• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಂತಪುರದಲ್ಲಿ ಕಿಯಾ ಉತ್ಪಾದನೆ, ಸ್ಥಳೀಯರಿಗೆ ಉದ್ಯೋಗ ಖಾತ್ರಿ: ರೋಜಾ

|

ಅನಂತಪುರ, ಆಗಸ್ಟ್ 09: ಅನಂತಪುರದಲ್ಲಿ ಸೆಲ್ಟೋಸ್ ಕಾರು ಉತ್ಪಾದನೆಯನ್ನು ಕಿಯಾ ಮೋಟರ್ಸ್ ಇಂಡಿಯಾ ಆರಂಭಿಸಿದೆ. ಮೊದಲ ಸೆಲ್ಟೋಸ್‍ನ್ನು ಅನಾವರಣ ಮಾಡಿ ಮಾತನಾಡಿದ ಎಪಿಐಐಸಿ ಅಧ್ಯಕ್ಷೆ ಆರ್.ಕೆ ರೋಜಾ, "ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಆಶಯದಂತೆ ಸ್ಥಳೀಯರಿಗೆ ಉದ್ಯೋಗ ನೀಡುವುದು ನಮ್ಮ ಮುಖ್ಯ ಆದ್ಯತೆ" ಎಂದರು. ನಂತರ ಮೊದಲ ಕಾರಿನ ಮೇಲೆ ತಮ್ಮ ಆಟೋಗ್ರಾಫ್ ಹಾಕಿದರು.

ಆಗಸ್ಟ್ 22 ಕ್ಕೆ ಅಧಿಕೃತವಾಗಿ ಭಾರತದ ಮಾರುಕಟ್ಟೆಗೆ ಸೆಲ್ಟೋಸ್ ಲಗ್ಗೆ ಇಡಲಿದ್ದು, ಅಂದಿನಿಂದಲೇ ಡೆಲಿವರಿ ಆರಂಭವಾಗಲಿದೆ. ಬುಕಿಂಗ್ ಆರಂಭವಾದ ಕೇವಲ ಮೂರು ವಾರಗಳಲ್ಲಿ 23,311 ಕ್ಕೂ ಅಧಿಕ ಕಾರುಗಳ ಬುಕಿಂಗ್ ಆಗಿದೆ.

ಶಾಸಕಿ ರೋಜಾಗೆ ಸಿಕ್ತು ಪವರ್, ಕೈಗಾರಿಕಾ ನಿಗಮಕ್ಕೆ ಮುಖ್ಯಸ್ಥೆ

ವಿಶ್ವದ 8 ನೇ ಅತಿದೊಡ್ಡ ಆಟೋಮೇಕರ್ ಕಂಪನಿಯಾಗಿರುವ ಕಿಯಾ ಮೋಟರ್ಸ್, ಭಾರತದಲ್ಲಿ ಉತ್ಪಾದನೆ ಮಾಡಿದ ಮೊದಲ ವಾಹನವನ್ನು ಗುರುವಾರ (ಆಗಸ್ಟ್ 08) ಅನಾವರಣ ಮಾಡಿತು. ಆಂಧ್ರಪ್ರದೇಶದ ಅನಂತಪುರದಲ್ಲಿನ ತನ್ನ ಘಟಕದಲ್ಲಿ ಸಂಪೂರ್ಣ ದೇಶಿಯವಾಗಿ ತಯಾರಿಸಲಾದ ಕಾರು ಇದಾಗಿದೆ. ಸೆಲ್ಟೋಸ್ ಹೆಸರಿನ ಈ ಕಾರನ್ನು ದೇಶಾದ್ಯಂತ ವಿವಿಧ ಹವಾಗುಣಗಳಲ್ಲಿ ಮತ್ತು ಸವಾಲಿನ ದುರ್ಗಮ ರಸ್ತೆಗಳಲ್ಲಿ 20 ಲಕ್ಷ ಕಿಲೋಮೀಟರ್ ಗೂ ಅಧಿಕ ದೂರ ಪರೀಕ್ಷಾರ್ಥ ಚಾಲನೆ ಮಾಡಲಾಗಿದೆ. ಅತ್ಯುತ್ತಮ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಸೆಲ್ಟೋಸ್‍ನ ಸಾಮೂಹಿಕ ಉತ್ಪಾದನೆಯನ್ನು ಆರಂಭಿಸುವುದಾಗಿ ಕಿಯಾ ಮೋಟರ್ಸ್ ತಿಳಿಸಿದೆ.

