• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ತಂಟೆಗೆ ಬಂದ್ರೆ ಅಷ್ಟೇ! ಬಿಜೆಪಿಗೆ ನಾಯ್ಡು ಖಡಕ್ ಎಚ್ಚರಿಕೆ

|
   ನಮ್ಮ ತಂಟೆಗೆ ಬಂದ್ರೆ ಅಷ್ಟೇ! ಬಿಜೆಪಿಗೆ ನಾಯ್ಡು ಖಡಕ್ ಎಚ್ಚರಿಕೆ..! | Oneindia Kannada

   ಅಮರಾವತಿ, ಜನವರಿ 05: "ನಮ್ಮ ದಾರಿಗೆ ಅಡ್ಡ ಬಂದರೆ ನಿಮ್ಮಕತೆ ಅಷ್ಟೇ! ನಿಮ್ಮನ್ನು ಮುಗಿಸಬೇಕಾಗುತ್ತದೆ!" ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಿಜೆಪಿ ನಾಯಕರಿಗೆ ಬೆದರಿಕೆ ಒಡ್ಡಿದ್ದಾರೆ.

   ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!

   ಇಲ್ಲಿನ ಕಾಕಿನಾಡದಲ್ಲಿ ಶುಕ್ರವಾರ ನಡೆಯುತ್ತಿದ್ದ ನಾಯ್ಡು ಅವರ ಸಭೆಯೊಂದಕ್ಕೆ ಬಿಜೆಪಿ ನಾಯಕರು ಅಡ್ಡಿಪಡಿಸಿದ ನಂತರ ಅವರು ಈ ಪ್ರತಿಕ್ರಿಯೆ ನೀಡಿದರು.

   ಮೋದಿ ಎದುರು ನಾನೇ ಬಗ್ಗಿದ್ದೇನೆ... ನನ್ನ ರಾಜ್ಯಕ್ಕಾಗಿ: ನಾಯ್ಡು ಹೊಸ ವರಸೆ!

   "ಸಾರ್ವಜನಿಕವಾಗಿ ಅವರ ಹೆಸರು(ಮೋದಿ) ಹೇಳಿದರೆ ಜನರು ನಿಮ್ಮನ್ನು ಸುಮ್ಮನೆ ಬಿಡೋಲ್ಲ! ಎಚ್ಚರ! ಆಂಧ್ರದಲ್ಲಿ ಮೋದಿಯವರನ್ನು ಬೆಂಬಲಿಸುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು" ಎಂದು ನಾಯ್ಡು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

   ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಇತ್ತೀಚೆಗೆ ನಿರಂತರವಾಗಿ ಚಂದ್ರಬಾಬು ನಾಯ್ಡು ಅವರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದು, ಅದನ್ನು ಖಂಡಿಸಿ ಬಿಜೆಪಿ ನಾಯಕರು ನಾಯ್ಡು ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದರು.

   ನಿರುದ್ಯೋಗಿ ಬ್ರಾಹ್ಮಣರಿಗೆ ಕಾರು ಖರೀದಿಗೆ ನಾಯ್ಡು ಸರಕಾರದಿಂದ 2 ಲಕ್ಷ ಸಬ್ಸಿಡಿ

   ಬಿಜೆಪಿಯನ್ನು ಹೊರಗಿಟ್ಟು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನವನ್ನು ಸೃಷ್ಟಿಸಲು ಟಿಡಿಪಿಯ ಬೆಂಬಲಿವಿದೆ ಎಂದಿರುವ ಚಂದ್ರಬಾಬು ನಾಯ್ಡು ಅದಕ್ಕಾಗಿ ಹಲವು ನಾಯಕರನ್ನು ಭೇಟಿ ಮಾಡಿ, ಮನವೊಲಿಸುವ ಕೆಲಸವನ್ನೂ ಮಾಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

   English summary
   Andhra Pradesh chief minister Chandrababu Naidu threatened BJP leaders and said, "If you try to mess, you will be finished"
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X