• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೂರತ್ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದ ಮೋದಿ

|

ಅಹಮದಾಬಾದ್, ಜನವರಿ 18: ಅಹ್ಮದಾಬಾದ್, ಸೂರತ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಿದ್ದಾರೆ.

''ದೇಶದ 27 ನಗರಗಳಲ್ಲಿ 1000 ಕಿ.ಮೀಗಳಷ್ಟು ಮೆಟ್ರೋ ಜಾಲ ಕಾಮಗಾರಿ ಜಾರಿಯಲ್ಲಿದೆ. ಮೆಟ್ರೋ ರೈಲು ಬಗ್ಗೆ ಆಧುನಿಕ ಚಿಂತನೆ ಇಲ್ಲ ಎನ್ನುವ ಕಾಲದಲ್ಲಿ ಎನ್ಡಿಎ ಸರ್ಕಾರ ಮೆಟ್ರೋ ನೀತಿ ಜಾರಿಗೆ ತಂದು ಪ್ರಮುಖ ನಗರಗಳಲ್ಲಿ ಮೆಟ್ರೋ ರೈಲು ಸೇವೆ ಲಭ್ಯವಾಗುವಂತೆ ಮಾಡುವಲ್ಲಿ ಸಫಲವಾಗಿದೆ'' ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.

ಅಹಮದಾಬಾದ್ ಮೆಟ್ರೋ ರೈಲು ಯೋಜನೆ ಎರಡನೇ ಹಂತವು 28. 25 ಕಿ.ಮೀ ದೂರದಾಗಿದ್ದು ,ಎರಡು ಕಾರಿಡಾರ್ ಹೊಂದಿದೆ. 22.8 ಉದ್ದದ ಮೊದಲ ಕಾರಿಡಾರ್ ಮೊಟೆರಾ ಸ್ಟೇಡಿಯಂನಿಂದ ಮಹಾತ್ಮ ಮಂದೀರ್ ತನಕ ಇದ್ದರೆ, ಎರಡನೇ ಕಾರಿಡಾರ್ 5.4 ಕಿ. ಮೀ ದೂರದಾಗಿದ್ದು, ಜಿಎನ್ ಎಲ್ ಯುನಿಂದ ಜಿಐಎಫ್ ಟಿ ನಗರ ತನಕ ಇರಲಿದೆ. ಒಟ್ಟಾರೆ, ಎರಡನೇ ಹಂತದ ಯೋಜನಾ ವೆಚ್ಚ 5,384 ಕೋಟಿ ರು ಆಗಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

ಏಕತೆಯ ಪ್ರತಿಮೆಗೆ ತಡೆರಹಿತ 8 ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ಏಕತೆಯ ಪ್ರತಿಮೆಗೆ ತಡೆರಹಿತ 8 ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ

ಸೂರತ್ ಮೆಟ್ರೋ ರೈಲು ಯೋಜನೆ ಒಟ್ಟು 40.35 ಕಿ.ಮೀ ದೂರದಾಗಿದ್ದು, ಇದು ಕೂಡಾ ಎರಡು ಕಾರಿಡಾರ್ ಹೊಂದಿದೆ. 21.61ಉದ್ದದ ಮೊದಲ ಕಾರಿಡಾರ್ ಸರ್ಥಾನಾ ದಿಂದ ಡ್ರೀಮ್ ಸಿಟಿ ತನಕ ಇದ್ದರೆ, ಎರಡನೇ ಕಾರಿಡಾರ್ 18.74 ಕಿ. ಮೀ ದೂರದಾಗಿದ್ದು, ಭೇಸಾನ್ ನಿಂದಸರೋಲಿ ತನಕ ಇರಲಿದೆ. ಒಟ್ಟಾರೆ, ಈ ಮೆಟ್ರೋ ರೈಲು ಯೋಜನಾ ವೆಚ್ಚ 12,020 ಕೋಟಿ ರು ಆಗಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ.

English summary
Prime Minister Narendra Modi performs the ground-breaking ceremony for the Ahmedabad Metro Rail Project Phase-II and the Surat Metro Rail Project via video conferencing on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X