• search
 • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

30ರ ತರುಣಿ ಎಂದು 54ರ ಅಂಟಿ ಮದುವೆಯಾಗಿ ಮೋಸ ಹೋದ ವರ

|
Google Oneindia Kannada News

ಹೈದರಾಬಾದ್, ಜು. 08: ನನ್ನ ಹೆಸರು ಶರಣ್ಯ. ಎಲ್ಲರೂ ಸುಕನ್ಯಾ ಅಂತ ಕರೀತಾರೆ. ವಯಸ್ಸು ಇನ್ನೂ 34. ಇನ್ನೂ ಮದುವೆಯಾಗಿಲ್ಲ. ಮನೆ ಕಡೆ ಬಡತನ. ಬಾಳು ಕೊಡುವ ಒಳ್ಳೆಯ ವ್ಯಕ್ತಿಯಾಗಿದ್ದರೆ ಸಾಕು.. ಡೈವೋರ್ಸ್ ಆಗಿದ್ದರೂ ಪರವಾಗಿಲ್ಲ. ಯಾರಾದ್ರೂ ಇದ್ರೆ ಹೇಳಿ ಪ್ಲೀಸ್...

ಮದುವೆ ಬ್ರೋಕರ್ ಕೊಟ್ಟ ಈ ಆಫರ್ ನಂಬಿದ 35 ವರ್ಷ ವಯಸ್ಸಿನ ವ್ಯಕ್ತಿ 34ರ ತರುಣಿ ಎಂದು ಭಾವಿಸಿ 54 ವರ್ಷದ ಆಂಟಿಯನ್ನು ಮದುವೆಯಾಗಿ ಇದೀಗ ವಿಲ ವಿಲ ಒದ್ದಾಡುತ್ತಿದ್ದಾನೆ. ಶರಣ್ಯ ಅಸಲಿ ಸತ್ಯ ಗೊತ್ತಾಗಿ ಮದುವೆ ಮಾಡಿಸಿದ ತಾಯಿಯಿಂದಲೇ ಗಂಡ ಪೊಲೀಸರಿಗೆ ದೂರು ಕೊಡಿಸಿದ್ದಾನೆ.

ಹೆಣ್ಣು ಕೊಡಿ ಪ್ಲೀಸ್: ಮದುವೆ ಹುಡುಗಿಗಾಗಿ ಪೋಸ್ಟರ್ ಹಾಕಿದ ಇಲ್ಲೊಬ್ಬ ಧೀರ!ಹೆಣ್ಣು ಕೊಡಿ ಪ್ಲೀಸ್: ಮದುವೆ ಹುಡುಗಿಗಾಗಿ ಪೋಸ್ಟರ್ ಹಾಕಿದ ಇಲ್ಲೊಬ್ಬ ಧೀರ!

ಸುಕನ್ಯೆಯ ಅಸಲಿ ಕಥೆ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಮಾತ್ರವಲ್ಲ ಆಕೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮದುವೆಯಾದ ಕೆಲವೇ ದಿನಕ್ಕೆ ನಿಮ್ಮ ಮನೆ ಆಸ್ತಿ ನನ್ನ ಹೆಸರಿಗೆ ಬರಿಯಬೇಕು ಎಂದು ಗಲಾಟೆ ಮಾಡಿದ್ದ ಸುಕನ್ಯಾ, ಆಧಾರ್ ಕಾರ್ಡ್‌ನಿಂದ ಆಕೆಯ ಗಂಡಂದಿರ ಪುರಾಣ ಗೊತ್ತಾಗಿದೆ. ಮಾತ್ರವಲ್ಲ, ನನಗೆ 34 ವರ್ಷ ಅಂತ ಹೇಳಿದ್ದ ತರುಣಿ ವಯಸ್ಸು 54 ಎಂಬುದು ಗೊತ್ತಾಗಿದೆ. ಇದು ತಿಳಿದ 35 ವರ್ಷದ ಗಂಡ ಇಂಗು ತಿಂದ ಮಂಗನಂತಾಗಿದ್ದಾನೆ.