ಸ್ಥಳೀಯರಿಗೆ ಉದ್ಯೋಗ ಖಾತ್ರಿ : ರೋಜಾ ಭರವಸೆ

ಸ್ಥಳೀಯರಿಗೆ ಉದ್ಯೋಗ ಖಾತ್ರಿ : ರೋಜಾ ಭರವಸೆ

ಆಂಧ್ರಪ್ರದೇಶದ ಔದ್ಯೋಗಿಕ ವಲಯದಲ್ಲಿ ಶೇ. 75 ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡುವಂತೆ ಕಾನೂನು ಜಾರಿಗೆ ತಂದಿರುವ ಜಗನ್ ರೆಡ್ಡಿ ಅವರು ಇಲಾಖೆಗೆ ಆದೇಶವನ್ನು ಕಳಿಸಿದ್ದಾರೆ. ಖಾಸಗಿ ಸಂಸ್ಥೆ, ಕಾರ್ಖಾನೆ, ಸರ್ಕಾರ-ಖಾಸಗಿ ಸಹಭಾಗಿತ್ವದ ಸಂಸ್ಥೆಗಳಲ್ಲಿ ಸ್ಥಳೀಯ ಯುವ ಪ್ರತಿಭಾವಂತರಿಗೆ ಶೇ.75 ಮೀಸಲಾತಿ ನೀಡಬೇಕಾಗುತ್ತದೆ.

ಆಂಧ್ರಪ್ರದೇಶದಲ್ಲಿ ಯಾವುದೇ ಮಟ್ಟದ ಕೈಗಾರಿಕೆ ಹೊಸದಾಗಿ ಸ್ಥಾಪಿಸಬೇಕಾದರೆ ಅಥವಾ ಹಳೆ ಕಂಪನಿ ಲೈಸನ್ಸ್ ನವೀಕರಿಸಬೇಕಾದರೆ ಎಪಿಐಐಸಿ ಚೇರ್ಮನ್ ಅನುಮತಿ ಅಗತ್ಯ. ಲೈಸನ್ಸ್ ಮಾತ್ರವಲ್ಲದೆ, ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ಹೊಣೆ ಕೂಡಾ ಈ ನಿಗಮದಡಿಯಲ್ಲಿ ಬರಲಿದೆ. ಜಮೀನು, ವಿದ್ಯುತ್, ಜಲ ಪೂರೈಕೆ ಹೀಗೆ ವಿವಿಧ ಇಲಾಖೆ ಜತೆ ಎಪಿಐಐಸಿ ಕಾರ್ಯ ನಿರ್ವಹಿಸಲಿದೆ.

ಸ್ಥಳೀಯರಿಗೆ ಉದ್ಯೋಗ ಖಾತ್ರಿ

ಸ್ಥಳೀಯರಿಗೆ ಉದ್ಯೋಗ ಖಾತ್ರಿ

ಭಾರತದಲ್ಲಿ ದಕ್ಷಿಣ ಕೊರಿಯಾದ ರಾಯಭಾರಿ ಶಿನ್ ಬಾಂಗ್-ಕಿಲ್ ಮತ್ತು ಕಿಯಾ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ & ಸಿಇಒ ಕೂಖ್ಯುನ್ ಶಿಮ್ ಅವರು ಕಂಪನಿಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ಗಣ್ಯರ ಸಮ್ಮುಖದಲ್ಲಿ ಕಿಯಾದ ಮೊದಲ ಸೆಲ್ಟೋಸ್ ಅನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಿಯಾ ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ & ಸಿಇಒ ಕೂಖ್ಯುನ್ ಶಿಮ್ ಅವರು, ``ಮೊದಲ ಸೆಲ್ಟೋಸ್ ಅನ್ನು ಬಿಡುಗಡೆ ಮಾಡುತ್ತಿರುವುದು ನಮಗೆಲ್ಲಾ ಒಂದು ರೀತಿಯ ಭಾವನಾತ್ಮಕ ಕ್ಷಣವಾಗಿದೆ. ಅದರಲ್ಲೂ ವಿಶೇಷವಾಗಿ ಈ ಕಾರನ್ನು ತಯಾರಿಸಲು ಹಗಲಿರುಳೂ ಶ್ರಮಿಸಿರುವ ಅನಂತಪುರ ಘಟಕದ ಜನರಿಗೆ ಅತ್ಯಂತ ಆನಂದದ ಕ್ಷಣವಾಗಿದೆ. ಇವರು ಭಾರತದಲ್ಲಿ ಕಿಯಾ ಮೋಟರ್ಸ್‍ಗೆ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ದಾಖಲೆಯ ಸಮಯದಲ್ಲಿ ಸೆಲ್ಟೋಸ್ ಅನ್ನು ಉತ್ಪಾದನೆ ಮಾಡಲು ಸಾಧ್ಯವಾಗಿರುವುದರ ಹಿಂದೆ ಆಂಧ್ರ ಪ್ರದೇಶದ ಸರ್ಕಾರದ ಕೊಡುಗೆ ಸಾಕಷ್ಟಿದೆ. ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಮೊದಲ ಸೆಲ್ಟೋಸ್ ಕಿಯಾ ಮೋಟರ್ಸ್‍ನ ಭರವಸೆ ಮತ್ತು ಬದ್ಧತೆಯ ಸಂಕೇತವಾಗಿದೆ'' ಎಂದು ಅಭಿಪ್ರಾಯಪಟ್ಟರು.

