• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಶಾಸಕ ಕಾಲಿನಿಂದ ಒದ್ದ, ಅವಾಚ್ಯವಾಗಿ ಬೈದ: ಸಂತ್ರಸ್ತೆ

|

ಅಹ್ಮದಾಬಾದ್, ಜೂನ್ 03: ಗುಜರಾತ್‌ನ ನರೋಡ ಕ್ಷೇತ್ರದ ಬಿಜೆಪಿ ಶಾಸಕ, ಮಹಿಳೆಯೋರ್ವರನ್ನು ನಡುರಸ್ತೆಯಲ್ಲಿ ಒದೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಸಂತ್ರಸ್ತ ಮಹಿಳೆ ಮಾಧ್ಯಮಗಳೊಂದಿಗೆ ಮಾತನಾಡಿ ತಮಗಾದ ಅನುಭವ ಹೇಳಿಕೊಂಡಿದ್ದಾರೆ.

ನರೋಡಾದ ವಾರ್ಡ್‌ ಒಂದರ ಮುಖ್ಯಸ್ಥಳಾಗಿರುವ ಮಹಿಳೆ ಆಕೆಯ ಪತಿ ಸೇರಿದಂತೆ ಇನ್ನೂ ಕೆಲವು ಮಹಿಳೆಯರೊಂದಿಗೆ ಸೇರಿ ಶಾಸಕರನ್ನು ಭೇಟಿಯಾಗಿ ತಮ್ಮ ವಾರ್ಡ್‌ಗೆ ನೀರು ಕಳಿಸಿಕೊಡುವಂತೆ ಮನವಿ ಮಾಡಿದ್ದಾರೆ ಇದರಿಂದ ರೊಚ್ಚಿಗೆದ್ದ ಬಿಜೆಪಿ ಶಾಸಕ ಬಲರಾಮ್ ತಾವಾನಿ ಮಹಿಳೆಯನ್ನು ನಡುರಸ್ತೆಯಲ್ಲಿಯೇ ಒದ್ದು ಹಿಂಸಿಸಿದ್ದಾನೆ. ಆತನ ಬೆಂಬಲಿಗರೂ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ.

ವಿಡಿಯೋ: ಕಷ್ಟ ಹೇಳಲು ಬಂದ ಮಹಿಳೆಯ ನಡುರಸ್ತೆಯಲ್ಲಿ ಒದ್ದ ಬಿಜೆಪಿ ಶಾಸಕ

ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂತ್ರಸ್ತ ಮಹಿಳೆ, ಸ್ವಲ್ಪ ಜೋರು ದನಿಯಲ್ಲಿ ನೀರು ಕೇಳಿದ್ದಕ್ಕೆ, ಶಾಸಕರ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದರು. ಶಾಸಕ ಬಲರಾಮ್ ಸತತವಾಗಿ ನನ್ನನ್ನು ಕಾಲಿನಿಂದ ಒದ್ದರು. ನನ್ನನ್ನು ಬಿಡಿಸಲು ಬಂದ ನನ್ನ ಪತಿಯನ್ನು ದೊಣ್ಣೆಗಳಿಂದ ಹೊಡೆದರು, ನನ್ನ ಜೊತೆ ಬಂದಿದ್ದ ಮಹಿಳೆಯರನ್ನೂ ಹೊಡೆದರು ಎಂದು ಆಕೆ ಘಟನೆ ಬಗ್ಗೆ ಹೇಳಿದ್ದಾರೆ.

ಬಿಡಿಸಲು ಬಂದ ಪತಿಯ ಮೇಲೆ ಹಲ್ಲೆ

ಪತಿಗೆ ಸಾಕಷ್ಟು ಪೆಟ್ಟಾಗಿದ್ದು, ನನಗೂ ಕಾಲಿನಿಂದ ಹೊಟ್ಟೆಗೆ ಒದ್ದಿರುವ ಕಾರಣ ಪೆಟ್ಟಾಗಿದೆ. ವೈದ್ಯರ ಬಳಿ ತಪಾಸಣೆ ಮಾಡಿಸಿದ್ದೇವೆ ಚಿಕಿತ್ಸೆಯನ್ನು ಪಡೆದಿದ್ದೇವೆ ಎಂದ ಅವರು, ಶಾಸಕ ಬಲರಾಮ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳುತ್ತಿದ್ದಾರೆಂದು ಮಹಿಳೆ ಹೇಳಿದ್ದಾರೆ.

ರಾಷ್ಟ್ರಪಿತ ಯಾರು, ವೇದವ್ಯಾಸರೋ, ಗಾಂಧೀಜಿಯೋ? ಪೇಜಾವರ Vs ಬಂಜಗೆರೆ

ಬಿಜೆಪಿ ಮಹಿಳಾ ಭಕ್ಷಕ ಪಕ್ಷ: ಸಂತ್ರಸ್ತೆ

ಬಿಜೆಪಿ ಮಹಿಳಾ ಭಕ್ಷಕ ಪಕ್ಷ: ಸಂತ್ರಸ್ತೆ

ಬಿಜೆಪಿ ಇದ್ದರೆ ಮಹಿಳೆಗೆ ರಕ್ಷಣೆ ಎಂದು ಮೋದಿ ಹೇಳುತ್ತಾರೆ ಆದರೆ ಬಿಜೆಪಿ ಮಹಿಳಾ ಭಕ್ಷಕ, ಇದಕ್ಕೆ ನಾನೇ ಸಾಕ್ಷಿ ಎಂದ ಮಹಿಳೆ. 'ಭೇಟಿ ಬಚಾವೊ, ಭೇಟಿ ಪಡಾವೋ' ಎನ್ನುವ ಬಿಜೆಪಿ ಮಹಿಳೆಯರ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ತಾವಾನಿಗಳ ದೌರ್ಜನ್ಯ ಹೆಚ್ಚಾಗಿದೆ

ತಾವಾನಿಗಳ ದೌರ್ಜನ್ಯ ಹೆಚ್ಚಾಗಿದೆ

ನರೋಡದಲ್ಲಿ ತಾವಾನಿಗಳ ಆರ್ಭಟ ಹೆಚ್ಚಾಗಿದೆ. ಈ ಮುಂಚೆ ಬಲರಾಮ್ ತಾವಾನಿ ಅವರ ತಂದೆ ಶಾಸಕರಾಗಿದ್ದರು, ಈಗ ಮಗ ಆಗಿದ್ದಾನೆ. ಮುಂಚೆಯಿಂದಲೂ ಈ ಕ್ಷೇತ್ರ ತಾವಾನಿಗಳ ಹಿಡಿದಲ್ಲಿದೆ, ಅದಕ್ಕೆ ಅವರು ಉಳಿದವರ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ಮಹಿಳೆ ಆಕ್ರೋಶ ಹೊರಹಾಕಿದರು.

ವಿಡಿಯೋ ವೈರಲ್

ವಿಡಿಯೋ ವೈರಲ್

ಶಾಸಕ ಬಲರಾಮ್‌ ಮತ್ತು ಆತನ ಬೆಂಬಲಿಗರು ಮಹಿಳೆಯನ್ನು ಸಾರ್ವಜನಿಕವಾಗಿ ಒದೆಯುತ್ತಿರುವ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಘಟನೆ ಕುರಿತಂತೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

English summary
BJP MLA Balram Thawani assulted a woman publicly. Lady gave complaint to police station. Woman narrates her ordeal about incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X