ಮಗನ ಮದುವೆ ಮಾಡಿಸುವ ಅಮ್ಮನ ಕನಸು

ಮಗನ ಮದುವೆ ಮಾಡಿಸುವ ಅಮ್ಮನ ಕನಸು

ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಪುದುಪೆಟ್ಟೈ ಗ್ರಾಮದಲ್ಲಿ ಇಂದ್ರಾಣಿ ಎಂಬ ಮಹಿಳೆಗೆ ಒಬ್ಬನೇ ಮಗ. ಆತ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ. 65 ವರ್ಷ ವಯಸ್ಸಿನ ತಾಯಿ ಜತೆ ಮಗ ಕೂಡ ಇದ್ದ. ಮಗ ಮದುವೆಯಾಗದೇ ಇದ್ದಿದ್ದನ್ನು ನೋಡಿ ತಾಯಿ ಇಂದ್ರಾಣಿ ಪ್ರತಿನಿತ್ಯ ಬೇಸರ ಪಡುತ್ತಿದ್ದಳು. ನಾನೊಬ್ಬಳು ಕಣ್ಣು ಮುಚ್ಚಿದರೆ ಮಗನಿಗೆ ಯಾರು ನೋಡ್ಕೋತಾರೆ ಎಂದು ಭಾವಿಸಿ ಮದುವೆ ಬ್ರೋಕರ್‌ಗೆ ಹುಡುಗಿ ಹುಡುಕಲು ಹೇಳಿದ್ದಳು.

ಮದುವೆ ಆಗಿ ಒಂದೇ ವರ್ಷಕ್ಕೆ ಕಿರಿಕಿರಿ

ಮದುವೆ ಆಗಿ ಒಂದೇ ವರ್ಷಕ್ಕೆ ಕಿರಿಕಿರಿ

ಮದುವೆ ಬ್ರೋಕರ್ ಇಂದ್ರಾಣಿಗೆ ಪರಿಚಯಿಸಿದ್ದೇ ಶರಣ್ಯ. ಆಂಧ್ರ ಪ್ರದೇಶದವಳು, ವಯಸ್ಸು 34 ವರ್ಷ ಎಂದು ಮದುವೆ ಬ್ರೋಕರ್ ಹೇಳಿದ್ದ. ಮದುವೆಯಾದ ನಂತರ ಹುಡುಗಿಗೆ ಹುಡುಗನ ಕಡೆಯಿಂದ 25 ಗ್ರಾಂ ಚಿನ್ನಾಭರಣ ನೀಡುವ ಭರವಸೆ ಕೂಡ ನೀಡಲಾಗಿತ್ತು. ಶರಣ್ಯ ಮತ್ತು ಇಂದ್ರಾಣಿಯ ಪುತ್ರನ ಮದುವೆ 2021 ರಲ್ಲಿ ನಡೆದು ಹೋಯಿತು.

ಐದಾರು ತಿಂಗಳು ಸಂಸಾರ ಮಾಡಿದ್ರೂ ಶರಣ್ಯ ಅಸಲಿ ವಯಸ್ಸು ಗೊತ್ತಾಗಲೇ ಇಲ್ಲ. ಇದ್ದಕ್ಕಿದ್ದಂತೆ ನಿಮ್ಮ ಹೆಸರಿನಲ್ಲಿರುವ ಆಸ್ತಿಯನ್ನು ನನ್ನ ಹೆಸರಿಗೆ ವರ್ಗಾಯಿಸಬೇಕು ಎಂದು ಬೇಡಿಕೆ ಇಟ್ಟಳು. ಅತ್ತೆ ಇಂದ್ರಾಣಿಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾಳೆ. ತಾಯಿಗೆ ಆಗುತ್ತಿದ್ದ ತೊಂದರೆ ನೋಡಿ ಆಸ್ತಿಯನ್ನು ನಿನ್ನ ಹೆಸರಿಗೆ ಮಾಡಿಕೊಡುವುದಾಗಿ ಪತಿ ಹೇಳಿದ್ದಾನೆ.

