ಸನ್ನಿ ಡಿಯೋಲ್ ಗೆ ಟಿಕೆಟ್, ವಿನೋದ್ ಖನ್ನಾ ಪತ್ನಿಗೆ ಬೇಸರ
ಅಮೃತಸರ್, ಏಪ್ರಿಲ್ 25: ಪಂಜಾಬಿನ ಗುರುದಾಸಪುರ ಕ್ಷೇತ್ರದಿಂದ ಸ್ಪರ್ಧಿಸಲು ಧರ್ಮೇಂದ್ರ ಅವರ ಪುತ್ರ ನಟ ಸನ್ನಿ ಡಿಯೋಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಕ್ಷೇತ್ರವನ್ನು ಸಂಸದರಾಗಿ ಹಿರಿಯ ನಟ ವಿನೋದ್ ಖನ್ನಾ ಪ್ರತಿನಿಧಿಸುತ್ತಿದ್ದರು. ಈಗ ಖನ್ನಾ ಕುಟುಂಬದ ಬದಲು ಧರ್ಮೇಂದ್ರ ಅವರ ಪುತ್ರನಿಗೆ ಟಿಕೆಟ್ ಸಿಕ್ಕಿರುವುದರ ಬಗ್ಗೆ ದಿವಂಗತ ಖನ್ನಾ ಅವರ ಪತ್ನಿ ಕವಿತಾ ಬೇಸರ ವ್ಯಕ್ತಪಡಿಸಿದ್ದಾರೆ.
2017ರಲ್ಲಿ ವಿನೋದ್ ಖನ್ನಾ ಅವರ ಮರಣ ನಂತರ ಅವರ ಪತ್ನಿ ಕವಿತಾ ಖನ್ನಾ ಅಥವಾ ಅಕ್ಷಯ್ ಖನ್ನಾ ಅವರನ್ನು ಕರೆ ತರುವ ಸುದ್ದಿ ಹಬ್ಬಿತ್ತು. ಆದರೆ, ಈಗ 62 ವರ್ಷ ವಯಸ್ಸಿನ ಸನ್ನಿ ಡಿಯೋಲ್ ಗೆ ಟಿಕೆಟ್ ಸಿಕ್ಕಿದೆ.
ಪಕ್ಷದ ಈ ನಿರ್ಧಾರದಿಂದ ನನಗೆ ಮಾತ್ರವಲ್ಲ, ನನ್ನನ್ನು ಸಂಸತ್ಗೆ ಕಳುಹಿಸಲು ನಿರ್ಧರಿಸಿದ್ದ ಮತದಾರರ ಮನಸ್ಸಿಗೂ ಘಾಸಿಯನ್ನುಂಟು ಮಾಡಲಾಗಿದೆ, ನನ್ನ ಮುಂದಿನ ನಿರ್ಧಾರದ ಬಗ್ಗೆ ವಿನೋದ್ ಖನ್ನಾ ಬೆಂಬಲಿಗರ ಜೊತೆ ಚರ್ಚಿಸುತ್ತೇನೆ ಎಂದು ಕವಿತಾ ಹೇಳಿದ್ದಾರೆ. ಆದರೆ, ಕವಿತಾ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಬಿಜೆಪಿ ನಂಬಿಸಿ ಮೋಸಮಾಡಿದೆ ಎಂದಿದ್ದಾರೆ
ಪಂಜಾಬ್ನ ಗುರುದಾಸಪುರದಿಂದ 1998, 1999, 2004 ಮತ್ತು 2014ರಲ್ಲಿ ವಿನೋದ್ ಖನ್ನಾ ಗೆಲುವು ಸಾಧಿಸಿ, ನಾಲ್ಕು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿದ್ದರು. ಕವಿತಾ ಖನ್ನಾ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ತಮಗೆ ಟಿಕೆಟ್ ನೀಡದೆ ಸನ್ನಿ ಡಿಯೋಲ್ಗೆ ಟಿಕೆಟ್ ನೀಡಿರುವುದರಿಂದ ಸಹಜವಾಗಿ ಬೇಸರಗೊಂಡು, ಬಿಜೆಪಿ ನಂಬಿಸಿ ಮೋಸಮಾಡಿದೆ ಎಂದಿದ್ದಾರೆ.

