ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಪ್ರದೇಶದಲ್ಲಿ ಅನಿಲ ಸೋರಿಕೆಯಿಂದ ಕಾರ್ಮಿಕರಿಗೆ ವಾಂತಿ, ವಾಕರಿಕೆ ಮತ್ತು ಮೂರ್ಛೆ!

|
Google Oneindia Kannada News

ಅಮರಾವತಿ, ಆಗಸ್ಟ್ 3: ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಅಚ್ಯುತಪುರಂನಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿ ಅನಿಲ ಸೋರಿಕೆ ಸಂಭವಿಸಿದ್ದು, ಗಾರ್ಮೆಂಟ್ಸ್ ಕಾರ್ಖಾನೆಯ ಕನಿಷ್ಠ 150 ಮಂದಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.

ಅನಿಲ ಸೋರಿಕೆಯ ನಿಖರವಾದ ಮೂಲ ಯಾವುದು ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಮಂಗಳವಾರ ರಾತ್ರಿ 8.30ರ ಸುಮಾರಿಗೆ ಹತ್ತಿರದ ಪಶುವೈದ್ಯಕೀಯ ಔಷಧ ಪ್ರಯೋಗಾಲಯದಿಂದ ಅನಿಲ ಸೋರಿಕೆ ಆಗಿರುವ ಕುರಿತು ಶಂಕಿಸಲಾಗಿದೆ.

ಆಂಧ್ರ ಕೆಮಿಕಲ್ ಲ್ಯಾಬ್‌ನಲ್ಲಿ ಬೆಂಕಿ: 6 ಮಂದಿ ಬಲಿ, 11 ಮಂದಿಗೆ ಗಾಯಆಂಧ್ರ ಕೆಮಿಕಲ್ ಲ್ಯಾಬ್‌ನಲ್ಲಿ ಬೆಂಕಿ: 6 ಮಂದಿ ಬಲಿ, 11 ಮಂದಿಗೆ ಗಾಯ

ಆಂಧ್ರ ಪ್ರದೇಶದಲ್ಲಿ ಅನಿಲ ಸೋರಿಕೆ ಘಟನೆ ನಡೆೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಏಪ್ರಿಲ್ 13ರಂದು, ಪ್ರಯೋಗಾಲಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಏಳು ಜನರು ಸಾವನ್ನಪ್ಪಿದ್ದು, 15 ಜನರು ಗಾಯಗೊಂಡಿದ್ದರು.

Andhra Pradesh More than 150 Workers fall ill after gas leak at apparel plant

ಎನ್‌ಟಿಆರ್ ಸರ್ಕಾರಿ ಆಸ್ಪತ್ರೆಗೆ ದಾಖಲು: ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡ ಹಲವರಿಗೆ ಕಾರ್ಖಾನೆಯಲ್ಲಿಯೇ ಚಿಕಿತ್ಸೆ ನೀಡಲಾಗಿದ್ದರೆ, ಇನ್ನೂ 50ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನು ಬಸ್‌ಗಳು ಮತ್ತು ಕಾರುಗಳಲ್ಲಿ ಅನಕಾಪಲ್ಲಿಯ ಎನ್‌ಟಿಆರ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು," ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Andhra Pradesh More than 150 Workers fall ill after gas leak at apparel plant

ಕಾರ್ಮಿಕರಿಗೆ ವಾಕರಿಕೆ ಮತ್ತು ವಾಂದಿ: ಅನಿಲ ಸೋರಿಕೆ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಶಿಫ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ವಾಕರಿಕೆ, ವಾಂತಿ ಮಾಡಿಕೊಂಡರೆ, ಇನ್ನೂ ಕೆಲವು ಕಾರ್ಮಿಕರು ಮೂರ್ಛೆ ಹೋದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಕಳೆದ ಜೂನ್ 3ರಂದು ಸಹ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇದೇ ರೀತಿಯ ಅನಿಲ ಸೋರಿಕೆಯಿಂದ 170ಕ್ಕೂ ಹೆಚ್ಚು ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದರು.

Recommended Video

ಏಳು ಕೋಟಿ ಕನ್ನಡಿಗನ ಗಾಡಿಗೆ ಕನ್ನಡಿಗರೆಲ್ಲರೂ ಫಿದಾ | OneIndia Kannada

English summary
Andhra Pradesh: More than 150 Workers taken ill after gas leak at apparel plant. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X