ಮನೆ ನಿರ್ಮಾಣಕ್ಕೂ ಮೊದಲು ತಿಳಿಯಲೇಬೇಕಾದ ವಾಸ್ತು ರಹಸ್ಯ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನಿರ್ಮಾಣದಲ್ಲಿ ಬಾಗಿಲುಗಳು ಮತ್ತು ಕಿಟಕಿಗಳ ಸಂಖ್ಯೆಗೆ ತುಂಬಾ ಮಹತ್ವವಿದೆ. ಬಾಗಿಲುಗಳು ಮತ್ತು ಕಿಟಕಿಗಳು ಸಮ ಸಂಖ್ಯೆಯಲ್ಲಿರಬೇಕಾ ಅಥವಾ ಬೇಸ ಸಂಖ್ಯೆಯಲ್ಲಿರಬೇಕಾ? ಎಂಬ ಪ್ರಶ್ನೆ ಬಹುತೆಕ ಮನೆ ಕಟ್ಟಿಸುವವರಿಗೆ ಇರುತ್ತದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಬಾಗಿಲುಗಳು ಸಂಖ್ಯಾ ಎಷ್ಟಿರಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಬಾಗಿಲುಗಳು ಸಮ ಸಂಖೆಯಲ್ಲಿ ಇರಬೇಕು:
ಉದಾ: 2, 4. 6. 8, 10, 12, 14 ಇತ್ಯಾದಿ.
20, 30, 40 ಹೀಗೆ ಕೊನೆಯಲ್ಲಿ 0 ಬರುವಂತಹ ಸಂಖ್ಯೆಗಳನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ.
ಕೆಲವು ವಾಸ್ತು ತಜ್ಞರ ಪ್ರಕಾರ ಬೆಸ ಸಂಖ್ಯೆ ಬಾಗಿಲುಗಳು ಉತ್ತಮವಲ್ಲ ಎಂದು ನಂಬಲಾಗುತ್ತದೆ.

ಕಿಟಕಿಗಳ ಸಂಖ್ಯೆಯೂ ಮುಖ್ಯ
ಕಿಟಕಿಗಳ ಸಂಖ್ಯೆಯೂ ಸಹ ಸಮ ಸಂಖ್ಯೆಯಲ್ಲೇ ಇರಿಸುವುದು ಉತ್ತಮ.
ಕಿಟಕಿಗಳು ಬಾಗಿಲುಗಳಿಗಿಂತ ಹೆಚ್ಚು ಇದ್ದರೆ ಉತ್ತಮ, ಇದರಿಂದ ಗಾಳಿ ಬೆಳಕು ಚೆನ್ನಾಗಿ ಬರುತ್ತದೆ.
ಗಾಳಿ ಮತ್ತು ಬೆಳಕು:
ಬಾಗಿಲು ಎದರು ಕಿಟಕಿ ಒಂದಕ್ಕೊಂದು ಎದುರಾಗಿದ್ದರೆ ಮನೆಯಲ್ಲಿ ಗಾಳಿಯು ಚೆನ್ನಾಗಿ ಬರುತ್ತದೆ. ಇದು ವಾಸ್ತು ದೃಷ್ಟಿಯಿಂದ ಅತ್ಯಂತ ಮಂಗಳಕರ ಎಂದು ತಜ್ಞರು ಹೇಳುತ್ತಾರೆ.
ಮುಖ್ಯ ದ್ವಾರದ ಪ್ರಾಮುಖ್ಯತೆ:
ಮನೆಯ ಉಳಿದ ಎಲ್ಲಾ ಬಾಗಿಲುಗಳಿಗಿಂತ ಮುಖ್ಯ ದ್ವಾರವು ದೊಡ್ಡದಾಗಿ ಮತ್ತು ಎತ್ತರವಾಗಿರಬೇಕು. ಇದು ಮನೆಯೊಳಗೆ ಧನಾತ್ಮಕ ಶಕ್ತಿ ಮತ್ತು ಸಮೃದ್ದಿಯನ್ನು ಹೆಚ್ಚಿಸುತ್ತದೆ.
ಸ್ನಾನಗೃಹದ ಬಾಗಿಲು:
ಹಳೆಯ ಕಾಲದ ವಾಸ್ತು ಶಾಸ್ತ್ರದ ಪದ್ದತಿಯಲ್ಲಿ ಸ್ನಾನ ಕೋಣೆಯ ಬಾಗಿಲುಗಳನ್ನು ಮನೆಯ ಲೆಕ್ಕಕ್ಕೆ ತೆಗೆದು ಕೊಳ್ಳುತ್ತಿರಲಿಲ್ಲಾ. ಆದರೆ ಆಧುನಿಕ ವಾಸ್ತು ಪ್ರಕಾರ ಮನೆಯ ಒಳಗಡೆಯೇ ಅಟ್ಯಾಚ್ ಬಾತ್ ರೊಮಗಳು ಮಾಡುವುದರಿಂದ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಉತ್ತಮ.
ಬೆಸ ಸಂಖ್ಯೆಯಲ್ಲಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಮ್ಮ ಮನೆಯಲ್ಲಿ ಈಗಾಗಲೇ ಬಾಗಿಲು ಅಥವಾ ಕಿಟಕಿಗಳು ಬೆಸ ಸಂಖ್ಯೆಯಲ್ಲಿದ್ದರೆ ಉದಾಹರಣೆಗೆ 5, 7, 9 ಅವುಗಳನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ ಈ ಕೆಳಗಿನ ಪರಿಹಾರಗಳನ್ನು ಅನುಸರಿಸಬಹುದು.
ಕಿಟಕಿ ಆಳವಡಿಸುವುದು: ಗೋಡೆಯಲ್ಲಿ ಒಂದು ಸಣ್ಣ ಕಿಟಕಿ ಅಥವಾ ವೆಂಟಿಲೇಟರ್ ನಿರ್ಮಿಸುವ ಮೂಲಕ ಸಂಖ್ಯೆಯನ್ನು ಸರಿಪಡಿಸಬಹುದು.
ಪರ್ಯಾಯ ವ್ಯವಸ್ಥೆ: ತಾಂತ್ರಿಕವಾಗಿ ಸಂಖ್ಯೆಯನ್ನು ಸರಿಪಡಿಸಲು ಸಾಧ್ಯವಾಗದಿದ್ದರೆ ವಾಸ್ತು ತಜ್ಞರ ಸಲಹೆಯಂತೆ ಆ ಬಾಗಿಲಿಗೆ ನಿರ್ದಿಷ್ಟ ಯಂತ್ರಗಳನ್ನು ಅಥವಾ ವಾಸ್ತು ಪಿರಮಿಡ್‌ಗಳನ್ನು ಅಳವಡಿಸಬಹುದು.
ಒಟ್ಟಿನಲ್ಲಿ ಸಮ ಸಂಖ್ಯೆಯ ಬಾಗಿಲುಗಳು, ಸಮ ಸಂಖ್ಯೆಯ ಕಿಟಕಿಗಳು ಇರುವುದರಿಂದ ಮತ್ತು ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಶಾಂತಿ, ಸಮೃದ್ದಿ ಮತ್ತು ಅಭವೃದ್ದಿ ಹೊಂದಲು ಸಹಕಾರಿಯಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯ ಪಡುತ್ತಾರೆ.












Click it and Unblock the Notifications