3 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಸ್ಪರ್ಧೆ
ಪಂಜಾಬಿನಲ್ಲಿ ಶಿರೋಮಣಿ ಅಕಾಲಿ ದಳದ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಒಟ್ಟು 13 ಲೋಕಸಭಾ ಸ್ಥಾನಗಳ ಪೈಕಿ ಅಮೃತಸರ್, ಗುರ್ ದಾಸ್ಪುರ್, ಹೋಶಿಯಾರ್ ಪುರ್ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಅಮೃತಸರ ಕ್ಷೇತ್ರಕ್ಕೆ ನಟಿ ಪೂನಂ ದಿಲ್ಲೋನ್ ಹಾಗೂ ರಾಜಿಂದರ್ ಸಿಂಗ್ ಹೆಸರು ಕೂಡ ಕೇಳಿ ಬಂದಿದೆ.

2017ರಲ್ಲೇ ಕವಿತಾ ಹೆಸರು ಕೇಳಿ ಬಂದಿತ್ತು
2017ರಲ್ಲಿ ಹಾಲಿ ಸಂಸದ ವಿನೋದ್ ಖನ್ನಾ ಅವರ ಮರಣ ನಂತರ ಅವರ ಪತ್ನಿ ಕವಿತಾ ಖನ್ನಾ ಅಥವಾ ಅಕ್ಷಯ್ ಖನ್ನಾ ಅವರನ್ನು ಕರೆ ತರುವ ಸುದ್ದಿ ಹಬ್ಬಿತ್ತು. ಆದರೆ, ಗುರ್ ದಾಸ್ ಪುರ್ ಉಪಚುನಾವಣೆಯಲ್ಲಿ ಮುಂಬೈ ಮೂಲದ ಉದ್ಯಮಿ ಸ್ವರನ್ ಸಲಾರಿಯಾ ಅವರಿಗೆ ಟಿಕೆಟ್ ನೀಡಿತ್ತು. ಸಲಾರಿಯಾ ಅವರು ಕಾಂಗ್ರೆಸ್ಸಿನ ಸುನೀಲ್ ಜಖಾರ್ ಅವರನ್ನು 1.93 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ, ಕವಿತಾ ಅವರು ಬಿಜೆಪಿ ವಿರುದ್ಧ ಆಗ ದನಿಯೆತ್ತಿರಲಿಲ್ಲ.

ಮೋದಿ ಕೂಡಾ ಖನ್ನಾರನ್ನು ಹೊಗಳಿದ್ದರು
ಜನವರಿ 03ರಂದು ಧನ್ವಾದ್ ನಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಗುರ್ ದಾಸ್ಪುರ್ ಕ್ಷೇತ್ರದಲ್ಲಿ ಸಂಸದರಾಗಿದ್ದ ವಿನೋದ್ ಖನ್ನಾ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಅನುಕರಣೀಯ ಎಂದು ಹೊಗಳಿದ್ದರು. ಹೀಗಾಗಿ, ಕವಿತಾ ಖನ್ನಾ ಅವರಿಗೆ ಈ ಬಾರಿಯಾದರೂ ತಮ್ಮ ಕುಟುಂಬಕ್ಕೆ ಟಿಕೆಟ್ ಸಿಗಬಹುದು ಎಂಬ ಆಸೆ ಚಿಗುರೊಡೆದಿತ್ತು.

ಸಲಾರಿಯಾಗೂ ಕೈಕೊಟ್ಟ ಬಿಜೆಪಿ
ಉಪಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದಿದ್ದ ಉದ್ಯಮಿ ಸಲಾರಿಯಾಗೂ ಬಿಜೆಪಿ ಕೈಕೊಟ್ಟಿದೆ. ಹೈಕಮಾಂಡ್ ನಿರ್ಧಾರದಿಂದ ಬೇಸರಗೊಂಡಿರುವ ಸಲಾರಿಯಾ ಅವರು ಏಪ್ರಿಲ್ 27ರಂದು ಸುದ್ದಿಗೋಷ್ಠಿ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪಠಾಣ್ ಕೋಟ್ ಜಿಲ್ಲೆಯ ಗುರದಾಸಪುರ ಕ್ಷೇತ್ರಕ್ಕೆ ಸೇರುವ ಛೊಹಾನಾ ಗ್ರಾಮದವರಾದರೂ ಮುಂಬೈನಲ್ಲಿ ಉದ್ಯಮ ಹೊಂದಿದ್ದಾರೆ. ಹಾಲಿ ಸಂಸದರಾದರೂ ಸಲಾರಿಯಾ ಅವರಿಗೆ ಟಿಕೆಟ್ ಕೈ ತಪ್ಪಿದೆ.
-
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್












Click it and Unblock the Notifications