ಗುಜರಾತ್ ಚುನಾವಣೆ; ತವರು ರಾಜ್ಯದಲ್ಲಿ ಮೋದಿ ರೋಡ್ ಶೋ

ಅಹಮದಾಬಾದ್, ಮಾರ್ಚ್ 09: ಭಾರತದಲ್ಲಿ 2022ರಲ್ಲಿ ಒಟ್ಟು 7 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಪಂಚರಾಜ್ಯಗಳ ಚುನಾವಣೆ ಪೂರ್ಣಗೊಂಡು ಗುರುವಾರ ಫಲಿತಾಂಶವು ಪ್ರಕಟವಾಗಿದೆ. ಡಿಸೆಂಬರ್‌ನಲ್ಲಿ ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಗುಜರಾತ್ ರಾಜ್ಯ ಬಿಜೆಪಿಯ ಭದ್ರಕೋಟೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತವರು ರಾಜ್ಯ. ನರೇಂದ್ರ ಮೋದಿ ಗುಜರಾತ್ ಚುನಾವಣೆ ತಯಾರಿ ಆರಂಭಿಸಿದ್ದು, ಶುಕ್ರವಾರ ರಾಜ್ಯದಲ್ಲಿ ಬೃಹತ್ ರೋಡ್ ಶೋ ನಡೆಸುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ತನಕ ತಿಂಗಳಿಗೆ ಒಮ್ಮೆ ಗುಜರಾತ್‌ಗೆ ಭೇಟಿ ನೀಡಲು ಅವರು ತೀರ್ಮಾನಿಸಿದ್ದಾರೆ. ಶುಕ್ರವಾರ ಎರಡು ದಿನಗಳ ಪ್ರವಾಸಕ್ಕಾಗಿ ನರೇಂದ್ರ ಮೋದಿ ಗುಜರಾತ್‌ಗೆ ಆಗಮಿಸಿದ್ದಾರೆ.

ಶುಕ್ರವಾರ ಅಹಮದಾಬಾದ್‌ಗೆ ಆಗಮಿಸಿದ ನರೇಂದ್ರ ಮೋದಿ ವಿಮಾನ ನಿಲ್ದಾಣದಿಂದ ಬಿಜೆಪಿ ಕಚೇರಿಯ ತನಕ 9 ಕಿ. ಮೀ. ರೋಡ್ ಶೋ ನಡೆಸಿದರು. ಈ ಮೂಲಕ ತಮ್ಮ ಎರಡು ದಿನಗಳ ಗುಜರಾತ್ ಪ್ರವಾಸ ಆರಂಭಿಸಿದರು.

ಮೋದಿ ಮೊದಲ ರೋಡ್ ಶೋ

ಮೋದಿ ಮೊದಲ ರೋಡ್ ಶೋ

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಗುಜರಾತ್ ಬಿಜೆಪಿ ಕಚೇರಿ ತನಕ ನಡೆದ 9 ಕಿ. ಮೀ. ರೋಡ್ ಶೋನಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ನೆಚ್ಚಿನ ನಾಯಕನಿಗೆ ಹೂವಿನ ಸ್ವಾಗತ ಕೋರಿದರು. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ರೋಡ್ ಶೋ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಆಯೋಜನೆ

ಬಿಜೆಪಿ ರಾಜ್ಯ ಘಟಕದ ಆಯೋಜನೆ

ಬಿಜೆಪಿ ರಾಜ್ಯ ಘಟಕದ ಆಯೋಜನೆ
ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಶುಕ್ರವಾರ ಆಗಮಿಸಿದರು. ಬಿಜೆಪಿ ರಾಜ್ಯ ಘಟಕ ಮೋದಿ ರೋಡ್ ಶೋ ಆಯೋಜನೆ ಮಾಡಿತ್ತು. ರೋಡ್ ಶೋನಲ್ಲಿ ಲಕ್ಷಾಂತರ ಜನರ ಜೊತೆ 1000 ಕಲಾವಿದರು ಸಹ ಪಾಲ್ಗೊಂಡಿದ್ದರು.

ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಎನ್‌ಜಿಓಗಳ ಸದಸ್ಯರ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು. ರೋಡ್ ಶೋ ಬಳಿಕ ಗಾಂಧಿ ನಗರದ ಪಕ್ಷದ ಕಚೇರಿಯಲ್ಲಿ ಮೋದಿ ಪದಾಧಿಕಾರಿಗಳ ಸಭೆಯನ್ನು ನಡೆಸಿದರು.

ಸಂಜೆ ನರೇಂದ್ರ ಮೋದಿ ಪಂಚಾಯತ್ ರಾಜ್ ಪ್ರತಿನಿಧಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 75 ಸಾವಿರ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮಾವೇಶದಲ್ಲಿ ಮೋದಿ ಭಾಗಿ

ಸಮಾವೇಶದಲ್ಲಿ ಮೋದಿ ಭಾಗಿ

ಗುಜರಾತ್ ರಾಜ್ಯ 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಒಳಗೊಂಡಿದೆ. 33 ಜಿಲ್ಲಾ ಪಂಚಾಯಿತಿ, 248 ತಾಲೂಕು ಪಂಚಾಯಿತಿ ಮತ್ತು 14,500ಕ್ಕಿಂತ ಹೆಚ್ಚಿನ ಗ್ರಾಮ ಪಂಚಾಯಿತಿಗಳಿವೆ. 'ಗುಜರಾತ್ ಪಂಚಾಯತ್ ಮಹಾಸಮ್ಮೇಳನ: ಆಪ್ನು ಗಾವ್, ಆಪ್ನು ಗೌರವ್' ಧ್ಯೇಯವಾಕ್ಯದೊಂದಿಗೆ ಸಮಾವೇಶ ನಡೆಯಲಿದ್ದು, ಮೂರು ಪಂಚಾಯಿತಿಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ವಿವಿಧ ಕಾರ್ಯಕ್ರಮಗಳು

ವಿವಿಧ ಕಾರ್ಯಕ್ರಮಗಳು

ಎರಡು ದಿನಗಳ ಗುಜರಾತ್‌ ಭೇಟಿ ವೇಳೆ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ವಾರ್ಷಿಕ ಕ್ರೀಡಾ ಉತ್ಸವ ಖೇಲ್ ಮುಕುಂಬ್ ಉದ್ಘಾಟಿಸಲಿದ್ದಾರೆ. ಅಲ್ಲದೇ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಉದ್ದೇಶಿಸಿ ಮಾತನಾಡಲಿದ್ದಾರೆ.

ಶನಿವಾರ ಮತ್ತೆ ರೋಡ್ ಶೋ

ಶನಿವಾರ ಮತ್ತೆ ರೋಡ್ ಶೋ

ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರದಿಂದ ದೆಹಗಾಮ್ ತನಕ ರೋಡ್ ಶೋ ನಡೆಸಲಿದ್ದಾರೆ. ಬಳಿಕ ರಕ್ಷಾ ಶಕ್ತಿ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಅಹಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+