಿ ಇಂದು ನವಿ ಸೋಚ್​, ನವ ಪಂಜಾಬ್​ ರ್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಪಂಜಾಬ್​​ನಲ್ಲಿ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಅಲ್ಲಿ ಅನೇಕ ಕುಂದುಕೊರತೆಗಳಿದ್ದವು. ಆಡಳಿತ ವಿಫಲವಾಗುತ್ತಿತ್ತು.

ಅಪ್ಪ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ: ಸಿಧು ಪುತ್ರಿ ರಾಬಿಯಾಅಪ್ಪ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ: ಸಿಧು ಪುತ್ರಿ ರಾಬಿಯಾ

ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ಅಮರಿಂದರ್​ ಸಿಂಗ್​ರನ್ನು ನಿಯಂತ್ರಿಸುತ್ತಿತ್ತು. ಹಾಗಾಗಿಯೇ ಅವರನ್ನು ಬದಲಿಸಿ, ಚರಣಜಿತ್​ ಸಿಂಗ್ ಛನ್ನಿಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅಮರಿಂದರ್​ ಸಿಂಗ್​ ಹೆಸರನ್ನು ಹೇಳದೆ ಇಷ್ಟು ಮಾತುಗಳನ್ನಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದ್ದಾರೆ. ನಮ್ಮ ಸರ್ಕಾರ ದೆಹಲಿಯಿಂದ ನಿಯಂತ್ರಿಸುತ್ತಿರುವುದು ಗೊತ್ತಾಗಿದ್ದಕ್ಕೆ ಈ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಹಾಗೆಯೇ, ಪಂಜಾಬ್​​ನಲ್ಲಿ ಇದೀಗ ಅಮರಿಂದರ್​ ಸಿಂಗ್​ ಅವರ ನೂತನ ಪಕ್ಷ ಪಂಜಾಬ್​ ಲೋಕ್​ ಕಾಂಗ್ರೆಸ್​ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರ ಬಗ್ಗೆಯೂ ಕೂಡ ಪ್ರಿಯಾಂಕಾ ಗಾಂಧಿ ಇದೇ ವೇಳೆ ಮಾತನಾಡಿದ್ದಾರೆ.

2021ರ ಸೆಪ್ಟೆಂಬರ್​ನಲ್ಲಿ ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಕ್ಯಾಪ್ಟನ್​ ಅಮರಿಂದರ್ ಸಿಂಗ್​​ರನ್ನು ಸ್ಥಾನದಿಂದ ಕೆಳಗಿಳಿಸಿ, ಚರಣಜಿತ್ ಸಿಂಗ್ ಚನ್ನಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ.

ಅಲ್ಲಿಂದ ಇಲ್ಲಿಯವರೆಗೂ ಕಾಂಗ್ರೆಸ್​​ನ ವರಿಷ್ಠರು, ಅದರಲ್ಲೂ ಗಾಂಧಿ ಕುಟುಂಬದ ಯಾರೂ ಕೂಡ ಈ ಬಗ್ಗೆ ಮಾತನಾಡಿರಲಿಲ್ಲ. ಕಾಂಗ್ರೆಸ್​ ನ ಪಂಜಾಬ್​ ಪ್ರದೇಶ ಸಮಿತಿ ಅಧ್ಯಕ್ಷ ನವಜೋತ್​ ಸಿಂಗ್ ಸಿಧು ಮತ್ತು ಅಮರಿಂದರ್​ ಸಿಂಗ್​ ನಡುವಿನ ಮನಸ್ತಾಪ ಹೆಚ್ಚಾದ ಬೆನ್ನಲ್ಲೇ, ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು.

ಹೀಗಾಗಿ ಅಮರಿಂದರ್​ ಸಿಎಂ ಸ್ಥಾನ ಕಳೆದುಕೊಳ್ಳಲು ನವಜೋತ್​ ಸಿಂಗ್ ಸಿಧು​ ಕಾರಣ ಎಂದು ಹೇಳಲಾಗಿತ್ತು. ಅದಾದ ಮೇಲೆ ಕೂಡ ಕಾಂಗ್ರೆಸ್ ಸಧುರನ್ನು ಸಿಎಂ ಮಾಡದೆ, ಚನ್ನಿಯವರಿಗೆ ಆ ಸ್ಥಾನ ನೀಡಿತ್ತು. ಹಾಗೇ, ಮುಂದಿನ ಅವಧಿಗೂ ಕೂಡ ಚನ್ನಿಯವರೇ ಸಿಎಂ ಅಭ್ಯರ್ಥಿ.

English summary
The two-time chief minister and Punjab Lok Congress supremo Amarinder Singh feels that no single party is going to get a clear majority in the assembly polls, and asserts that his party's alliance with the Bharatiya Janata Party and Shiromani Akali Dal-Sanyukt is on the rise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X