ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

just in: ತಿರುಪತಿ ತಿಮ್ಮಪ್ಪಗೆ 1.5 ಕೋಟಿ ದೇಣಿಗೆ ನೀಡಿದ ಮುಕೇಶ್ ಅಂಬಾನಿ

|
Google Oneindia Kannada News

ಅಮರಾವತಿ, ಸೆ.16: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಶುಕ್ರವಾರ ತಿರುಮಲದಲ್ಲಿರುವ ವೆಂಕಟೇಶ್ವರನ ಪುರಾತನ ಬೆಟ್ಟದ ದೇವಾಲಯಕ್ಕೆ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

ಮುಕೇಶ್ ಅಂಬಾನಿ ಶುಕ್ರವಾರ ತಿರುಮಲದ ಸಮೀಪದ ವೆಂಕಟೇಶ್ವರನ ಪುರಾತನ ಬೆಟ್ಟದ ದೇವಾಲಯಕ್ಕೆ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ತಿರುಮಲದಲ್ಲಿ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿದರು.

ಮುಕೇಶ್ ಅಂಬಾನಿ ದುಬೈನಲ್ಲಿ ಐಷಾರಾಮಿ ಮನೆ ಖರೀದಿ, ವಿಶೇಷತೆ, ಬೆಲೆಯೆಷ್ಟು ತಿಳಿಯಿರಿಮುಕೇಶ್ ಅಂಬಾನಿ ದುಬೈನಲ್ಲಿ ಐಷಾರಾಮಿ ಮನೆ ಖರೀದಿ, ವಿಶೇಷತೆ, ಬೆಲೆಯೆಷ್ಟು ತಿಳಿಯಿರಿ

ವೆಂಕಟೇಶ್ವರ ದೇವರ ಕಟ್ಟಾ ಭಕ್ತರಾಗಿರುವ ಅಂಬಾನಿ, ಎನ್‌ಕೋರ್ ಹೆಲ್ತ್‌ಕೇರ್ ಸಿಇಒ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಮತ್ತು ಇತರ ರಿಲಯನ್ಸ್ ಇಂಡಸ್ಟ್ರೀಸ್ ಅಧಿಕಾರಿಗಳು ಶುಕ್ರವಾರ ನಸುಕಿನಲ್ಲಿ ತಿರುಮಲ ಬೆಟ್ಟಗಳಿಗೆ ಆಗಮಿಸಿದ್ದಾರೆ ಎಂದು ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Reliance Chairman Mukesh Ambani donated Rs 1.5 crore to Tirupati Lord Venkateswara shrine

ಪೂಜೆಯ ನಂತರ ಮುಕೇಶ್ ಅಂಬಾನಿ, ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ ವೆಂಕಟ ಧರ್ಮ ರೆಡ್ಡಿ ಅವರಿಗೆ 1.5 ಕೋಟಿ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು. ಈ ವೇಳೆ ದೇವಾಲಯದಲ್ಲಿ ಆನೆಗಳಿಗೆ ಆಹಾರವನ್ನು ನೀಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಇತ್ತಿಚೆಗೆ ವಿಶ್ವದ ಸಿರಿವಂತ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಸ್ಥಾನ, ಹುಂಡಿ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಶ್ರಾವಣ ಮಾಸದಲ್ಲಿ ಶ್ರೀವಾರಿ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ.

Reliance Chairman Mukesh Ambani donated Rs 1.5 crore to Tirupati Lord Venkateswara shrine

ಕಳೆದ ನಾಲ್ಕು ತಿಂಗಳಲ್ಲಿ ತಿರುಪತಿ ದೇವಾಲಯದಲ್ಲಿ ಹುಂಡಿಯ ಮೂಲಕ ಕೋಟಿ ಕೋಟಿ ದೇಣಿಗೆ ಮೊತ್ತ ಸಂಗ್ರಹವಾಗಿದೆ.

ಮೇ ತಿಂಗಳಲ್ಲಿ 130.29 ಕೋಟಿ, ಜೂನ್‌ನಲ್ಲಿ 123.76 ಕೋಟಿ, ಜುಲೈನಲ್ಲಿ 139.46 ಕೋಟಿ ಮತ್ತು ಆಗಸ್ಟ ತಿಂಗಳಲ್ಲಿ 140.34 ಕೋಟಿ ರೂಪಾಯಿ ಸಂಗ್ರಹವಾಗಿದೆ.

English summary
Reliance Chairman Mukesh Ambani donated Rs 1.5 crore to Tiruati Lord Venkateswara shrine on Friday. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X