ಪತ್ನಿಯರ ಬಗ್ಗೆ ಮಾತನಾಡಿದ ಜಗನ್ ರೆಡ್ಡಿ ಮೇಲೆ ಪವನ್ ಕಲ್ಯಾಣ್ ವಾಗ್ದಾಳಿ

ಅಮರಾವತಿ, ನವೆಂಬರ್ 13: "ನಾನು ಮೂರು ಮದುವೆಯಾಗಿದ್ದಕ್ಕಾಗಿ ಮುಖ್ಯಮಮತ್ರಿ ಜಗನ್ ಮೋಹನ್ ರೆಡ್ಡಿ ಅವರು ಜೈಲುವಾಸ ಅನುಭವಿಸಿದ್ದರೇ?" ಎಂದು ತೆಲುಗು ನಟ, ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

"ಮುಖ್ಯಮಂತ್ರಿಯಾಗಿ ಯಾವುದೇ ವ್ಯಕ್ತಿಯ ಮೇಲೆ ವೈಯಕ್ತಿಕ ಆರೋಪ ಮಾಡುವ ಅಧಿಕಾರ ಅವರಿಗಿಲ್ಲ. ನಾನು ಮೂರು ಮದುವೆಯಾಗಿದ್ದೇನೆ, ನನ್ನ ಮೂರು ಮದುವೆಯ ಕಾರಣಕ್ಕೆ ಜಗನ್ ರೆಡ್ಡಿ ಅವರು ಜೈಲುವಾಸ ಅನುಭವಿಸಿದ್ದರೇ?" ಎಂದು ಪ್ರಶ್ನಿಸುವ ಮೂಲಕ ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲುವಾಸ ಅನುಭವಿಸಿದ್ದ ಜಗನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಂಧ್ರಪ್ರದೇಶದ ಎಲ್ಲಾ ಸರ್ಕಾರಿ ಶಾಲೆಗಳನ್ನೂ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಬದಲಿಸಲು ಹೊರಟ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ನಡೆಯನ್ನು ಪವನ್ ಕಲ್ಯಾಣ್ ಟೀಕಿಸಿದ್ದರು.

War Of Words Between Jagan Mohan Reddy and Pawan Kalyan

ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ್ದ ಜಗನ್, ಸರ್, ನಟ ಪವನ್ ಕಲ್ಯಾಣ್ ಗಾರು, ನಿಮಗೆ ಮೂವರು ಪತ್ನಿಯರಿದ್ದಾರೆ. ನಾಲ್ಕು ಮಕ್ಕಳಿದ್ದಾರೆ. ಅವರೆಲ್ಲ ಓದುತ್ತಿರುವ ಶಾಲೆಯಲ್ಲಿ ಮಾಧ್ಯಮವಾಗಿ ಬಳಸುತ್ತಿರುವ ಭಾಷೆ ಯಾವುದು?" ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದರು.

1997 ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾಗಿದ್ದ ಪವನ್ ಕಲ್ಯಾಣ್, 1999 ರಲ್ಲಿ ಅವರಿಂದ ದೂರವಾಗಿದ್ದರು, ನಂತರ 2009 ರಲ್ಲ ನಟಿ, ರೂಪದರ್ಶಿ ರೇಣು ದೇಸಾಯಿ ಎಂಬುವವರನ್ನು ಮದುವೆಯಾಗಿದ್ದರು. 2012 ಎಲ್ಲಿ ಅವರಿಂದ ದೂರವಾಗಿದ್ದ ಪವನ್ ಕಲ್ಯಾಣ್ ನಂತರ, 2013 ರಲ್ಲಿ ಅನ್ನಾ ಲೆಜ್ನೆವಾ ಎಂಬುವವರನ್ನು ಮದುವೆಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+