Get Updates
Get notified of breaking news, exclusive insights, and must-see stories!

ತಿರುಪತಿ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಿಸಿಲ್ಲವೇಕೆ?

ತಿರುಪತಿ, ಮಾರ್ಚ್ 23: ಆಂಧ್ರಪ್ರದೇಶದ ಪ್ರತಿಷ್ಠಿತ ತಿರುಪತಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಭಾರತೀಯ ಜನತಾ ಪಕ್ಷ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಎರಡು ತಿಂಗಳ ಹಿಂದೆಯಿಂದಲೇ ಹರಿದಾಡುತ್ತಿದೆ. ವರದಿಗಳ ಪ್ರಕಾರ ಮಾಜಿ ಐಎಎಸ್ ಅಧಿಕಾರಿ ರತ್ನಪ್ರಭಾ ಅವರು ಈ ಎರಡು ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ತಿರುಪತಿಯಿಂದ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿತ್ತು. ಆದರೆ, ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ.

ಬಿಜೆಪಿ ಬೆಂಬಲಿತ ಜನಸೇನಾದ ಮುಖ್ಯಸ್ಥ ಪವನ್ ಕಲ್ಯಾಣ್ ಅಭ್ಯರ್ಥಿ ಆಯ್ಕೆ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರೊಡನೆ ಚರ್ಚಿಸಿ ನಿರ್ಣಯ ತೆಗೆದುಕೊಂಡ ಬಳಿಕವೇ ರತ್ನಪ್ರಭಾ ಅವರ ಆಯ್ಕೆಯಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಈ ಬಗ್ಗೆ ಇನ್ನೂ ತನ್ನ ನಿರ್ಧಾರವನ್ನು ಪ್ರಕಟಿಸಿಲ್ಲ.

ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಕೊವಿಡ್ 19ನಿಂದಾಗಿ ಮೃತಪಟ್ಟಿದ್ದು, ಉಪ ಚುನಾವಣೆ 2021ರ ಏಪ್ರಿಲ್ 17ರಂದು ಮತದಾನ ನಡೆಯಲಿದೆ. ಮೇ 2ಕ್ಕೆ ಫಲಿತಾಂಶ ಹೊರ ಬರಲಿದೆ.

ಬಿಜೆಪಿ ಅಭ್ಯರ್ಥಿ ವಿರುದ್ಧದ ಎದುರಾಳಿಗಳು ಸಜ್ಜು

ಬಿಜೆಪಿ ಅಭ್ಯರ್ಥಿ ವಿರುದ್ಧದ ಎದುರಾಳಿಗಳು ಸಜ್ಜು

ಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ನಿರೀಕ್ಷೆಯಂತೆ ಸ್ಥಳೀಯ ವೈದ್ಯ ಡಾ. ಎಂ ಗುರುಮೂರ್ತಿ ಅವರನ್ನು ಕಣಕ್ಕಿಳಿಸಲಾಗಿದೆ. ತೆಲುಗುದೇಶಂ ಪಕ್ಷ(ಟಿಡಿಪಿ)ದಿಂದ ಮಾಜಿ ಕೇಂದ್ರ ಸಚಿವೆ ಪನಬಾಕ ಲಕ್ಷ್ಮಿ ಅವರನ್ನು ಮತ್ತೊಮ್ಮೆ ಸ್ಪರ್ಧಿಸಲು ಸೂಚಿಸಲಾಗಿದೆ. ಕಳೆದ ಬಾರಿ ಎರಡನೇ ಸ್ಥಾನಕ್ಕೆ ಲಕ್ಷ್ಮಿ ಕುಸಿದಿದ್ದರು.

