• search
  • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಲೆಯಾದವನಲ್ಲಿತ್ತು ಕೊರೊನಾ; ತನಿಖೆಗೆ ಹೋದವರಿಗೆ ಸಿಕ್ತು ಕ್ವಾರಂಟೈನ್ ಶಿಕ್ಷೆ!

|

ಲೂಧಿಯಾನಾ, ಮೇ 15: ಕೊರೊನಾ ವೈರಸ್ ಎಲ್ಲಿ ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ಹೇಳಲು ಯಾರಿಂದಲೂ ಸಾದ್ಯವಿಲ್ಲ ಎಂಬುದಕ್ಕೆ ಇಂದು ಪಂಜಾಬ್‌ನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.

ಪಂಜಾಬ್‌ನ ಲೂಧಿಯಾನಾದಲ್ಲಿ ಗುರುವಾರ 15 ವರ್ಷದ ಬಾಲಕನ ಕೊಲೆಯಾಗಿತ್ತು. ಸಹಜವಾಗಿ ಶವಸಂಸ್ಕಾರದ ವೇಳೆ ಕೊರೊನಾ ತಪಾಸಣೆ ಕೂಡ ನಡೆಸಿದ್ದಾರೆ. ಈ ವೇಳೆ ಕೊಲೆಯಾಗಿ ಮೃತಪಟ್ಟ ಬಾಲಕನಿಗೆ ಕೊರೊನಾ ಪಾಸಿಟಿವ್ ಬಂದು ಬಿಟ್ಟಿದೆ.

ಮಹಾರಾಷ್ಟ್ರದಿಂದ ಪಂಜಾಬ್ ಗೆ ತೆರಳಿದ 23 ಮಂದಿಗೂ ಕೊರೊನಾ!

ಇದರಿಂದ ಕೊಲೆ ಬಗ್ಗೆ ತನಿಖೆ ನಡೆಸಲು ತೆರಳಿದ್ದ ತನಿಖಾ ತಂಡದ 11 ಪೊಲೀಸ್, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗೆ ಈಗ ಕ್ವಾರಂಟೈನ್ ಶಿಕ್ಷೆ ಸಿಕ್ಕಂತಾಗಿದೆ. ಲೂಧಿಯಾನಾ ಸ್ಥಳೀಯ ಆರೋಗ್ಯ ಅಧಿಕಾರಿಗಳು ಇದೀಗ ಆ 11 ಜನರನ್ನೂ ಕ್ವಾರಂಟೈನ್‌ಗೆ ಕಳುಹಿಸಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.

ಇನ್ನು ಪಂಜಾಬ್‌ನ ಬಹುದೊಡ್ಡ ಜಿಲ್ಲೆಯಾಗಿರುವ ಲೂಧಿಯಾನಾದಲ್ಲಿ ಕೊರೊನಾ ಹಾವಳಿ ವ್ಯಾಪಕವಾಗಿದೆ. ಲೂಧಿಯಾನಾ ಜಿಲ್ಲೆಯಲ್ಲಿ ಇದುವರೆಗೆ 143 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 6 ಜನ ಮೃತಪಟ್ಟಿದ್ದಾರೆ.

English summary
Murdered Person Tested Positive Covid19 In Punjab. investigative officers sent to quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X