ತೆಲಂಗಾಣದ ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ: ನಾಲ್ವರ ಸಾವು
ಹೈದರಾಬಾದ್, ಜೂನ್ 2: ತೆಲಂಗಾಣದ ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ರಾಮಗುಂಡಂ ಬಳಿ ಇರುವ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮತ್ತಷ್ಟು ಮಾಹಿತಿ ಬರಬೇಕಿದೆ.

ಪೆದ್ದಪಳ್ಳಿಯಲ್ಲಿರುವ ಗಣಿ ಇದಾಗಿದೆ. ನಾಲ್ವರ ಶವವನ್ನು ಗಣಿಯಿಂದ ಹೊರಕ್ಕೆ ತೆಗೆಯಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಮೃತರು ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಗಣಿಯಲ್ಲಿ ಸ್ಫೋಟಗೊಳಿಸುವುದಕ್ಕಾಗಿಯೇ ಅವರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದರು.ಕಾಸ್ಟ್-1 ಗಣಿ ಪ್ರದೇಶದಲ್ಲಿ ಘಟನೆ ನಡೆದಿದೆ.
ಮೃತರ ದೇಹವನ್ನು ಹತ್ತಿರದ ಗೋದಾವರಿಖಿನಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೇಲ್ಮೈ ಗಣಿ 1 ರ 2 ನೇ ಹಂತದಲ್ಲಿ ಈ ಅಪಘಾತ ಸಂಭವಿಸಿದೆ. ಮಹಾಲಕ್ಷ್ಮಿ ಒಬಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.












Click it and Unblock the Notifications