ಬಿಜೆಪಿಯಿಂದ ಮೂವರು ಆಕಾಂಕ್ಷಿಗಳು

ಬಿಜೆಪಿಯಿಂದ ಮೂವರು ಆಕಾಂಕ್ಷಿಗಳು

ಕರ್ನಾಟಕದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಕೆ ರತ್ನಪ್ರಭಾ ಅಲ್ಲದೆ, ಮಾಜಿ ಐಎಎಸ್ ಅಧಿಕಾರಿ ದಾಸರಿ ಶ್ರೀನಿವಾಸುಲು, ಮಾಜಿ ಅಧಿಕಾರಿ, ಮಾಜಿ ಸಚಿವ ರವೆಲಾ ಕಿಶೋರ್ ಬಾಬು ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ದಾಸರಿ ಶ್ರೀನಿವಾಸುಲು ಪರ ಲಾಬಿ ನಡೆಸಿರುವ ಸ್ಥಳೀಯ ಬಿಜೆಪಿ ಮುಖಂಡರು, ಬಿಜೆಪಿ ವರಿಷ್ಠರು ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

2019ರಲ್ಲಿ ತಿರುಪತಿ ಲೋಕಸಭಾ ಚುನಾವಣೆ

2019ರಲ್ಲಿ ತಿರುಪತಿ ಲೋಕಸಭಾ ಚುನಾವಣೆ

2019ರಲ್ಲಿ ಬಿ ದುರ್ಗಾ ಪ್ರಸಾದ್ ರಾವ್ 7,22,877 (ಶೇ 55.03) ಮತಗಳನ್ನು ಪಡೆದು ಜಯ ಗಳಿಸಿದ್ದರು, ಟಿಡಿಪಿಯ ಪಿ ಲಕ್ಷ್ಮಿ4,94,501 ಮತ ( ಶೇ 37.65 ಮತ) ಗಳಿಸಿ ಎರಡನೇ ಸ್ಥಾನ ಗಳಿಸಿದ್ದರು. ನೋಟಾ 25,781 ಮತಗಳು ಬಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ನೋಟಾಗಿಂತ ಕಡಿಮೆ 24,039 ಮತ ಗಳಿಸಿದ್ದರು.

ಸರ್ವೆಪಲ್ಲಿ, ಗುಡೂರು(ಎಸ್ ಸಿ), ಸುಲ್ಲೂರ್ ಪೇಟ(ಎಸ್ ಸಿ), ವೆಂಕಟಗಿರಿ, ತಿರುಪತಿ, ಶ್ರೀಕಾಳಹಸ್ತಿ, ಸತ್ಯವೇಡು (ಎಸ್ ಸಿ) ಏಳು ವಿಧಾನಸಭಾ ಕ್ಷೇತ್ರಗಳನ್ನು ತಿರುಪತಿ ಲೋಕಸಭಾ ಕ್ಷೇತ್ರ ಹೊಂದಿದೆ.

ರತ್ನಪ್ರಭಾ ಕಿರು ಪರಿಚಯ

ರತ್ನಪ್ರಭಾ ಕಿರು ಪರಿಚಯ

ಹೈದರಾಬಾದ್ ಮೂಲದ ರತ್ನಪ್ರಭಾ ಅವರು 1981ನೇ ಬ್ಯಾಚ್ ಐಎಎಸ್ ಅಧಿಕಾರಿ. ತಂದೆ ಸಿವಿಲ್ ಇಂಜಿನಿಯರ್ ಆಗಿದ್ದರು. ತಾಯಿ ವೈದ್ಯೆ. ರತ್ನಪ್ರಭಾ ಅವರ ಸಹೋದರ ಸಹ ನಾಗರಿಕ ಸೇವೆಯಲ್ಲಿದ್ದಾರೆ. 1981ರಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಬೀದರ್‌ನಲ್ಲಿ ರತ್ನಪ್ರಭಾ ಅವರು ಸೇವೆ ಆರಂಭಿಸಿದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ನಿವೃತ್ತಿ ಬಳಿಕ ಬಿಜೆಪಿ ಸೇರಿದ ರತ್ನಪ್ರಭಾ ಅವರನ್ನು ಅಭ್ಯರ್ಥಿಯಾಗಿ ಮಾಡಿದರೆ ದಲಿತ ಸಮುದಾಯದ ಮತಗಳ ಜೊತೆಗೆ ಪ್ರಜ್ಞಾವಂತರ ಮತಗಳು ಸಹ ಬಿಜೆಪಿಗೆ ಬರುತ್ತದೆ ಎಂಬ ನಂಬಿಕೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+