India
  • search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದಲ್ಲಿ ಇಂಧನ ಬೆಲೆ ಏರಿಕೆ; ಕಚ್ಚಾ ತೈಲ ಬೆಲೆಯತ್ತ ಬೊಟ್ಟು ಮಾಡಿದ ಸಚಿವರು

|
Google Oneindia Kannada News

ಅಹಮದಾಬಾದ್, ಜೂನ್ 07: ದೇಶದಲ್ಲಿ ಇಂಧನ ಬೆಲೆ ನಿರಂತರ ಏರಿಕೆ ಕಂಡಿದ್ದು, ಈ ಕುರಿತು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿರುವುದು ದೇಶದಲ್ಲಿ ಇಂಧನ ದರ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ಭಾರಿ ಏರಿಕೆ, ಎಲ್ಲಿ ಅತ್ಯಧಿಕ ದರ?ಪೆಟ್ರೋಲ್, ಡೀಸೆಲ್ ದರ ಭಾರಿ ಏರಿಕೆ, ಎಲ್ಲಿ ಅತ್ಯಧಿಕ ದರ?

ಜೂನ್ ತಿಂಗಳಿನ ಆರಂಭದಿಂದ ದೇಶದ ಇಂಧನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಸರಕು ಮತ್ತು ಸೇವಾ ತೆರಿಗೆಯಡಿಯಲ್ಲಿ ಇಂಧನವನ್ನು ತರಬೇಕೇ ಬೇಡವೇ ಎಂಬುದನ್ನು ಜೆಎಸ್‌ಟಿ ಕೌನ್ಸಿಲ್ ನಿರ್ಧರಿಸಬೇಕಿದೆ ಎಂದಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 70 ಡಾಲರ್ ಆಗಿದೆ. ಇದು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಭಾರತ ತನ್ನ 80% ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಇಲ್ಲಿನ ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.

ಜಿಎಸ್‌ಟಿ ಅಡಿಯಲ್ಲಿ ಇಂಧನವನ್ನು ಸೇರಿಸಿದರೆ ಬೆಲೆ ಏರಿಕೆಗೆ ಕಡಿವಾಣ ಹಾಕಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ಸರಕುಗಳ ಬೆಲೆ ಜಾಗತಿಕ ಮಾರುಕಟ್ಟೆಯಿಂದ ನಿಯಂತ್ರಿಸಲ್ಪಡುತ್ತವೆ. ಇಂಧನವನ್ನು ಜಿಎಸ್‌ಟಿಯಡಿಯಲ್ಲಿ ತರಬೇಕು ಎನ್ನುವ ಅಭಿಪ್ರಾಯ ನನ್ನದು. ಆದರೆ ಜಿಎಸ್‌ಟಿ ಕೌನ್ಸಿಲ್ ಸದಸ್ಯರು ಒಮ್ಮತಕ್ಕೆ ಬಂದಾಗ ಇದು ಸಾಧ್ಯವಾಗುತ್ತದೆ. ಇದರ ಕುರಿತು ಕೌನ್ಸಿಲ್ ಸಮಗ್ರ ನಿರ್ಧಾರಕ್ಕೆ ಬರಬೇಕಿದೆ" ಎಂದು ತಿಳಿಸಿದ್ದಾರೆ.

ಮೇ 4ರಿಂದ ಇಲ್ಲಿ ತನಕ ಒಟ್ಟಾರೆ 21ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ. ಒಂದು ತಿಂಗಳಲ್ಲಿ ಪೆಟ್ರೋಲ್ 5 ರೂ ಹಾಗೂ ಡೀಸೆಲ್ 6 ರೂ ನಷ್ಟು ಏರಿಕೆಯಾಗಿದೆ. ಸೋಮವಾರ, ಜೂನ್ 07 ರಂದು ಕೂಡ ತೈಲ ಬೆಲೆಯಲ್ಲಿ ಪರಿಷ್ಕರಣೆಯಾಗಿದ್ದು, ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಏರಿಸಿವೆ.

ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ, ಪೆಟ್ರೋಲ್ 101.47 ರೂ ಪ್ರತಿ ಲೀಟರ್, ಡೀಸೆಲ್ 93.64 ರೂ ಪ್ರತಿ ಲೀಟರ್‌ನಷ್ಟಿದೆ ಎಂದು ಇಂಡಿಯನ್ ಆಯಿಲ್ ಸಂಸ್ಥೆ ಪ್ರಕಟಿಸಿದೆ. ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಅಲ್ಲದೇ ಮಹಾರಾಷ್ಟ್ರದ ಕೆಲ ಪಟ್ಟಣಗಳಲ್ಲೂ ಪೆಟ್ರೋಲ್ ಬೆಲೆ 100 ರೂ ಗಡಿ ದಾಟಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಪೆಟ್ರೋಲ್ ಬೆಲೆ ದೇಶದಲ್ಲೇ ಅತ್ಯಧಿಕ 105.33 ರೂ ನಷ್ಟಿದೆ, ಡೀಸೆಲ್ ಬೆಲೆ 98.20 ರೂ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕೊಂಚ ಕುಸಿತ ಕಂಡು 71.46 ಯುಎಸ್ ಡಾಲರ್(1 USD=72.90ರು) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

English summary
Union Petroleum and Natural Gas Minister Dharmendra Pradhan blamed the recent surges in global crude oil prices for the fuel price hike in India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X