ವೈಎಸ್ಸಾರ್ ಪಟ್ಟಿ ಪ್ರಕಟ : ವೈಎಸ್ ಅವಿನಾಶ್ ರೆಡ್ಡಿ ಸೇರಿ 25 ಅಭ್ಯರ್ಥಿಗಳು

ಅಮರಾವತಿ, ಮಾರ್ಚ್ 17: ವೈಎಸ್ಸಾರ್ ಕಾಂಗ್ರೆಸ್ ಪಕ್ಷವು 2019ರ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ. ಭಾನುವಾರದಂದು 175 ವಿಧಾನಸಭಾ ಕ್ಷೇತ್ರ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ.

2014ರಲ್ಲಿ ಗೆಲುವು ಕಂಡ ಇಬ್ಬರು ಸಂಸದರಿಗೆ ಟಿಕೆಟ್ ನೀಡಲಾಗಿದೆ. ರಾಜಂಪೇಟ್ ನಿಂದ ಪಿವಿ ಮಿಧುನ್ ರೆಡ್ಡಿ ಹಾಗೂ ಕಡಪದಿಂದ ವೈಎಸ್ ಅವಿನಾಶ್ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ.

ಮಿಕ್ಕಂತೆ ಕರ್ನೂಲ್ ನಿಂದ ಸಂಜೀವ್ ಕುಮಾರ್, ಚಿತ್ತೂರ್ ರೆಡ್ಡಪ್ಪ, ಆರಕುನಿಂದ ಮಾಧವಿ, ಅಮಲಾಪುರಂನಿಂದ ಅನುರಾಧಾ, ಅನಂತಪುರದಿಂದ ತಲ್ಲರಿ ರಂಗಯ್ಯ, ಹಿಂದೂಪುರದಿಂದ ಗೊರಂಟ್ಲಾ ಮಾಧವ್ ಅವರಿಗೆ ಟಿಕೆಟ್ ಸಿಕ್ಕಿದೆ.

YSR Congress party announces list of candidates for LS, assembly polls

ಏಪ್ರಿಲ್ 11ರ ಚುನಾವಣೆಗಾಗಿ ಮೊದಲ ಪಟ್ಟಿಯಲ್ಲಿ 9 ಮಂದಿ ಅಭ್ಯರ್ಥಿಗಳನ್ನು ಹೆಸರಿಸಲಾಗಿತ್ತು. ವಿಧಾಸಭಾ ಕ್ಷೇತ್ರ ಅಭ್ಯರ್ಥಿಗಳ ಪೈಕಿ ಟಿಡಿಪಿ ತೊರೆದು ವೈಎಸ್ಸಾರ್ ಕಾಂಗ್ರೆಸ್ ಸೇರಿದ್ದ ಮೊದುಗುಲ ವೇಣುಗೋಪಾಲ್ ರೆಡ್ಡಿ ಅವರಿಗೆ ಗುಂಟೂರಿನ ಟಿಕೆಟ್ ಸಿಕ್ಕಿದೆ. ಮಾಜಿ ಸಂಸದರಾದ ವಂಗಾ ಗೀತಾ ಅವರಿಗೆ ಕಾಕಿನಾಡ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ.

ಎಂಎಲ್ ಸಿ ಮಗುಂಟಾ ಶ್ರೀನಿವಾಸುಲು ರೆಡ್ಡಿ ಅವರಿಗೆ ಓಂಗೊಲೆ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ. 2004 ಹಾಗೂ 2009 ರಲ್ಲಿ ಓಂಗೋಲೆ ಪ್ರತಿನಿಧಿಸಿದ್ದ ಶ್ರೀನಿವಾಸುಲು ಅವರನ್ನು 2014ರಲ್ಲಿ ವೈಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿದ್ದರು.

ಟಿಡಿಪಿಯಿಂದ ಬಂದ ಅಡಾಲಾ ಪ್ರಭಾಕರ್ ರೆಡ್ಡಿ ಅವರಿಗೆ ತಿರುಪತಿ ಕ್ಷೇತ್ರ ಸಿಕ್ಕಿದೆ. ನೆಲ್ಲೂರ್ ವಿಧಾನಸಭಾ ಕ್ಷೇತ್ರದಿಂದ ಟಿಡಿಪಿ ಪಡೆದಿದ್ದ ಪ್ರಭಾಕರ್ ಅವರು ಶನಿವಾರದಂದು ವೈಎಸ್ಸಾರ್ ಪಕ್ಷ ಸೇರಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+