ಗುಜರಾತ್‌ನಲ್ಲಿ ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ: 5 ಮಂದಿ ಸಾವು

ನವದೆಹಲಿ, ಜೂನ್ 3: ಗುಜರಾತ್‌ನ ದಹೇಜ್‌ನಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದು ಹೊತ್ತಿ ಉರಿದು ಐವರು ಮೃತಪಟ್ಟಿದ್ದು, 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದವು. ಕಾರ್ಖಾನೆಯ ಹತ್ತಿರದಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆ.ಕಾರ್ಖಾನೆಯಲ್ಲಿ ಉಂಟಾದ ಬೆಂಕಿಯಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು.

ಸುಮಾರು 35ರಿಂದ 40 ಕೆಲಸಗಾರರಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ಭಾರುಚ್‌ನಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕಲೆಕ್ಟರ್ ಎಂಡಿ ಮೋಡಿಯಾ ತಿಳಿಸಿದ್ದಾರೆ.

Major Blast In Chemical Factory In Gujarats Dahej, 40 Workers Injured

ಬೆಂಕಿಯು ಇಡೀ ಕಾರ್ಖಾನೆಯನ್ನೇ ಆವರಿಸಿಕೊಂಡಿತ್ತು. ಎರಡು ಹಳ್ಳಿಯ ಜನರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಕಾರ್ಖಾನೆಯು ಯಶಸ್ವಿ ರಸಾಯನ್ ಪ್ರೈವೈಡ್ ಲಿಮಿಟೆಡ್‌ಗೆ ಸೇರಿದ್ದಾಗಿದೆ. ಇದರಲ್ಲಿ 15 ರೀತಿಯ ರಾಸಾಯನಿಕಗಳನ್ನು ತಯಾರಿಸಲಾಗುತ್ತದೆ.

ಆಂಧ್ರಪ್ರದೇಶದ ಎಲ್‌ಜಿ ಪಾಲಿಮರ್‌ ಕಾರ್ಖಾನೆಯಲ್ಲಿ ನಡೆದ ಅನಿಲ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು. 200ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+