ಎಲ್ಲ ಭಾರತೀಯರ ಹೆಸರನ್ನೂ 'ರಾಮ' ಎಂದು ಬದಲಿಸಿ: ಹಾರ್ದಿಕ್ ಪಟೇಲ್

Recommended Video

      ಎಲ್ಲ ಭಾರತೀಯರನ್ನು ಶ್ರೀ ರಾಮ ಎಂದು ಕರೆದುಬಿಡಿ..! | Oneindia Kannada

      ಅಹ್ಮದಾಬಾದ್, ನವೆಂಬರ್ 15: ಹೆಸರು ಬದಲಿಸುವ ಹೊಸ ಅಭಿಯಾನ ಆರಂಭಿಸಿರುವ ಬಿಜೆಪಿ ನಡೆಯನ್ನು ತೀವ್ರವಾಗಿ ಖಂಡಿಸಿರುವ ಪಾಟೀದಾರ್ ಅನಾಮತ್ ಆಂದೋಲನ ಸಮಿತಿ ಮುಖಂಡ ಹಾರ್ದಿಕ್ ಪಟೇಲ್, 'ಎಲ್ಲಾ ಭಾರತೀಯರ ಹೆಸರನ್ನೂ ರಾಮ ಎಂದು ಬದಲಿಸಿ' ಎಂದು ಅಣಕಿಸಿದ್ದಾರೆ.

      'ಹೆಸರು ಬದಲಿಸುವುದರಿಂದ ಈ ದೇಶ ಶ್ರೀಮಂತವಾಗುತ್ತದೆ ಎಂದಾದರೆ, ಈ ದೇಶದ 125 ಕೋಟಿ ಜನರ ಹೆಸರನ್ನೂ 'ರಾಮ' ಎಂದು ಬದಲಿಸಿ' ಎಂದು ಹಾರ್ದಿಕ್ ಪಟೇಲ್ ಬಿಜೆಪಿಗೆ ಸವಾಲೆಸೆದಿದ್ದಾರೆ.

      "ಈ ದೇಶದಲ್ಲಿ ನಿರುದ್ಯೋಗ, ರೈತರ ಸಮಸ್ಯೆ ಎಲ್ಲವೂ ಇರುವಾಗ ಅವರಿಗೆ(ಬಿಜೆಪಿ ಸರ್ಕಾರಕ್ಕೆ) ಹೆಸರು ಬದಲಿಸುವುದು, ಮೂರ್ತಿ ಸ್ಥಾಪಿಸುವುದೇ ಕೆಲಸವಾಗಿದೆ" ಎಂದು ಹಾರ್ದಿಕ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.

      Name all Indians Ram: Hardik Patel

      ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದೂ, ಫೈಜಾಬಾದ್ ಅನ್ನು ಅಯೋಧ್ಯೆ ಎಂದೂ ಮರುನಾಮಕರಣ ಮಾಡಿದ್ದರು. ಅಲ್ಲದೆ ಗುಜರಾತ್ ರಾಜಧಾನಿ ಅಹ್ಮದಾಬಾದ್ ಅನ್ನೂ ಕರ್ಣವತಿ ಎಂದು ಬದಲಿಸುವ ಬಗ್ಗೆಯೂ ಪ್ರಸ್ತಾಪವಿದೆ. ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಟೇಲ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+