• search
 • Live TV
ಅಮೃತಸರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಜಾಬ್‌ನ ಪ್ರತಿ ಮನೆಗೂ 300 ಯೂನಿಟ್‌ ಉಚಿತ ವಿದ್ಯುತ್‌

|
Google Oneindia Kannada News

ಅಮೃತಸರ, ಜುಲೈ01; ಜುಲೈ 1ರಿಂದ ಪ್ರತಿ ಮನೆಗೆ ಪ್ರತಿ ತಿಂಗಳು 300 ಯೂನಿಟ್‌ ಉಚಿತ ವಿದ್ಯುತ್ ಸಿಗಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.

ತಮ್ಮ ಸರ್ಕಾರವು ಹೇಳಿದಂತೆ ರಾಜ್ಯದ ಜನರಿಗೆ ಮಾಡಿದ ಭರವಸೆಯನ್ನು ಪೂರೈಸುತ್ತಿದೆ. ಜುಲೈ 1 ರಿಂದ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಎಎಪಿ ಸರ್ಕಾರ ಈ ಹಿಂದೆ ಘೋಷಿಸಿತ್ತು ಎಂದು ಮಾನ್‌ ಹೇಳಿದರು.

ಒಂದೇ ಶಾಲೆಯ 32 ಮಕ್ಕಳಿಗೆ ಚಿಕನ್ ಪಾಕ್ಸ್‌, ಒಂದು ವಾರ ರಜೆ ಘೋಷಣೆ ಒಂದೇ ಶಾಲೆಯ 32 ಮಕ್ಕಳಿಗೆ ಚಿಕನ್ ಪಾಕ್ಸ್‌, ಒಂದು ವಾರ ರಜೆ ಘೋಷಣೆ

ಹಿಂದಿನ ಸರ್ಕಾರಗಳು ಚುನಾವಣಾ ಸಮಯದಲ್ಲಿ ಭರವಸೆಗಳನ್ನು ನೀಡುತ್ತಿದ್ದವು. ಅವು ಭರವಸೆಗಳನ್ನು ಈಡೇರಿಸುವ ಹೊತ್ತಿಗೆ ಐದು ವರ್ಷಗಳು ಕಳೆದು ಹೋಗುತ್ತಿದ್ದವು. ಆದರೆ ನಮ್ಮ ಸರ್ಕಾರವು ಪಂಜಾಬಿನ ಇತಿಹಾಸದಲ್ಲಿ ಹೊಸ ಉದಾಹರಣೆಯನ್ನು ನೀಡಿದೆ.

ಇಂದು ನಾವು ಪಂಜಾಬಿಗಳಿಗೆ ನೀಡಿದ ಮತ್ತೊಂದು ಭರವಸೆಯನ್ನು ಈಡೇರಿಸಲಿದ್ದೇವೆ. ಇಂದಿನಿಂದ ಪ್ರತಿ ಪಂಜಾಬ್‌ನ ಕುಟುಂಬವು ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಪಡೆಯುತ್ತದೆ ಎಂದು ಭಗವಂತ್‌ ಮಾನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ದೆಹಲಿ ಅಗ್ನಿ ಆರುವ ಮುನ್ನ ಅಮೃತಸರದ ವೈದ್ಯಕೀಯ ಕಾಲೇಜಿನಲ್ಲಿ ಬೆಂಕಿ ದೆಹಲಿ ಅಗ್ನಿ ಆರುವ ಮುನ್ನ ಅಮೃತಸರದ ವೈದ್ಯಕೀಯ ಕಾಲೇಜಿನಲ್ಲಿ ಬೆಂಕಿ

2022ರ ಪಂಜಾಬ್ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ಭರವಸೆಗಳಲ್ಲಿ ಪ್ರತಿ ಮನೆಗೆ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದು ಒಂದಾಗಿತ್ತು.

ಅದರಂತೆ ಈಗ ಪಂಜಾಬ್‌ ಸರ್ಕಾರ ಪ್ರತಿ ಮನೆಗೆ 300 ಯೂನಿಟ್‌ ಉಚಿತ ವಿದ್ಯುತ್‌ ನೀಡಲಿದೆ. ಈ ಬಗ್ಗೆ ಎಎಪಿ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮಾತನಾಡಿ, ದೆಹಲಿಯ ನಂತರ ಜನರಿಗೆ ಉಚಿತ ವಿದ್ಯುತ್ ಒದಗಿಸುವ ಎರಡನೇ ರಾಜ್ಯ ಪಂಜಾಬ್ ಆಗಿದೆ ಎಂದು ಹೇಳಿದರು.

ಗ್ಯಾರಂಟಿ ರಿಯಾಲಿಟಿ ಆಗುತ್ತದೆ: ಚೀಮಾ

ಗ್ಯಾರಂಟಿ ರಿಯಾಲಿಟಿ ಆಗುತ್ತದೆ: ಚೀಮಾ

ಇಂದು ಐತಿಹಾಸಿಕ ದಿನವಾಗಿದ್ದು, ದೆಹಲಿಯ ನಂತರ ಲೈಫ್‌ಲೈನ್ ವಿದ್ಯುತ್ ಅನ್ನು ಉಚಿತವಾಗಿ ಪಡೆಯುವ ಎರಡನೇ ರಾಜ್ಯ ಪಂಜಾಬ್ ಆಗಿದೆ. ಪಂಜಾಬಿಗಳಿಗೆ ಕೇಜ್ರಿವಾಲ್ ಡಿ ಪೆಹ್ಲಿ (ಮೊದಲ) ಗ್ಯಾರಂಟಿ ರಿಯಾಲಿಟಿ ಆಗುತ್ತದೆ ಎಂದು ಚಡ್ಡಾ ಟ್ವೀಟ್ ಮಾಡಿದ್ದಾರೆ. ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ಜೂನ್ 27ರಂದು ಎಎಪಿ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಮಂಡಿಸುವಾಗ 300 ಯೂನಿಟ್ ಉಚಿತ ವಿದ್ಯುತ್ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ 1,800 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಚಡ್ಡಾ ಹೇಳಿದ್ದರು.

