ಗಡಿಯಲ್ಲಿ ಪಾಕ್ ನುಸುಳುಕೋರರ ಸದೆಬಡಿದ ಭಾರತೀಯ ಸೇನೆ
ಅಮೃತಸರ, ಏಪ್ರಿಲ್ 27: ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ನುಸುಳುಕೋರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.
ಪಂಜಾಬ್ ನ ಅಮೃತಸರದ ಭಿಂಡಿ ಸೈದಾ ಗ್ರಾಮದ ಸಮೀಪದಲ್ಲಿ ಗಡಿಯಲ್ಲಿ ಅಕ್ರಮವಾಗಿ ಒಳ ನಸುಳುತ್ತಿದ್ದ ನುಸುಳಕೋರನ್ನು ಸೈನಿಕರು ಹತ್ಯೆಗೈದಿದ್ದಾರೆ.
ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್ ಎಫ್ ಸೈನಿಕರು ಕರ್ತವ್ಯದಲ್ಲಿದ್ದಾಗ ಓರ್ವ ವ್ಯಕ್ತಿ ಗಡಿಯೊಳಗೆ ನುಸುಳುತ್ತಿದ್ದ. ಇದನ್ನು ಗಮನಿಸಿದ ಸೈನಿಕರು ಸತತವಾಗಿ ಎಚ್ಚರಿಕೆ ನೀಡುತ್ತಿದ್ದರೂ ಆತ ಸೈನಿಕರ ಮಾತನ್ನು ಕಿವಿಗೆ ಹಾಕಿಕೊಳ್ಳದೇ ತನ್ನ ಕಾರ್ಯ ಮುಂದುವರೆಸಿದ್ದ.

ಭಾರತ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ನುಸುಳುಕೋರನ್ನು ಭಾರತೀಯ ಸೇನೆಯ ಸೈನಿಕರು ಭಾನುವಾರ ತಡರಾತ್ರಿ ಹೊಡೆದುರುಳಿಸಿದ್ದಾರೆ.
ಶೋಪಿಯಾನ್‌ನಲ್ಲಿ ಭದ್ರತಾ ಪಡೆ ಉಗ್ರರ ನಡುವೆ ಗುಂಡಿನ ಚಕಮಕಿ:ಓರ್ವ ಉಗ್ರ ಹತ
ಹೀಗಾಗಿ ಅನ್ಯಮಾರ್ಗವಿಲ್ಲದೇ ಸೈನಿಕರು ಬಂದೂಕಿನ ಮೂಲಕ ಗುಂಡು ಹಾರಿಸಿದರು. ಈ ವೇಳೆ ಆತ ಗುಂಡೇಟಿನಿಂದಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ಸೇನಾಮೂಲಗಳ ತಿಳಿಸಿವೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಳಿಕ ಮೃತದೇಹವನ್ನು ಸೈನಿಕರು ಸುತ್ತುವರೆದಿದ್ದು, ಈ ವೇಳೆ ಆತನ ಬಳಿ ಯಾವುದೇ ರೀತಿಯ ಶಸ್ತ್ರಾಸ್ತ್ರ, ಮದ್ದು-ಗುಂಡುಗಳು, ಇತರೆ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.












Click it and Unblock the Notifications