ಆಧಾರ್ ಗಂಡನ ಹೆಸರು ರವಿ

ಆಧಾರ್ ಗಂಡನ ಹೆಸರು ರವಿ

ಪತಿಯ ಕೋರಿಕೆ ಮೇರೆಗೆ ಶರಣ್ಯ ತನ್ನ ಆಧಾರ್ ಕಾರ್ಡ್‌ನ್ನು ಕೊಟ್ಟಿದ್ದಾಳೆ. ಅದನ್ನು ನೋಡಿದ ಗಂಡನಿಗೆ ಶಾಕ್ ಖಾದಿತ್ತು. ಈಕೆಯ ವಯಸ್ಸು 34 ವರ್ಷ ವಲ್ಲ. 54 ವರ್ಷ ಎಂಬುದು ಗೊತ್ತಾಗಿದೆ. ಮಿಗಿಲಾಗಿ ಈಕೆ ಗಂಡನ ಹೆಸರು ರವಿ ಎಂದು ಬರೆದಿತ್ತು. ಈ ಆಧಾರ್ ಕಾರ್ಡ್ ನೋಡಿದ ಬಳಿಕ ಶರಣ್ಯಾ ಬಗ್ಗೆ ಅನುಮಾನ ಮೂಡಿದೆ. ಕೂಡಲೇ ಇಂದ್ರಾಣಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶರಣ್ಯ, ಸಂಧ್ಯಾ, ಸುಕನ್ಯೆ ಹೆಸರಿನಲ್ಲಿ ಡೈವೋರ್ಸಿಗಳಿಗೆ ಗಾಳ

ಶರಣ್ಯ, ಸಂಧ್ಯಾ, ಸುಕನ್ಯೆ ಹೆಸರಿನಲ್ಲಿ ಡೈವೋರ್ಸಿಗಳಿಗೆ ಗಾಳ

ಅತ್ತೆ ಇಂದ್ರಾಣಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ, ಶರಣ್ಯಗೆ ಒಂದು ಹೆಸರು, ಒಬ್ಬ ಗಂಡನಲ್ಲ. ಹಲವು ಗಂಡಂದಿರು ಹಾಗೂ ಹಲವು ಹೆಸರುಗಳಿವೆ. ಶರಣ್ಯ, ಸುಕನ್ಯಾ, ಸಂಧ್ಯಾ ಹೀಗೆ ನಾನಾ ಹೆಸರಿನಲ್ಲಿ ಗಾಳಹಾಕುತ್ತಿದ್ದರು. ಹಲವರನ್ನು ಮದುವೆಯಾಗಿ ಅವರಿಗೆ ನಾಮ ಹಾಕಿದ್ದಳು. ಹಳೇ ಪತಿ ರವಿ ಮೇಲೆ ಕೇಸು ಹಾಕಿ 10 ಲಕ್ಷ ರೂ. ಕಲೆಕ್ಷನ್ ಮಾಡಿದ್ದಳು. ಇದಾದ ಬಳಿಕ ಸುಬ್ರಮಣಿ ಎಂಬಾತನನ್ನು ಮದುವೆಯಾಗಿದ್ದಳು.

ಹನ್ನೊಂದು ವರ್ಷ ಸಂಸಾರ ಮಾಡಿದ್ದಳು. ಕೋವಿಡ್ ಸಮಯದಲ್ಲಿ ಸುಬ್ರಮಣಿ ಸಾವನ್ನಪ್ಪಿದ್ದ. ಹೀಗಾಗಿ ತವರು ಮನೆಗೆ ಬಂದಿದ್ದಳು. ಆ ಬಳಿಕ ತಮಿಳುನಾಡು ಮೂಲದ ಇಂದ್ರಾಣಿಯ ಪುತ್ರನಿಗೆ ಗಾಳ ಹಾಕಿ ಮದುವೆಯಾಗಿ ಆಸ್ತಿ ಕಬಳಿಸಲು ಗಾಳ ಹಾಕಿದ್ದಳು. ಆದರೆ ಆಧಾರ್ ಕಾರ್ಡ್‌ನಿಂದ ಆಕೆಯ ಅಸಲಿ ಚರಿತ್ರೆ ಹೊರಗೆ ಬಂದಿದೆ. ಪೊಲೀಸರಿಗೆ ಸತ್ಯ ಗೊತ್ತಾದ ಮೇಲೆ ಆಕೆಯ ವಿರುದ್ಧ ಕೇಸು ದಾಖಲಿಸಿದ್ದಾರೆ.

Recommended Video

   Dinesh Karthik ವಿಚಾರದಲ್ಲಿ Rohit Sharma ನಿರ್ಧಾರ ಸರೀನಾ? | *Cricket | OneIndia Kannada
   English summary
   Andra pradesh women was arrested by the police , who targeting divorced men and cheating in the name of marriage know more ,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X