ಅಮರೀಂದರ್ ಜೊತೆ ವೈಮನಸ್ಯ, ಸಭೆಗೂ ಹಾಜರಾಗದ ಸಿಧು

ಚಂಡಿಗಢ, ಜೂನ್ 06: ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಜೊತೆಗೆ ವೈಮನಸ್ಯ ಹೊಂದಿರುವ ಕಾಂಗ್ರೆಸ್ ಮುಖಂಡ, ಸಚಿವ ನವಜೋತ್ ಸಿಧು ಗುರುವಾರ ನಡೆದ ಸಚಿವ ಸಂಪುಟ ಸಭೆಗೂ ಹಾಜರಾಗದೆ ತಮ್ಮ ಮುನಿಸನ್ನು ವ್ಯಕ್ತಪಡಿಸಿದ್ದಾರೆ.

ಈ ನಡೆ ಪಂಜಾಬ್ ಕಾಂಗ್ರೆಸ್ ಎರಡು ಬಣಗಳಾಗಿ ಒಡೆಯುವ ಸೂಚನೆಯನ್ನು ನೀಡಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಲಾಗಾಯ್ತೂ, ಪಂಜಾಬಿನಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಅಮರೀಂದರ್ ಸಿಂಗ್ ಬಯಸಿದ್ದರು. ಇಂದು ಸಹ ಸಚಿವ ಸಂಪುಟ ಬದಲಿಸುವ ಬಗ್ಗೆಯೇ ಸಭೆ ನಡೆಸಲು ನಿರ್ಧರಿಸಲಾಗಿತ್ತು.

Navjot Singh Sidhu skipped a cabinet meeting

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿಧು ಅವರೇ ಕಾರಣ ಎಂದು ಅಮರೀಂದರ್ ಸಿಂಗ್ ಹೇಳಿದ್ದರು. ಜೊತೆಗೆ ಸಿಧು ಅವರನ್ನು ಸಂಪುಟದಿಂದ ಕಿತ್ತೆಸೆಯಲು ನಿರ್ಧರಿಸಿದ್ದರು. ಸಿಧು ಅವರ ಭಾರತ ವಿರೋಧಿ ಹೇಳಲಿಕೆಗಳು, ಪಾಕಿಸ್ತಾನ ಪರವಾದ ನಿಲುವು ಇವು ಪಂಜಾಬಿನಲ್ಲೂ ಕಾಂಗ್ರೆಸ್ ಸರಕಾರದ ಪತನಕ್ಕೆ ಕಾರಣವಾಗಬಹುದು ಎಂಬುದು ಅಮರೀಂದರ್ ಆತಂಕವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+