• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಢನಿದ್ರೆಯಲ್ಲಿದ್ದ ಬಾಲಕಿಯನ್ನು ಸೇತುವೆ ಕೆಳಗೆ ಎಳೆದೊಯ್ದು ಅತ್ಯಾಚಾರ

|

ಗಾಂಧಿನಗರ, ಡಿಸೆಂಬರ್ 2: ಪೋಷಕರೊಂದಿಗೆ ಮಲಗಿದ್ದ ಬಾಲಕಿಯನ್ನು ಸೇತುವೆ ಕೆಳಗೆ ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಗುಜರಾತಿನ ರಾಜ್‌ಕೋಟ್ ಬಳಿ ನಡೆದಿದೆ.

ಪೋಷಕರೊಂದಿಗೆ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಕಾಮಕನೊಬ್ಬ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ತೆಲಂಗಾಣ ಅತ್ಯಾಚಾರ ಪ್ರಕರಣ: ಒಂದು ಗಂಟೆಯಲ್ಲೇ ಅದೆಲ್ಲಾ ಮುಗಿದಿತ್ತುತೆಲಂಗಾಣ ಅತ್ಯಾಚಾರ ಪ್ರಕರಣ: ಒಂದು ಗಂಟೆಯಲ್ಲೇ ಅದೆಲ್ಲಾ ಮುಗಿದಿತ್ತು

ಅಮೂಲ್ ಕ್ರಾಸ್ ರಸ್ತೆಯ ರಾಜಕೋಟ್ ನಗರಸಭೆಯ ಗಾರ್ಡನ್‍ನಲ್ಲಿ ಬಾಲಕಿ ಕುಟುಂಬದವರೊಂದಿಗೆ ಮಲಗಿದ್ದಳು. ಅಲ್ಲಿಂದ ಬಾಲಕಿಯನ್ನು ಸೇತುವೆ ಕೆಳಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆರೋಪಿ ಅತ್ಯಾಚಾರ ಎಸಗಿದ್ದಾನೆ.

ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. 8 ವರ್ಷದ ಬಾಲಕಿಯನ್ನು ಮಧ್ಯಮ ವಯಸ್ಕನೊಬ್ಬ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಾತ್ರಿ 11.30ಕ್ಕೆ ಬಾಲಕಿಯನ್ನು ಬ್ಲಾಂಕೆಟ್ ಸಮೇತ ಎಳೆದುಕೊಂಡು ಹೋಗಿದ್ದಾನೆ. ಘಟನೆ ನಂತರ ಬಾಲಕಿ ತನ್ನ ಕುಟುಂಬದವರ ಬಳಿ ಓಡೋಡಿ ಬಂದಿದ್ದಾಳೆ. ಆರೋಪಿ ಕೆಲಹೊತ್ತು ಅದೇ ಸ್ಥಳದಲ್ಲಿ ಏಕಾಂಗಿಯಾಗಿ ಓಡಾಡಿದ್ದರ ಕುರಿತು ವಿಡಿಯೋದಲ್ಲಿ ದಾಖಲಾಗಿದೆ.

ಆಕೆಯನ್ನು ಎಳೆದೊಯ್ದ ಬಳಿಕ ಎಲ್ಲರಿಗೂ ಎಚ್ಚರವಾಗಿದೆ, ಆಕೆಯನ್ನು ಹುಡುಕುತ್ತಾ ಅಲೆದಾಡಿದರೂ ಪತ್ತೆಯಾಗಿರಲಿಲ್ಲ, ಬಳಿಕ ಆಕೆ ಅಳುತ್ತಾ ಓಡೋಡಿಬರುತ್ತಿರುವುದು ಕಾಣಿಸಿತು.ಬಳಿಕ ವಿಚಾರಿಸಿದಾಗ ವಿಷಯ ತಿಳಿದುಬಂದಿದೆ. ಬಾಲಕಿ ಆಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

English summary
The Girl Who Was Asleep Was Dragged Down The Bridge And Raped Rajkot Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X