ಆಟೋ ಎಕ್ಸ್‍ಪೋ 2018 ರಲ್ಲಿ ಪಾಲ್ಗೊಳ್ಳುವ ಮೂಲಕ ಕಿಯಾ ಮೋಟರ್ಸ್

ಆಟೋ ಎಕ್ಸ್‍ಪೋ 2018 ರಲ್ಲಿ ಪಾಲ್ಗೊಳ್ಳುವ ಮೂಲಕ ಕಿಯಾ ಮೋಟರ್ಸ್

ಆಟೋ ಎಕ್ಸ್‍ಪೋ 2018 ರಲ್ಲಿ ಪಾಲ್ಗೊಳ್ಳುವ ಮೂಲಕ ಕಿಯಾ ಮೋಟರ್ಸ್ ಭಾರತಕ್ಕೆ ಪದಾರ್ಪಣೆ ಮಾಡಿತು. ಸೆಲ್ಟೋಸ್ ಸೇರಿದಂತೆ ಜಾಗತಿಕ ಮಟ್ಟದ ಒಟ್ಟು 16 ಕಾರುಗಳನ್ನು ಈ ಆಟೋ ಎಕ್ಸ್‍ಪೋದಲ್ಲಿ ಪ್ರದರ್ಶಿಸಿತ್ತು. ಇದರಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರವಾದ ಕಾರೆಂದರೆ ಸೆಲ್ಟೋಸ್. ಅನಂತಪುರ ಘಟಕ ಆರಂಭವಾದ ಕೇವಲ ಆರು ತಿಂಗಳಲ್ಲಿ ಪರೀಕ್ಷಾರ್ಥ ಉತ್ಪಾದನೆಯನ್ನು ಪೂರ್ಣಗೊಳಿಸಿತು ಮತ್ತು ದೆಹಲಿಯಲ್ಲಿ ಜೂನ್ 20 ರಂದು ಮೊದಲ ಸೆಲ್ಟೋಸ್ ಅನ್ನು ಪ್ರದರ್ಶಿಸಿತು. ಇದೀಗ ಅನಂತಪುರದ ವಿಶ್ವದರ್ಜೆಯ ಉತ್ಪಾದನಾ ಘಟಕದಲ್ಲಿ ಉತ್ಪಾದನೆಗೆ ಚಾಲನೆ ನೀಡಿದೆ. 536 ಎಕರೆ ಪ್ರದೇಶದಲ್ಲಿರುವ ಈ ಘಟಕದಲ್ಲಿ ವಾರ್ಷಿಕ 3,00,000 ವಾಹನಗಳನ್ನು ಉತ್ಪಾದಿಸುವ ಸಾಮಥ್ರ್ಯವನ್ನು ಹೊಂದಿದೆ. ಇದಲ್ಲದೇ, ಈ ಘಟಕದಲ್ಲಿ ಕಿಯಾ ಮೋಟರ್ಸ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನೂ ಉತ್ಪಾದಿಸಲಿದೆ.

ಅನಂತಪುರ ಘಟಕವು ರೊಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್

ಅನಂತಪುರ ಘಟಕವು ರೊಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್

ಅನಂತಪುರ ಘಟಕವು ರೊಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್‍ನಂತಹ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸುಸಜ್ಜಿತಗೊಂಡಿದೆ. ಪ್ರತಿಶತ ನೀರು ಪುನರ್‍ಬಳಕೆ ಘಟಕವನ್ನು ಹೊಂದಿದ್ದು, 5 ಎಕರೆ ಪ್ರದೇಶದಲ್ಲಿ ಆಟೋಮೋಬೈಲ್ಸ್‍ನಲ್ಲಿ ಕೌಶಲ್ಯಾಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಬೇಸಿಕ್ ಟೆಕ್ನಿಕಲ್ ಕೋರ್ಸ್(ಬಿಟಿಸಿ) ನೀಡಲಿದೆ.

