"ಗೋಧ್ರಾ ಥರವೇ ಪುಲ್ವಾಮಾ ದಾಳಿಯೂ ಬಿಜೆಪಿಯದೇ ಪಿತೂರಿ"

ಅಹ್ಮದಾಬಾದ್, ಮೇ 02: ಗೋಧ್ರಾ ಥರವೇ ಪುಲ್ವಾಮಾ ದಾಳಿಯೂ ಬಿಜೆಪಿ ಮಾಡಿದ ಪಿತೂರಿ ಎಂಬ ಆಘಾತಕಾರಿ ಹೇಳಿಕೆಯನ್ನು ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರ್ ಸಿನ್ಹ ವಘೇಲಾ ನೀಡಿದ್ದಾರೆ.

ಲೋಕಸಭಾ ಚುನಾವಣೆ ವಿಶೇಷ ಪುಟ

"ಪುಲ್ವಾಮಾ ದಾಳಿಯಲ್ಲಿ ಬಳಸಿದ ಆರ್ ಡಿಎಕ್ಸ್ ಹೊತ್ತ ಕಾರಿನಲ್ಲಿದ್ದಿದ್ದು ಗುಜರಾತಿನ ರಿಜಸ್ಟ್ರೇಶನ್ ಸಂಖ್ಯೆ. ಗೋಧ್ರಾ ಸಹ ಇಂಥದೇ ಒಂದು ಪಿತೂರಿ" ಎಂದು ವಘೇಲಾ ನೇರವಾಗಿ ಬಿಜೆಪಿಯ ವಿರುದ್ಧ ಆರೋಪದ ಸುರಿಮಳೆ ಹೊರಿಸಿದ್ದಾರೆ.

"ಭಯೋತ್ಪಾದನೆಯನ್ನು ಬಿಜೆಪಿ ಚುನಾವಣೆಯ ಗೆಲುವಿಗಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿ ಆಡಳಿತಾವಧಿಯಲ್ಲೇ ಹೆಚ್ಚು ಭಯೋತ್ಪಾದಕ ಚಟುವಟಿಕೆಗಳು ನಡೆದಿವೆ. ಬಾಲಕೋಟ್ ಏರ್ ಸ್ಟ್ರೈಕ್ ನಲ್ಲಿ ಒಬ್ಬನೇ ಒಬ್ಬನೂ ಸತ್ತಿಲ್ಲ. ಇನ್ನೂರು ಉಗ್ರರು ಸತ್ತಿದ್ದಾರೆ ಎಂಬುದಕ್ಕೆ ಇದುವರೆಗೆ ಒಬ್ಬರಿಗೂ ಒಂದೇ ಒಂದು ಪುರಾವೆಯೂ ಸಿಕ್ಕಿಲ್ಲ. ಬಾಲಕೋಟ್ ಏರ್ ಸ್ಟ್ರೈಕ್ ಸಹ ಬೇಕೆಂದೇ ಮಾಡಿದ ಪಿತೂರಿ" ಎಂದು ಅವರು ದೂರಿದ್ದಾರೆ.

Pulwama attack is BJPs Conspiracy: Shankersinh Vaghela

ಬಿಜೆಪಿಯಿಂದಲೇ ರಾಜಕೀಯ ಬದುಕು ಆರಂಭಿಸಿದ ಶಂಕರ್ ಸಿನ್ಹ ವಘೇಲಾ, ನಂತರ ಹೊಸ ಪಕ್ಷ ಕಟ್ಟಿ, ನಂತರ ಕಾಂಗ್ರೆಸ್ ಸೇರಿ, ಪ್ರಸ್ತುತ ನ್ಯಾಶ್ನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+