ಮುಯ್ಯಿಗೆ ಮುಯ್ಯಿ... ಪ್ರಧಾನಿ ಮೋದಿಗೆ ನಾಯ್ಡು ಖಡಕ್ ಎಚ್ಚರಿಕೆ
Recommended Video

ಮುಯ್ಯಿಗೆ ಮುಯ್ಯಿ... ಪ್ರಧಾನಿ ಮೋದಿಗೆ ನಾಯ್ಡು ಖಡಕ್ ಎಚ್ಚರಿಕೆ..! | Oneindia Kannada
ಅಮರಾವತಿ, ಫೆಬ್ರವರಿ 11: 'ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಕ್ಕೆ ಬಂದರೆ ನಾನೂ ಹಾಗೆಯೇ ಪ್ರತಿಕ್ರಿಯೆ ನೀಡಬೇಕಾಗುತ್ತದೆ' ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಲುಗು ದೇಶಂ ಪಕ್ಷವು ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಆಂಧ್ರಪ್ರದೇಶಕ್ಕೆ ತೆರಳಿದ ಪ್ರಧಾನಿ ಮೋದಿ, ಚಂದ್ರಬಾಬು ನಾಯ್ಡು ಅವರನ್ನು ತರಾಟೆಗೆ ತೆಗೆದುಕೊಂಡರು.

'ಚಂದ್ರಬಾಬು ನಾಯ್ಡು ಅವರು ವಂಚನೆ ಮಾಡುವುದು ಹೊಸವಿಷಯವಲ್ಲ. ತಮ್ಮ ರಾಜಕೀಯ ಮಿತ್ರರಿಗೆ ಮಾತ್ರವಲ್ಲದೆ, ಸ್ವಂತ ಕುಟುಂಬದ ಸದಸ್ಯರಿಗೂ ಅವರೂ ಮೋಸ ಮಾಡಿದ್ದಾರೆ. ಅವರು ನನಗಿಂತ ಸೀನಿಯರ್ ಎಂದು ಪದೇ ಪದೇ ಹೇಳುತ್ತಾರೆ. ನಿಜ, ಹೀಗೆ ಮೈತ್ರಿಪಕ್ಷದೊಂದಿಗೆ ಸಂಬಂಧ ಕಡಿದುಕೊಳ್ಳುವಲ್ಲಿ, ಮೋಸ ಮಾಡುವುದರಲ್ಲಿ, ಹಿರಿಯರನ್ನು ಅವಹೇಳನ ಮಾಡುವಲ್ಲಿ ಅವರ ನನಗಿಂದ ಹಿರಿಯರೇ! ಅವರು ತಮ್ಮ ಮಾವ(ಎನ್ ಟಿ ರಾಮ ರಾವ್) ನವರಿಗೇ ವಂಚನೆ ಮಾಡಿದ್ದರಲ್ಲ..!' ಎಂದು ಮೋದಿ ಕಿಚಾಯಿಸಿದ್ದರು.











Click it and Unblock the Notifications