• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರ ಸಿಎಂ ನಾಯ್ಡು ಮೂರನೇ ಅತಿ ಶ್ರೀಮಂತ ಅಭ್ಯರ್ಥಿ

|

ಅಮರವಾತಿ, ಏಪ್ರಿಲ್ 10: ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆ ಕೂಡಾ ನಡೆಯಲಿದ್ದು, ಚುನಾವಣಾ ಕಣ ರಂಗೇರಿದೆ. ಆಂಧ್ರಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಕೃಷ್ಣಯ್ಯ ಬೊಲ್ಲಿನೇನಿ ಅವರು 689 ಕೋಟಿ ರು ಘೋಷಣೆ ಮಾಡಿದ್ದು, ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತೆಲುಗು ದೇಶಂ ಪಾರ್ಟಿಯ ಆತ್ಮಕೂರು ಕ್ಷೇತ್ರದ ಅಭ್ಯರ್ಥಿ ಬೊಲ್ಲಿನೇನಿ ಅವರು 6,56,25,68,895 ರು ಚರಾಸ್ತಿ ಘೋಷಿಸಿದ್ದಾರೆ. 33,42,04,443 ರು ಸ್ಥಿರಾಸ್ತಿ ಪ್ರಕಟಿಸಿದ್ದಾರೆ. ಒಟ್ಟಾರೆ, 6,89,67,73,338 ರು ಆಸ್ತಿಯನ್ನು ಹೊಂದಿದ್ದಾರೆ ಎಂದು ಅಫಿಡವಿಟ್ ಆಧಾರದ ಮೇಲೆ ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ ಹೇಳಿದೆ.

ಈ ಪಟ್ಟಿಯಲ್ಲಿ ಪೊಂಗರು ನಾರಾಯಣ ಅವರು 668 ಕೋಟಿ ರು ಘೋಷಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ನೆಲ್ಲೂರ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 2,17,15,50,003 ರು ಚರಾಸ್ತಿ ಹಾಗೂ 4,51,46,48,000 ಸ್ಥಿರಾಸ್ತಿ ಇದೆ ಎಂದು ಘೋಷಿಸಿದ್ದಾರೆ. ಒಟ್ಟಾರೆ, 6,68,61,98,003 ರು ಅಸ್ತಿ ಹೊಂದಿದ್ದಾರೆ.

ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಕುಪ್ಪಂ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಚರಾಸ್ತಿ ಮೌಲ್ಯ 5,74,31,55,501 ರು ಹಾಗೂ ಸ್ಥಿರಾಸ್ತಿ 94,25,95,474 ರು ಹೊಂದಿದ್ದಾರೆ. ಒಟ್ಟಾರೆ, 6,68,57,50,975 ರು ಅಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

English summary
The richest candidate contesting the Andhra Pradesh assembly elections is Krishnaiah Bollineni and he is worth Rs 689 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X