• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಧ್ರದಲ್ಲಿ ಮದ್ಯ ಸಿಗದಿದ್ದಕ್ಕೆ, ಸ್ಯಾನಿಟೈಸರ್ ಸೇವಿಸಿ ಸಾವನ್ನಪ್ಪಿದ ತಾಯಿ, ಮಗ

|

ಕಡಪ, ಜೂನ್ 1: ಲಾಕ್‌ಡೌನ್ ಸಂದರ್ಭದಲ್ಲಿ ಕುಡಿಯಲು ಮದ್ಯ ಸಿಗಲಿಲ್ಲ ಎಂದು ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿ ಮಾಸುವ ಮುನ್ನವೇ ಆಂಧ್ರಪ್ರದೇಶದ ತಾಯಿ, ಮಗ ಸ್ಯಾನಿಟೈಸರ್ ಸೇವಿಸಿ ಸಾವನ್ನಪ್ಪಿದ್ದಾರೆ. ಕುಡಿಯಲು ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಸಾನಿಟೈಸರ್ ಕುಡಿದು 24 ವರ್ಷದ ಯುವಕ ಹಾಗೂ 52 ವರ್ಷದ ಆತನ ತಾಯಿ ಇಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

   ಚೈನ್ ಕದಿಯಲು ಮಹಿಳೆಯ ಕುತ್ತಿಗೆಗೆ ಕೈ ಹಾಕಿದ ಕಳ್ಳರು.... ನಂತರ ನಡೆದಿದ್ದೇನು? | Oneindia Kannada

   ಸ್ಯಾನಿಟೈಸರ್‌ನಲ್ಲೂ ಆಲ್ಕೋಹಾಲ್ ಇರುತ್ತೆ, ಅದನ್ನ ಕುಡಿದರೂ ಕಿಕ್ ಏರುತ್ತೆ ಎಂದು ಯಾರೋ ಹೇಳಿದ್ದಾರೆ. ಇದನ್ನ ನಂಬಿರುವ ತಾಯಿ, ಮಗ ಇಬ್ಬರೂ ಸಾನಿಟೈಸರ್ ಸೇವಿಸಿದ್ದಾರೆ. ಬಳಿಕ ಇಬ್ಬರೂ ಪ್ರಜ್ಞೆತಪ್ಪಿ ಬಿದಿದ್ದು, ಅವರನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲಿಸರು ಕೂಡಲೇ ಇಬ್ಬರನ್ನು ಕಡಪ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಇಬ್ಬರೂ ಮೃತಪಟ್ಟಿದ್ದಾರೆ.

   ಮದುವೆಗೆ ಒಲ್ಲೆ ಅಂದ ಪ್ರೇಮಿ, ನೊಂದು ವಿಷ ಸೇವಿಸಿ ನಟಿ ಸಾವುಮದುವೆಗೆ ಒಲ್ಲೆ ಅಂದ ಪ್ರೇಮಿ, ನೊಂದು ವಿಷ ಸೇವಿಸಿ ನಟಿ ಸಾವು

   ಕಡಪ ಜಿಲ್ಲೆಯ ಚೆನ್ನೂರ್ ಮಂಡಲದ ಯಲ್ಲಮ್ಮ ಗುಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಶ್ರೀರಾಮ್ ನಾಯಕ್ ಮತ್ತು ಆತನ ತಾಯಿ ವಿಜಯಲಕ್ಷ್ಮಿ ಕಟ್ಟಡ ಕಾರ್ಮಿಕರಾಗಿದ್ದು, ಮದ್ಯ ಕುಡಿಯುತ್ತಿದ್ದರು. ಅದರಂತೆ ಭಾನುವಾರ ಸಂಜೆ ಕುಡಿಯಲು ಮದ್ಯ ಸಿಗದಿದ್ದಾಗ ಸಾನಿಟೈಸರ್ ಕುಡಿದು ಈ ದುರ್ಘಟನೆ ಸಂಭವಿಸಿದೆ ಎಂದು ಚೆನ್ನೂರ್ ಪೊಲೀಸರು ತಿಳಿಸಿದ್ದಾರೆ.

   ಸಾನಿಟೈಸರ್ ಹೆಚ್ಚಾಗಿ ಕುಡಿದಿರುವುದರಿಂದ ಇಬ್ಬರ ಸಾವಿಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

   English summary
   In a shocking incident, a 24-year-old youth and his 52-year-old mother died after they consumed sanitizer when they could not get liquor.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X