ಬಿಡುಗಡೆಯಿಂದಲೇ ಸೆಲ್ಟೋಸ್ ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ. ಅತ್ಯುತ್ಕೃಷ್ಟವಾದ ಕಾರ್ಯಕ್ಷಮತೆ, ಬ್ರ್ಯಾಂಡ್ ನ್ಯೂ ಸ್ಮಾರ್ಟ್‍ಸ್ಟ್ರೀಂ ಇಂಜಿನ್‍ನೊಂದಿಗೆ ಮೂರು ಶ್ರೇಣಿಗಳಲ್ಲಿ ಲಭ್ಯವಿದೆ. 1.5 ಪೆಟ್ರೋಲ್, 1.5 ಡೀಸೆಲ್ ಶ್ರೇಣಿಯಲ್ಲಿದ್ದು, ಈ ಸೆಗ್ಮೆಂಟ್‍ನಲ್ಲಿ ಮೊದಲ 1.4 ಟರ್ಬೋ ಪೆಟ್ರೋಲ್ ಆಗಿದ್ದು, ಕಾರ್ಯಕ್ಷಮತೆ ಮತ್ತು ಸಮರ್ಥತೆಯಲ್ಲಿ ಪರಿಪೂರ್ಣವಾದ ಸಮತೋಲನವನ್ನು ಕಾಯ್ದುಕೊಳ್ಳಲಿದೆ. ಮಿಡ್-ಎಸ್‍ಯುವಿಯಲ್ಲಿ 3 ಆಟೋಮ್ಯಾಟಿಕ್ ಟ್ರಾನ್ಸ್‍ಮಿಶನ್ ಶ್ರೇಣಿಗಳಿವೆ. 7ಡಿಸಿಟಿ, ಐವಿಟಿ ಮತ್ತು 6 ಎಟಿಗಳಾಗಿವೆ.

ಕಿಯಾದ ಅಧಿಕೃತ ವೆಬ್‍ಸೈಟ್ ಮೂಲಕವೂ ಬುಕಿಂಗ್ ಸೌಲಭ್ಯವಿದೆ

ಕಿಯಾದ ಅಧಿಕೃತ ವೆಬ್‍ಸೈಟ್ ಮೂಲಕವೂ ಬುಕಿಂಗ್ ಸೌಲಭ್ಯವಿದೆ

2019 ರ ಆಗಸ್ಟ್ 22 ರಂದು ಸೆಲ್ಟೋಸ್ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ದೇಶದ 160 ನಗರಗಳಲ್ಲಿನ ಕಿಯಾ ಡೀಲರ್ ಶಿಪ್‍ಗಳಲ್ಲಿ ಬುಕಿಂಗ್ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೇ, ಕಿಯಾದ ಅಧಿಕೃತ ವೆಬ್‍ಸೈಟ್ ಮೂಲಕವೂ ಬುಕಿಂಗ್ ಸೌಲಭ್ಯವಿದೆ. 2019 ರ ಜುಲೈ 16 ರಂದು ಸೆಲ್ಟೋಸ್ ಬುಕಿಂಗ್ ಆರಂಭವಾಗಿದ್ದು, ಕೇವಲ ಮೂರು ವಾರಗಳಲ್ಲಿ 23,311 ಕ್ಕೂ ಅಧಿಕ (ಇಂದು ಮಧ್ಯಾಹ್ನ 2 ಗಂಟೆಯ ವೇಳೆಗೆ) ಸೆಲ್ಟೋಸ್‍ಗೆ ಬೇಡಿಕೆ ಬಂದಿದೆ. ಕಿಯಾ ಡೀಲರ್‍ಶಿಪ್‍ಗಳಲ್ಲಿ ಟೆಸ್ಟ್‍ಡ್ರೈವ್‍ಗಾಗಿ ಸೆಲ್ಟೋಸ್ ಲಭ್ಯವಿದೆ. ದೇಶಾದ್ಯಂತ ಆಗಸ್ಟ್ 22 ರಿಂದ ಸೆಲ್ಟೋಸ್ ವಿತರಣೆ ಆರಂಭವಾಗಲಿದೆ.

English summary
Ananthpur: APIIC Chairperson R.K. Roja inaugurates Kia Motors Seltos car manufacturing unit and said locals will get jobs as per CM Jagan reddy's vision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X