ಇವಿಎಂ ನೆಲಕ್ಕೆ ಎಸೆದು ಪುಡಿ ಮಾಡಿದ ಪವನ್ ಕಲ್ಯಾಣ್ ಪಕ್ಷದ ಅಭ್ಯರ್ಥಿ

ಅಮರಾವತಿ, ಏಪ್ರಿಲ್ 11: ನಟ ಪವನ್ ಕಲ್ಯಾಣ್ ಸ್ಥಾಪಿಸಿರುವ ಜನಸೇನಾ ಪಕ್ಷದ ಅಭ್ಯರ್ಥಿ ಮತಗಟ್ಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಅತಿರೇಕದ ವರ್ತನೆ ತೋರಿಸಿದ್ದಕ್ಕಾಗಿ ಪೊಲೀಸರ ಅತಿಥಿಯಾಗಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುಂಟಕಲ್ ವಿಧಾನಸಭೆ ಕ್ಷೇತ್ರಕ್ಕೆ ಜನಸೇನಾ ಪಕ್ಷದ ಅಭ್ಯರ್ಥಿಯಾಗಿ ಮಧುಸೂದನ್ ಗುಪ್ತಾ ಸ್ಪರ್ಧಿಸಿದ್ದಾರೆ. ಗುತ್ತಿ ಮತಗಟ್ಟೆಯಲ್ಲಿ ಮತದಾನದ ವೇಳೆ ಮತಯಂತ್ರದಲ್ಲಿ ಹೆಸರುಗಳು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಮಧುಸೂದನ್ ಆಕ್ರೋಶ ವ್ಯಕ್ತಪಡಿಸಿದ್ದರು. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಸಿಟ್ಟಿಗೆದ್ದ ಮಧುಸೂದನ್, ಮತಗಟ್ಟೆಯಲ್ಲಿದ್ದ ಯಂತ್ರವನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದಾರೆ. ಇದರಿಂದ ಮತಯಂತ್ರ ಒಡೆದು ಹೋಗಿದೆ.

Andhra Pradesh Assembly elections 2019 jana sena party madhusudan gupta damaged evm arrested

ಇಷ್ಟಕ್ಕೆ ಸುಮ್ಮನಾಗದೆ ಮಧುಸೂದನ್, ಎಲ್ಲ ಇವಿಎಂಗಳನ್ನೂ ಒಡೆದು ಪುಡಿಮಾಡುವುದಾಗಿ ಕೂಗಿದ್ದಾರೆ. ಕೂಡಲೇ ಜಾಗ್ರತರಾದ ಪೊಲೀಸರು ಅವರನ್ನು ಬಂಧಿಸಿ, ತಮ್ಮ ವಾಹನದಲ್ಲಿ ಕರೆದೊಯ್ದಿದ್ದಾರೆ. ಮಧುಸೂದನ್ ಗುಪ್ತಾ ಕಾಂಗ್ರೆಸ್‌ ತೊರೆದು ಇತ್ತೀಚೆಗೆ ಜನಸೇನಾ ಸೇರಿಕೊಂಡಿದ್ದರು. ಅವರು ಗುಂಟಕಲ್ ಕ್ಷೇತ್ರದ ಮಾಜಿ ಶಾಸಕರೂ ಹೌದು.

ಆಂಧ್ರಪ್ರದೇಶದಲ್ಲಿ 175 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದೊಂದಿಗೇ ಇಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ.

2,118 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 46,120 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬೀಳಲಿದ್ದು, ಅದೇ ದಿನ ಆಂಧ್ರಪ್ರದೇಶದ ವಿಧಾನಸಭೆ ಫಲಿತಾಂಶ ಕೂಡ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+