ಪಂಜಾಬಿಗಳಿಗೆ ಇದು ದೊಡ್ಡ ಪರಿಹಾರ

ಪಂಜಾಬಿಗಳಿಗೆ ಇದು ದೊಡ್ಡ ಪರಿಹಾರ

ಎಎಪಿ ಸರ್ಕಾರವು ಜುಲೈ 1 ರಿಂದ ಜಾರಿಗೆ ಬರುವಂತೆ ಪಂಜಾಬ್‌ನ ಎಲ್ಲಾ ನಾಗರಿಕರರ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ವಿದ್ಯುತ್ ಸರಬರಾಜನ್ನು ಉಚಿತವಾಗಿ ಒದಗಿಸುವ ಮೂಲಕ ಪಂಜಾಬ್‌ನ ಜನರಿಗೆ ನೀಡಿದ ತನ್ನ ಮೊದಲ ಭರವಸೆಯನ್ನು ಪೂರೈಸುತ್ತಿದೆ. ಅತಿಯಾದ ವಿದ್ಯುತ್ ಬಿಲ್‌ಗಳಿಂದ ತತ್ತರಿಸುತ್ತಿರುವ ಪಂಜಾಬಿಗಳಿಗೆ ಇದು ದೊಡ್ಡ ಪರಿಹಾರವನ್ನು ತರುತ್ತದೆ ಎಂದು ಚೀಮಾ ಹೇಳಿದ್ದಾರೆ.

ಆಗಸ್ಟ್‌ 15ರಿಂದಲೇ 75 ಮೊಹಲ್ಲಾ ಚಿಕಿತ್ಸಾಲಯ

ಆಗಸ್ಟ್‌ 15ರಿಂದಲೇ 75 ಮೊಹಲ್ಲಾ ಚಿಕಿತ್ಸಾಲಯ

ಪಂಜಾಬ್‌ ರಾಜ್ಯದ ಮಹಿಳೆಯರಿಗೆ ತಿಂಗಳಿಗೆ 1000 ರೂಪಾಯಿಗಳನ್ನು ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಲಾಗದಿದ್ದರೂ, ಆಗಸ್ಟ್‌ 15ರಿಂದಲೇ 75 ಮೊಹಲ್ಲಾ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸಲು ಘೋಷಿಸಿತ್ತು. ಮುಂದುವರಿದು ಜುಲೈ 1ರಿಂದ ರಾಜ್ಯದ ಜನರಿಗೆ 300 ಯುನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಈಗ ಅದರಂತೆ ಉಚಿತ 300 ಯೂನಿಟ್‌ ವಿದ್ಯುತ್‌ ನೀಡಲು ಮುಂದಾಗಿದೆ.

8,000 ಕೋಟಿ ರೂ. ಮೊತ್ತದಲ್ಲಿ ಪ್ರತಿ ಮನೆಗೆ ವಿದ್ಯುತ್‌

8,000 ಕೋಟಿ ರೂ. ಮೊತ್ತದಲ್ಲಿ ಪ್ರತಿ ಮನೆಗೆ ವಿದ್ಯುತ್‌

2022-23ರ ಆರ್ಥಿಕ ವರ್ಷದಲ್ಲಿ ಪಂಜಾಬ್‌ ಸರ್ಕಾರವು ವಿವಿಧ ವರ್ಗಗಳಿಗೆ ವಿದ್ಯುತ್‌ ಸಬ್ಸಿಡಿಗಾಗಿ 22,962 ಕೋಟಿ ರೂಪಾಯಿ ಪಾವತಿಸಬೇಕಾಗುತ್ತದೆ. ಇದು ಸರ್ಕಾರವು ವಿದ್ಯುತ್‌ ಉಪಯುಕ್ತತೆಗೆ ಪಾವತಿಸಬೇಕಾದ ದಾಖಲೆಯಾಗಿದೆ. ಇಂದಿನ ಹಣಕಾಸು ವರ್ಷದಿಂದ 8,000 ಕೋಟಿ ರೂ. ಮೊತ್ತದಲ್ಲಿ ಪ್ರತಿ ಮನೆಗೆ 300 ಯುನಿಟ್‌ ಉಚಿತ ಘಟಕಗಳನ್ನು ಒದಗಿಸಲು ರಾಜ್ಯವು ಭರಿಸುವ ವೆಚ್ಚವನ್ನು ಒಳಗೊಂಡಿದೆ ಎಂದು ಪಂಜಾಬ್‌ ರಾಜ್ಯದ ಬಜೆಟ್‌ ಮಂಡಿಸುವ ವೇಳೆ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದರು.

Recommended Video

   Rohit ಗಾಗಿ ಕಾಯುತ್ತಿರುವ ಟೀಮ್ ಇಂಡಿಯಾ ಕೋಚ್ ರಾಹುಲ್ ! | *Cricket | OneIndia Kannada
   English summary
   Punjab Chief Minister Bhagwant Mann announced that each house in state will get 300 units of free electricity every month from July 1.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X