ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 6 ರಿಂದ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರೆಲ್ಲರಿಗೂ ಉಚಿತ ಲಡ್ಡು

|
Google Oneindia Kannada News

Recommended Video

ಹೊಸವರ್ಷದ ಗಿಫ್ಟ್ ಕೊಡೋಕೆ ಟಿಟಿಡಿ ನಿರ್ಧಾರ | Oneindia Kannada

ತಿರುಪತಿ, ಜನವರಿ 3: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರೆಲ್ಲರಿಗೂ ಉಚಿತವಾಗಿ ಲಡ್ಡು ವಿತರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತಿರುಮಲ ಯಾತ್ರಿಕರಿಗೆ ಹೊಸ ವರ್ಷದ ಗಿಫ್ಟ್‌ ಕೊಡಲು ಟಿಟಿಡಿ ತೀರ್ಮಾನಿಸಿದ್ದು, ದೇವರ ದರ್ಶನಕ್ಕೆ ಬರುವ ಪ್ರತಿ ಭಕ್ತರಿಗೂ ಇನ್ನು ಮುಂದೆ ಉಚಿತ ಲಡ್ಡು ವಿತರಿಸಲು ನಿರ್ಧರಿಸಲಾಗಿದೆ.

ತಿರುಪತಿ: ಈ ಐದು ದಿನ ವಿಶೇಷ ದರ್ಶನ ರದ್ದು ಪಡಿಸಿದ ಟಿಟಿಡಿತಿರುಪತಿ: ಈ ಐದು ದಿನ ವಿಶೇಷ ದರ್ಶನ ರದ್ದು ಪಡಿಸಿದ ಟಿಟಿಡಿ

ತಿರುಮಲದಲ್ಲಿರುವ ತಿಮ್ಮಪ್ಪನ ದೇಗುಲದಲ್ಲಿ ನಿತ್ಯ ಸುಮಾರು 3 ಲಕ್ಷ ಲಡ್ಡುಗಳ ವಿತರಣೆಯಾಗುತ್ತಿದ್ದು, ಈ ಪೈಕಿ 80 ಸಾವಿರದಿಂದ ಒಂದು ಲಕ್ಷದವರೆಗೂ ಲಡ್ಡುಗಳನ್ನು ಉಚಿತವಾಗಿ ನೀಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ. ಅಂದರೆ ಪ್ರತೀ ಭಕ್ತರಿಗೆ ತಲಾ ಒಂದು ಲಡ್ಡು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.

One Free Laddu For Every Pilgrims In Tirupat

ಹೆಚ್ಚುವರಿ ಲಡ್ಡುಗಳ ವಿತರಣೆಗೆಂದೇ ಟಿಟಿಡಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದಿದೆ. ಹೆಚ್ಚುವರಿ ಲಡ್ಡು ಪ್ರಸಾದಕ್ಕಾಗಿ ಪ್ರತಿ ಲಡ್ಡುವಿಗೆ 50 ರೂ. ನಿಗದಿಪಡಿಸುವ ಉದ್ದೇಶವಿದೆ. ಈ ಮೊದಲು ಹೆಚ್ಚುವರಿ ಲಡ್ಡು ಪ್ರಸಾದ ಪಡೆಯಲು ಟಿಟಿಡಿ ಅಧಿಕಾರಿಗಳ ಅನುಮತಿ ಪತ್ರ ಪಡೆಯಬೇಕಿತ್ತು. ಹೊಸ ಯೋಜನೆಯಡಿ ಅನುಮತಿ ಪತ್ರದ ಅವಶ್ಯಕತೆ ಇರುವುದಿಲ್ಲ.

ತಿರುಪತಿ: ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ಮುಂದಾದ ವೈ ಎಸ್ ಜಗನ್ತಿರುಪತಿ: ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ಮುಂದಾದ ವೈ ಎಸ್ ಜಗನ್

ಕಳೆದ ನವೆಂಬರ್‌ನಲ್ಲಿ ಕಾಳಸಂತೆ ದರದಲ್ಲಿ ಲಡ್ಡು ಮಾರಾಟವಾಗುತ್ತಿದ್ದುದನ್ನು ಟಿಟಿಡಿಯ ವಿಚಕ್ಷಣಾ ದಳ ಪತ್ತೆ ಹಚ್ಚಿತ್ತು. ನವರಾತ್ರಿ ಬ್ರಹ್ಮೋತ್ಸವದ ಸಂದರ್ಭದಲ್ಲಿ 14 ಲಕ್ಷ ರೂ. ಮೌಲ್ಯದ ಲಡ್ಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇಷ್ಟು ದಿನ ಕಾಲ್ನಡಿಗೆಯಲ್ಲಿ ದೇಗುಲಕ್ಕೆ ಬಂದು ಧರ್ಮದರ್ಶನ ಮಾಡುವ ಭಕ್ತರಿಗೆ ತಲಾ ಒಂದು ಲಡ್ಡು ಉಚಿತವಾಗಿ ನೀಡಲಾಗುತ್ತಿತ್ತು. ಇದೀಗ ದೇಗುಲಕ್ಕೆ ಬರುವ ಪ್ರತೀ ಭಕ್ತರಿಗೂ ಒಂದೊಂದು ಲಡ್ಡು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ ಇದೇ ಜನವರಿ 6 ವೈಕುಂಠ ಏಕಾದಶಿ ಬಳಿಕ ಈ ನಿಯಮ ಜಾರಿಗೆ ತರಲು ಟಿಟಿಡಿ ನಿರ್ಧರಿಸಿದೆ ಎನ್ನಲಾಗಿದೆ.

English summary
The Tirumala Tirupati Devasthanams is contemplating providing one free laddu to every devotee having a darshan of Lord Venkateswara at Tirumala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X