ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

74ನೇ ವಯಸ್ಸಿನಲ್ಲಿ ಮಂಗಾಯಮ್ಮಗೆ ಅವಳಿ ಮಕ್ಕಳು; ಇದು ಮೊದಲ ಸಂಭ್ರಮ

By ಅನಿಲ್ ಆಚಾರ್
|
Google Oneindia Kannada News

ಗುಂಟೂರು, ಸೆಪ್ಟೆಂಬರ್ 5: ಆಂಧ್ರಪ್ರದೇಶದ ಗುಂಟೂರಿನ ಆಸ್ಪತ್ರೆಯಲ್ಲಿ 74 ವರ್ಷದ ಮಹಿಳೆ ಗುರುವಾರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆ ಮೂಲಕ ಅತ್ಯಂತ ಹಿರಿಯ ವಯಸಿನಲ್ಲಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇನ್ ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಪ್ರಕ್ರಿಯೆ ಮೂಲಕ ಮಂಗಾಯಮ್ಮ ಅವಳಿ ಮಕ್ಕಳನ್ನು ಹೆತ್ತಿದ್ದಾರೆ. ಮಂಗಾಯಮ್ಮ ಅವರ ಹೆರಿಗೆ ಅಹಲ್ಯಾ ಆಸ್ಪತ್ರೆಯಲ್ಲಿ ಆಗಿದೆ. ನಾಲ್ಕು ವೈದ್ಯರನ್ನು ಒಳಗೊಂಡ ತಂಡವು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿದೆ. ಈ ವೈದ್ಯರ ತಂಡದ ನೇತೃತ್ವವನ್ನು ಎಸ್. ಉಮಾಶಂಕರ್ ವಹಿಸಿದ್ದರು. ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

ಮಗುವಿನಂತೆ ಗೊಂಬೆಗೂ ಚಿಕಿತ್ಸೆ!: ಈ ಐಡಿಯಾ ಸಕ್ಸಸ್ಮಗುವಿನಂತೆ ಗೊಂಬೆಗೂ ಚಿಕಿತ್ಸೆ!: ಈ ಐಡಿಯಾ ಸಕ್ಸಸ್

ಇದು ವೈದ್ಯಲೋಕದ ಅಚ್ಚರಿ ಎಂದು ಡಾಕ್ಟರ್ ಉಮಾಶಂಕರ್ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ಮಂಗಾಯಮ್ಮ ಅವರು ಅತ್ಯಂತ ಹಿರಿಯ ವಯಸ್ಸಿನಲ್ಲಿ ಮಕ್ಕಳಿಗೆ ಜನ್ಮ ನೀಡಿದ ದಾಖಲೆ ಆಗಿದೆ. ಈ ಹಿಂದೆ ಎಪ್ಪತ್ತು ವರ್ಷದ ದಲ್ಜಿಂದರ್ ಕೌರ್ ಮಗು ಹೆತ್ತ ಹಿರಿಯ ಮಹಿಳೆ ಎಂಬ ದಾಖಲೆ ಇತ್ತು. ಐವಿಎಫ್ ಪ್ರಕ್ರಿಯೆ ಮೂಲಕವೇ ಕೌರ್ ಅವರಿಗೆ ಮೂರು ವರ್ಷಗಳ ಹಿಂದೆ ಗಂಡು ಮಗು ಜನಿಸಿತ್ತು.

Oldest Mother Gave Birth To Twins At 74 In Guntur

ಪೂರ್ವ ಗೋದಾವರಿ ಜಿಲ್ಲೆಯ ನೆಲಪರ್ತಿಪಾಡುವಿನವರಾದ ಮಂಗಾಯಮ್ಮ ಅವರಿಗೆ ಮದುವೆ ಆಗಿ ಐವತ್ನಾಲ್ಕು ವರ್ಷಗಳಾಗಿವೆ. ಆಕೆ ಮತ್ತು ಅವರ ಗಂಡ ವೈ. ರಾಜಾ ರಾವ್ ಅವರು ಐವಿಎಫ್ ತಜ್ಞರನ್ನು ಕಳೆದ ವರ್ಷ ಭೇಟಿ ಆಗಿದ್ದರು. ಅವರು ಈ ದಂಪತಿಗೆ ಮಾರ್ಗದರ್ಶನ, ಚಿಕಿತ್ಸೆ ನೀಡಿದ್ದಾರೆ.

ನನಗೆ ತುಂಬ ಖುಷಿಯಾಗಿದೆ. ಆ ದೇವರು ನಮ್ಮ ಪ್ರಾರ್ಥನೆಗೆ ಫಲ ಕೊಟ್ಟ ಎಂದು ಮಂಗಾಯಮ್ಮ ಅವರು ಹೇಳಿದ್ದಾರೆ. ಮಂಗಾಯಮ್ಮ ಅವರು ಐವಿಎಫ್ ಪ್ರಕ್ರಿಯೆಯ ಮೊದಲ ಸಲಕ್ಕೆ ಗರ್ಭ ಧರಿಸಿದ್ದಾರೆ. ಅವರ ಆರೋಗ್ಯ ನೋಡಿಕೊಳ್ಳುವುದಕ್ಕೇ ಮೂರು ತಂಡಗಳನ್ನು ರಚಿಸಲಾಗಿತ್ತು.

ಮಂಗಾಯಮ್ಮ ಅವರಿಗೆ ಎಂಟನೇ ತಿಂಗಳಲ್ಲಿ ಸೀಮಂತ ಮಾಡಬೇಕು ಎಂಬುದು ರಾಜಾ ರಾವ್ ಅವರ ಆಸೆ ಆಗಿತ್ತಂತೆ. ಆದರೆ ವೈದ್ಯರು, ಇನ್ನೊಂದು ತಿಂಗಳು ಕಾಯಲು ಸೂಚಿಸಿದ್ದಾರೆ. ಹೆರಿಗೆ ಆಗುವ ಕೆಲ ಗಂಟೆಗಳ ಮುಂಚೆ ಆಸ್ಪತ್ರೆಯಲ್ಲೇ ಸೀಮಂತ ಮಾಡಲಾಗಿದೆ.

ಇನ್ನು ತಾಯಿ ಹಾಗೂ ಮಕ್ಕಳನ್ನು ಇನ್ನೂ ಕೆಲ ದಿನ ನಿಗಾದಲ್ಲಿ ಇರಿಸಿರಬೇಕು ಎಂದು ವೈದ್ಯರು ಹೇಳಿದ್ದಾರೆ.

English summary
Mangayamma, 74 year old woman gave birth to twins through IVF process in Guntur, Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X