ಕಣ್ಣಿಲ್ಲದ ಈಕೆ ಭಾರತದ ಶ್ರೀಮಂತ ಮಹಿಳೆ : ನಟ ಸೋನು ಸೂದ್ ಪ್ರಶಂಸೆ

ಅಮರಾವತಿ, ಮೇ. 14: ನಟ ಸೋನು ಸೋದ್ ತನ್ನ ಫೌಂಡೇಶನ್ ಮೂಲಕ ಕೊರೊನಾ ಸೋಂಕಿತರ ಜೀವ ಉಳಿಸುವ ಕಾರ್ಯ ಮಾಡಿ ಇಡೀ ಜಗತ್ತಿನಲ್ಲಿ ಪ್ರಶಂಸೆಗೆ ಪಾತ್ರ ರಾಗಿದ್ದಾರೆ. ರೀಲ್‌ನಲ್ಲಿ ವಿಲನ್ ರಿಯಲ್ ಜೀವನದಲ್ಲಿ ಹೀರೋ ಆಗಿ ಹೊರ ಹೊಮ್ಮಿರುವ ನಟ ಸೋನು ಸೂದ್ ಆಂಧ್ರ ಪ್ರದೇಶದ ಕಣ್ಣು ಕಾಣದ ಮಹಿಳೆಯ ಹೃದಯ ಶ್ರೀಮಂತಿಕೆ ನೋಡಿ ಪ್ರಶಂಸೆ ಮಾಡಿದ್ದಾರೆ. ಆಕೆಗೆ ಕಣ್ಣು ಇಲ್ಲದಿದ್ದರೂ ಭಾರತದ ಶ್ರೀಮಂತ ಮಹಿಳೆ ಎಂದು ಆಕೆಯನ್ನು ಕೊಂಡಾಡಿದ್ದಾರೆ.

ಆಕೆ ಬೇರೆ ಯಾರೂ ಇಲ್ಲ. ಆಂಧ್ರ ಪ್ರದೇಶದ ನಾವಿ ಬೊಡ್ಡು ನಾಗಲಕ್ಷ್ಮೀ. ಕಣ್ಣು ಕಾಣುವುದಿಲ್ಲ. ಸರ್ಕಾರದಿಂದ ಬರುವ ಪಿಂಚಣಿ ಹಣ ನೆಚ್ಚಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಜತೆಗೆ ಯೂಟ್ಯೂಬ್ ಮಾಡುವ ಮೂಲಕ ಬೊಡ್ಡು ನಾಗಲಕ್ಷ್ಮೀ ಸಮಾಜಕ್ಕೆ ಚಿರ ಪರಿಚಿತಳು. ಸೋನು ಸೋದ್ ಅವರ ಸೇವೆ ನೋಡಿ, ಅವರ ಫೌಂಡೇಷನ್‌ಗೆ ತನ್ನ ಐದು ತಿಂಗಳ ಪಿಂಚಣಿ ಹಣ 15 ಸಾವಿರ ದಾನ ಮಾಡಿದ್ದಾಳೆ. ಈ ಮೂಲಕ ತನ್ನ ಹೃದಯ ಶ್ರೀಮಂತಿಕೆ ತೋರಿದ್ದಾರೆ.

ನಾಗಲಕ್ಷ್ಮೀಯ ಈ ಹೃದಯ ಶ್ರೀಮಂತಿಕೆಯನ್ನು ಕೊಂಡಾಡಿರುವ ನಟ ಸೋನು ಸೂದ್, ಆಕೆಯ ಪೋಟೊ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಶ್ರೀಮಂತ ಮಹಿಳೆ ಎಂದು ಪ್ರಶಂಸೆ ಮಾಡಿದ್ದಾರೆ. ಸದ್ಯ ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸೋನು ಸೋದ್ ಅವರ ಫೌಂಡೇಶನ್‌ಗೆ ಅನೇಕರು ಕೈಲಾದ ಮಟ್ಟಿಗೆ ನೆರವು ನೀಡುತ್ತಿದ್ದಾರೆ. ಸೋನು ಸೂದ್ ಕೂಡ ತನ್ನ ಫೌಂಡೇಷನ್ ಮೂಲಕ ಕೊರೊನಾ ಸೋಂಕಿತರಿಗೆ ಉಚಿತ ಆಕ್ಸಿಜನ್ ಪೂರೈಕೆ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

She is the richest woman in India: Actor Sonu Sood

ಇತ್ತೀಚೆಗೆ ಚಿತ್ರದುರ್ಗಕ್ಕು ಸೋನು ಸೋದ್ ಅವರ ಫೌಂಡೇಷನ್ ವತಿಯಿಂದ ಆಕ್ಸಿಜನ್ ಪೂರೈಕೆ ಮಾಡಿ ಹಲವರ ಜೀವ ಉಳಿಸಲಾಗಿತ್ತು. ಇದಕ್ಕೂ ಮೊದಲು ಯಲಹಂಕದ ಖಾಸಗಿ ಆಸ್ಪತ್ರೆಗೆ ಎರಡು ತಾಸಿನಲ್ಲಿ ಹದಿನೆಂಟು ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿ ಹತ್ತು ಮಂದಿಯ ಜೀವ ಉಳಿಸುವಲ್ಲಿ ಸೋನು ಸೂದ್ ಫೌಂಡೇಶನ್ ಅಮೂಲ್ಯ ಸೇವೆ ಒದಗಿಸಿತ್ತು. ಇಡೀ ದೇಶ ವ್ಯಾಪ್ತಿ ಯಾವ ತಾರತಮ್ಯ ಇಲ್ಲದೇ ಸೋನು ಸೋದ್ ಫೌಂಡೇಷನ್ ಆಕ್ಸಿಜನ್ ಮತ್ತು ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಇದೀಗ ಆಂಧ್ರ ಪ್ರದೇಶದ ಕಣ್ಣು ಕಾಣದ ಮಹಿಳೆ ತನ್ನ ಐದು ತಿಂಗಳ ಪಿಂಚಣಿ ದಾನ ನೀಡಿರುವುದು ಇಡೀ ದೇಶದಲ್ಲೆಡೆ ಚರ್ಚೆಗೆ ನಾಂದಿ ಹಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+