ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದಾನಿ ಗ್ರೂಪ್‌ನ 'ಮುಂದ್ರಾ' ಬಂದರಿನಲ್ಲಿ ಹೆರಾಯಿನ್ ವಶಕ್ಕೆ

|
Google Oneindia Kannada News

ಗುಜರಾತ್ ಜು.13: ದೇಶದಲ್ಲೇ ಅತಿ ದೊಡ್ಡ ಖಾಸಗಿ ಬಂದರು ಎನ್ನಲಾಗುವ ಗುಜರಾತ್‌ನಲ್ಲಿರುವ ಗಲ್ಫ್ ಆಫ್ ಕಚ್‌ನಲ್ಲಿನ ಮುಂದ್ರಾ ಬಂದರಿನಲ್ಲಿ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿ 350 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಇದು ಬಂದರಿನಲ್ಲಿ ಈ ವರ್ಷದ ನಡೆದ ಎರಡನೇ ದಾಳಿಯಾಗಿದೆ.

ರಾಜ್ಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹೆರಾಯಿನ್ ಹಾಗೂ ಕಂಟೈನರ್ ವಶಪಡಿಸಿಕೊಳ್ಳಲಾಗಿದೆ. ಅದಾನಿ ಗ್ರೂಪ್ ನಿರ್ವಹಣೆಯ 'ಮುಂದ್ರಾ' ಬಂದರಿನಲ್ಲಿ ಕಳೆದ ಒಂದು ವರ್ಷದಲ್ಲಿ ಎರಡನೇ ಬಾರಿ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ.

ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರಲು 3 ಲಕ್ಷ ಜನರ ನೋಂದಣಿ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರಲು 3 ಲಕ್ಷ ಜನರ ನೋಂದಣಿ

ಜವಳಿ ಸಾಗಾಟಕ್ಕೆ ಅಧಿಕೃತವಾಗಿ ಒಪ್ಪಿಗೆ ಪಡೆದಿದ್ದ ಕಂಟೈನರ್‌ಗಳಲ್ಲಿ 70 ಕೆಜಿಗೂ ಹೆಚ್ಚು ಹೆರಾಯಿನ್ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಧಿಕಾರಿಗಳು ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Rs 350 Crore Heroin seized in Mundra port at Gujarat

ಈ ಜಂಟಿ ಕಾರ್ಯಾಚರಣೆ ಕುರಿತು ಗುಜರಾತ್ ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.

21,000 ಕೋಟಿ ಹೆರಾಯಿನ್ ಪತ್ತೆ; ಹಿಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಇರಾನ್‌ನ ಅಬ್ಬಾಸ್ ಬಂದರಿನಿಂದ ಅಧಿಕೃತವಾಗಿ ಅರೆ-ಸಂಸ್ಕರಿಸಿದ ಟಾಲ್ಕ್ ಕಲ್ಲುಗಳನ್ನು ಸಾಗಿಸುವ ಮೂರು ಕಂಟೈನರ್ ತಪಾಸಣೆಗೆ ಒಳಪಡಿಸಲಾಗಿತ್ತು. ಆಗ 21,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹೆರಾಯಿನ್ ಪತ್ತೆಯಾಗಿತ್ತು.

ಈ ಕುರಿತು ಅಧಿಕಾರಿಗಳು ಚೆನ್ನೈ ಮೂಲದ ದಂಪತಿಯನ್ನು ಬಂಧಿಸಿದಾಗ ಅವರ ಸಂಸ್ಥೆಯು ಸರಕುಗಳನ್ನು ಆರ್ಡರ್ ಮಾಡಿದೆ ಎಂದು ಹೇಳಲಾಗಿತ್ತು. ಆದರೆ ನಿಷೇಧಿತ ವಸ್ತುವೊಂದು ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದಿಂದ ಇರಾನ್ ಮಾರ್ಗವಾಗಿ ಬಂದಿರುವುದು ಸಾಕಷ್ಟು ಅನುಮಾನ ಗಳಿಗೆ ಕಾರಣವಾಗಿತ್ತು.

Rs 350 Crore Heroin seized in Mundra port at Gujarat

ನಂತರ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ಹಸ್ತಾಂತರಿಸಲಾಯಿತು. ಇದೀಗ ಮತ್ತದೇ 'ಮುಂದ್ರಾ' ಬಂದರಿನಲ್ಲಿ ನಿಷೇಧಿತ ಹೆರಾಯಿನ್ ಪತ್ತೆಯಾಗಿದೆ.

English summary
Heroin worth Rs 350 crore has been seized at the private Mundra port controlled by Adani Group in Gujarat. Anti Terrorism Squad and Directorate of Revenue Intelligence conducted joint operation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X